Actor Rishi won the villain award for acting in the web series "Shaitan".

“ಶೈತನ್ ” ವೆಬ್ ಸೀರಿಸ್ ನಟನೆಗೆ ನಟ ರಿಷಿಗೆ ಖಳನಟ ಪ್ರಶಸ್ತಿ - CineNewsKannada.com

“ಶೈತನ್ ” ವೆಬ್ ಸೀರಿಸ್ ನಟನೆಗೆ ನಟ ರಿಷಿಗೆ ಖಳನಟ ಪ್ರಶಸ್ತಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ತಾರೆ ರಿಷಿ..ಅಪರೇಷನ್ ಅಲಮೇಲಮ್ಮ, ಕವಲುದಾರಿ, ನೋಡಿ ಸ್ವಾಮಿ ನಾವು ಇರೋದು ಹೀಗೆ ಪ್ರತಿ ಸಿನಿಮಾದಲ್ಲೊಂದು ಹೊಸ ಬಗೆಯ ಪಾತ್ರದ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿಕೊಂಡು ಬರ್ತಿದ್ದಾರೆ. ಶೈತನ್ ವೆಬ್ ಸೀರೀಸ್ ಮೂಲಕ ಒಟಿಟಿ ಪ್ರಪಂಚಕ್ಕೂ ಪರಿಚಿತರಾಗಿದ್ದ ರಿಷಿ ಇದೇ ಸೀರಿಸ್ ಗಾಗಿ ಅತ್ಯುತ್ತಮ ಖಳನಾಯಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕಿರುತೆರೆ ಹಾಗೂ ಸಿನಿಮಾ ರಂಗಕ್ಕೆ ಪ್ರಶಸ್ತಿಗಳಿರುವಂತೆ ಒಟಿಟಿ ವೇದಿಕೆಗೂ ಪ್ರಶಸ್ತಿ ಇದೆ. ಪ್ರತಿ ವರ್ಷ ಬಹಳ ಅದ್ಧೂರಿಯಾಗಿ ನಡೆಯುವ ಈ ಅವಾರ್ಡ್ ಕಾರ್ಯಕ್ರಮ ಮೊನ್ನೆ ಮುಂಬೈನಲ್ಲಿ ನೆರವೇರಿದೆ. ಇದೇ ವೇದಿಕೆಯಲ್ಲಿ ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಕಲಾವಿದರ ಸಮ್ಮುಖದಲ್ಲಿ ರಿಷಿ ಗಾಗಿ ಅತ್ಯುತ್ತಮ ಖಳನಾಯಕ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಹಾಗ್ ನೋಡಿದ್ರೆ ಈ ವರ್ಷ ಬಹಳಷ್ಟು ವೆಬ್ ಸೀರಿಸ್ ಗಳು ಬಿಡುಗಡೆಯಾಗಿವೆ. ಆ ಎಲ್ಲಾ ವೆಬ್ ಸೀರಿಸ್ ಹಿಂದಿಕ್ಕಿ ಸೈತನ್ ಜೂರಿಗಳ ಮನಗೆದ್ದಿದೆ. ರಿಷಿ ಅಭಿನಯವೂ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ನೆಗೆಟಿವ್ ರೋಲ್ ನಲ್ಲಿ ಅಬ್ಬರಿಸಿ ಬೊಬ್ಬಿರಿಸಿದ್ದ ಕನ್ನಡದ ತಾರೆ ರಿಷಿ ಅವರಿಗೆ 2023 ಒಟಿಟಿ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಂದಿದೆ.

ತೆಲುಗಿನಲ್ಲಿ ಬ್ಯುಸಿಯಾದ ರಿಷಿ

ಶೈತನ್ ವೆಬ್ ಸೀರಿಸ್ ಮೂಲಕ ತೆಲುಗು ಪ್ರೇಕ್ಷಕರಿಗೆ ರಿಷಿ ಹತ್ತಿರವಾಗಿದ್ದಾರೆ. ಅವರ ಸಹಜ ನಟನೆ ಗಮನಸೆಳೆದಿದ್ದು, ಹೊಸ ಹೊಸ ಅವಕಾಶಗಳು ಅವರನ್ನು ಅರಸಿ ಬರ್ತಿವೆ. ಅದರ ಮುಂದುವರೆದ ಭಾಗ ಎನ್ನುವಂತೆ ತೆಲುಗಿನಲ್ಲಿ ಹೊಸ ಚಿತ್ರವೊಂದರಲ್ಲಿ ರಿಷಿ ನಟಿಸುತ್ತಿದ್ದಾರೆ. ಹೈದ್ರಾಬಾದ್ ನಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ನೈಜ ಘಟನೆಯ ಪ್ರೇರೆಪಿತ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಿಷಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಒಂದೊಳ್ಳೆ ಬಜೆಟ್ ನಲ್ಲಿ ತಯಾರಾಗ್ತಿರುವ ಈ ಸಿನಿಮಾ ಗೋಪಿ ವಿಹಾನಿ ಎಂಬುವವರು ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಹೆಜ್ಜೆ.. ಬಯೋಪಾಟಿ ಸಿನಿಮಾಗಳಿಗೆ ಬರಹಗಾರರಾಗಿ ದುಡಿದಿರುವ ಗೋಪಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ ಇಳಿದಿದ್ದಾರೆ.

ತೆಲುಗಿನಲ್ಲಿ ಒಂದಿಷ್ಟು ವರ್ಷಗಳ ಕಾಲ ಮಾರ್ಕೆಟಿಂಗ್ ಹಾಗೂ ಪಿಆರ್ ಆಗಿ ಕೆಲಸ ಮಾಡಿರುವ ಅನುಭವಿರುವ ರವಿ ಪನಸ ತಮ್ಮದೇ ರವಿ ಪಸನ ಫಿಲ್ಮಂ ಕಾರ್ಪೊರೇಷನ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ತಿರುವೀರ್, ಫರಿಯಾ ಅಬ್ದುಲ್ಲಾ, ರವೀಂದರ್ ವಿಜಯ್, ಶೆಲ್ಲಿ ಕಿಶೋರ್, ಕಾಲಕೇಯ ಪ್ರಭಾಕರ್, ಚಿರಾಗ್ ಜಾನಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹೊಸ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಿಷಿ ರಾಮನ ಅವತಾರ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ‘ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ಸ್ ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin