The much-awaited "X and Y" directed and starring D. Satya Prakash will hit the screens on June 26th.

ಡಿ.ಸತ್ಯಪ್ರಕಾಶ್ ನಿರ್ದೇಶನ, ನಟನೆಯ ಬಹು ನಿರೀಕ್ಷಿತ “ಎಕ್ಸ್ ಅಂಡ್ ವೈ” ಜೂನ್ 26ಕ್ಕೆ ತೆರೆಗೆ - CineNewsKannada.com

ಡಿ.ಸತ್ಯಪ್ರಕಾಶ್ ನಿರ್ದೇಶನ, ನಟನೆಯ ಬಹು ನಿರೀಕ್ಷಿತ “ಎಕ್ಸ್ ಅಂಡ್ ವೈ” ಜೂನ್ 26ಕ್ಕೆ ತೆರೆಗೆ

“ರಾಮಾ ರಾಮಾ ರೇ” ಖ್ಯಾತಿಯ ಡಿ.ಸತ್ಯಪ್ರಕಾಶ್ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿರುವ ಬಹು ನಿರೀಕ್ಷಿತ “”ಎಕ್ಸ್ ಅಂಡ್ ವೈ” ಚಿತ್ರ ಜೂನ್ 26 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

“ರಾಮಾ ರಾಮಾ ರೇ “, “ಒಂದಲ್ಲಾ ಎರಡಲ್ಲಾ” ಮತ್ತು “ಮ್ಯಾನ್ ಆಫ್ ದಿ ಮ್ಯಾಚ್ ” ಚಿತ್ರಗಳನ್ನು ನಿರ್ದೇಶಿಸಿರುವ ಡಿ ಸತ್ಯಪ್ರಕಾಶ್ ಅವರಿಗೆ “ಎಕ್ಸ್ ಅಂಡ್ ವೈ” ನಾಲ್ಕನೇ ನಿರ್ದೇಶನದ ಚಿತ್ರ. ಈಗಾಗಲೇ ಪೆÇೀಸ್ಟರ್, ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನರನ್ನು ತಲುಪಿರುವ “”ಎಕ್ಸ್ ಅಂಡ್ ವೈ” ಚಿತ್ರ ಈ ವಾರ ತೆರೆಗೆ ಬರುತ್ತಿದ್ದು, ಈ ಚಿತ್ರ ಕೂಡ ಪ್ರೇಕ್ಷಕರ ಮನ ಗೆಲ್ಲಲ್ಲಿದೆ ಎಂಬ ಅಭಿಪ್ರಾಯ ಚಿತ್ರತಂಡದ್ದು.

ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಹಾಗೂ ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ. ಸತ್ಯ ಪಿಕ್ಚರ್ಸ್ ನಿರ್ಮಾಣದ “ಎಕ್ಸ್ ಅಂಡ್ ವೈ” ಚಿತ್ರದ ತಾರಾಬಳಗದಲ್ಲಿ ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ , ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಮುಂತಾದವರಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin