director Anil Kumar action cut for "Banaras" hero Zaid Khan

“ಬನಾರಸ್” ನಾಯಕ ಝೈದ್ ಖಾನ್‍ಗೆ ಅನಿಲ್ ಕುಮಾರ್ ಆಕ್ಷನ್ ಕಟ್ - CineNewsKannada.com

“ಬನಾರಸ್” ನಾಯಕ ಝೈದ್ ಖಾನ್‍ಗೆ ಅನಿಲ್ ಕುಮಾರ್ ಆಕ್ಷನ್ ಕಟ್

ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಚಿತ್ರ “ಉಪಾಧ್ಯಕ್ಷ”. ಈ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅವರ ಮುಂದಿನ ಚಿತ್ರದ ತಯಾರಿ ಬಿರುಸಿನಿಂದ ಸಾಗುತ್ತಿದ್ದು, “ಬನಾರಸ್” ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಝೈದ್ ಖಾನ್ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ “ಕೆಂಪೇಗೌಡ” ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನಿಲ್ ಕುಮಾರ್ ಸುಮಂತ್ – ರಾಧಿಕಾ ಪಂಡಿತ್ ಅಭಿನಯದ “ದಿಲ್ ವಾಲ” ಚಿತ್ರದ ಮೂಲಕ ನಿರ್ದೇಶಕರಾದರು. ಮಾಲಾಶ್ರೀ ಅವರು ನಾಯಕಿಯಾಗಿ ನಟಿಸಿರುವ “ಶಕ್ತಿ ” ಹಾಗೂ ಶರಣ್ ನಟನೆಯ “ರ್ಯಾಂಬೊ 2” ಚಿತ್ರದ ನಿರ್ದೇಶಕರು ಸಹ ಅನಿಲ್ ಕುಮಾರ್ ಅವರ ಇತ್ತೀಚಿಗೆ ತೆರೆಕಂಡ ಚಿಕ್ಕಣ್ಣ ಅಭಿನಯದ “ಉಪಾಧ್ಯಕ್ಷ” ಸಹ ದೊಡ್ಡಮಟ್ಟದ ಯಶಸ್ಸು ಕಂಡಿದೆ.

“ಉಪಾಧ್ಯಕ್ಷ” ನಂತರ ಅನಿಲ್ ಕುಮಾರ್ ನಿರ್ದೇಶನದ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅನಿಲ್ ಕುಮಾರ್ ಹಾಗೂ ಝೈದ್ ಖಾನ್ ಕಾಂಬಿನೇಶನ್ ನಲ್ಲಿ ನೂತನ ಚಿತ್ರವೊಂದು ಮೂಡಿಬರಲಿದೆ.

“ಬನಾರಸ್” ಚಿತ್ರದ ನಂತರ ಸಾಕಷ್ಟು ಕಥೆ ಕೇಳಿರುವ ಝೈದ್ ಖಾನ್ ಅವರು ಈ ಚಿತ್ರದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಕ್ಲಾಸ್ ಅಂಡ್ ಮಾಸ್ ಇಬ್ಬರು ಆಡಿಯನ್ಸ್ ಇಷ್ಟಪಡುವ ಕಥೆಯಿದು. ಹೆಸರಾಂತ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನುರಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರದಲ್ಲಿರಲಿದೆ. ತಾಂತ್ರಿಕವರ್ಗ ಹಾಗೂ ತಾರಾಬಳಗದ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin