ಕ್ರಿಕೆಟರ್ ಪೃಥ್ವಿ ಶಾ ಜೊತೆ ನಟಿ ನಿಮಿಕಾ ರತ್ನಾಕರ್ ಕ್ರಿಸ್‍ಮಸ್ ಸಂಭ್ರಮ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕ್ರಾಂತಿ” ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದ ನಟಿ ನಿಮಿಕಾ ರತ್ನಾಕರ್ ಇದೀಗ ಕ್ರಿಸ್ ಮಸ್ ವಿಷಯವಾಗಿ ಸುದ್ದಿಯಲ್ಲಿದ್ದಾರೆ.
ನಟಿ ನಿಮಿಕಾ ರತ್ನಾಕರ್. ಬಣ್ಣದ ಜಗತ್ತಿನ ಭಾಗವಾಗಿದ್ದುಕೊಂಡು, ಸದಾ ಕ್ರಿಯಾಶೀಲವಾಗಿರುವ ನಿಮಿಕಾ ಇದೀಗ ಖ್ಯಾತ ಕ್ರಿಕೆಟ್ ಆಟಗಾರ ಪೃಥ್ವಿ ಶಾರನ್ನು ಭೇಟಿಯಾಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಕ್ರಿಸ್ ಮಸ್ ಹಬ್ಬ!
ನಿಮಿಕಾ ರತ್ನಾಕರ್ ತಮ್ಮಿಬ್ಬರು ಸಹೋದರರೊಂದಿಗೆ ಕ್ರಿಕೆಟರ್ ಪೃಥ್ವಿ ಶಾರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪೃಥ್ವಿ ಜೊತೆಗೂಡಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಮಾಡೆಲಿಂಗ್ ಕ್ರೇತ್ರದಲ್ಲಿ ಮಿಂಚುತ್ತಾ, ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ಕಂಡುಕೊಂಡಿರುವವರು ನಿಮಿಕಾ ರತ್ನಾಕರ್. ಮಂಗಳೂರು ಮೂಲದ ನಿಮಿಕಾ ಸಿನಿಮಾದಾಚೆಗೂ ಒಂದಷ್ಟು ಸೆಲೆಬ್ರಿಟಿಗಳ ಸ್ನೇಹ ವಲಯದಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೊಬ್ಬರಾಗಿರುವ ಪೃಥ್ವಿ ಶಾ ಜೊತೆಗಿನ ಕ್ರಿಸ್ ಮಸ್ ಆಚರಣೆ ನಿಮಿಕಾ ಖುಷಿಗೆ ಮತ್ತಷ್ಟು ಇಂಬು ನೀಡುವಂತಾಗಿದೆ