Actor Sriman enters the role of "Shishupala" in the film "Just Married"

“ಜಸ್ಟ್ ಮ್ಯಾರೀಡ್” ಚಿತ್ರದ “ಶಿಶುಪಾಲ” ಪಾತ್ರದಲ್ಲಿ ನಟ ಶ್ರೀಮನ್ ಎಂಟ್ರಿ - CineNewsKannada.com

“ಜಸ್ಟ್ ಮ್ಯಾರೀಡ್” ಚಿತ್ರದ “ಶಿಶುಪಾಲ” ಪಾತ್ರದಲ್ಲಿ ನಟ ಶ್ರೀಮನ್ ಎಂಟ್ರಿ

ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್.ಬಾಬಿ ನಿರ್ಮಿಸಿ, ಸಿ.ಆರ್.ಬಾಬಿ ಬಾರಿಗೆ ನಿರ್ದೇಶಿಸಿರುವ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ ಕನ್ನಡ ಹಾಗೂ ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.

ತೆಲುಗು, ತಮಿಳು ಭಾಷೆಗಳ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಜನಮನಸೂರೆಗೊಂಡಿರುವ ದಕ್ಷಿಣ ಭಾರತದ ಜನಪ್ರಿಯ ನಟ ಶ್ರೀಮನ್ ಸಹ “ಜಸ್ಟ್ ಮ್ಯಾರೀಡ್” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಶಿಶುಪಾಲ” ಪಾತ್ರದಲ್ಲಿ ಶ್ರೀಮನ್ ಅವರು ಅಭಿನಯಿಸಿದ್ದು ಅವರ ಪಾತ್ರ ಪರಿಚಯದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಇತ್ತೀಚೆಗಷ್ಟೇ ಡೈನಾಮಿಕ್ ಸ್ಟಾರ್ ದೇವರಾe ಪಾತ್ರದ ಕುರಿತು ಸಹ ಚಿತ್ರತಂಡ ಮಾಹಿತಿ ನೀಡಿತ್ತು. ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ಅನುಭವಿ ಕಲಾವಿದರು ಸಂಗಮದಲ್ಲಿ ಮೂಡಿಬಂದಿರುವ “ಜಸ್ಟ್ ಮ್ಯಾರೀಡ್” ಚಿತ್ರವನ್ನು ಆದಷ್ಟು ಬೇಗ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin