Actress Deepika Das started a new innings with Deepak
ದೀಪಕ್ ಜೊತೆ ಹೊಸ ಇನ್ನಿಂಗ್ಸ್ ಆರಂಭಿಸಿದ ನಟಿ ದೀಪಿಕಾ ದಾಸ್

ಕನ್ನಡದ ಸಿನಿಮಾ, ಕಿರುತೆರೆ ಮತ್ತು ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡ ನಟಿ ದೀಪಿಕಾ ದಾಸ್ ಹಾಗೂ ದೀಪಕ್ ಅವರ ವಿವಾಹ ಕಳೆದವಾರ ನೆರವೇರಿದೆ. ಈ ಮೂಲಕ ಜೀವನದ ಹೊಸ ಇನ್ಸಿಂಗ್ಸ್ ಆರಂಭಿಸಿದ್ದಾರೆ.

ಬೆಂಗಳೂರು ನಗರದ ಖಾಸಗಿ ರೆಸಾರ್ಟ್ ನಲ್ಲಿ ದೀಪಿಕಾ ದಾಸ್ ಹಾಗೂ ದೀಪಕ್ ದಂಪತಿಯ ಆರತಕ್ಷತೆ ಹಾಗೂ ಬೀಗರೂಟ ಅದ್ದೂರಿಯಾಗಿ ನಡೆಯಿತು.

ಅನುಪಮ ಗೌಡ, ವಾಸುಕಿ ವೈಭವ್, ದಿವ್ಯ ಉರುಡಗ, ಕಿಶನ್, ನೀತು, ಪ್ರಿಯಾಂಕ ಮುಂತಾದ ಮಿತ್ರರು, ಆತ್ಮೀಯರು ಹಾಗೂ ಬಂಧು ಬಳಗದವರು ಆರತಕ್ಷತೆಗೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.