Aditya Shashikumar starrer "Kaadadi" movie lyrical video released

ಆದಿತ್ಯ ಶಶಿಕುಮಾರ್ ನಟನೆಯ “ಕಾದಾಡಿ” ಚಿತ್ರದ ಐಟಂ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ - CineNewsKannada.com

ಆದಿತ್ಯ ಶಶಿಕುಮಾರ್ ನಟನೆಯ “ಕಾದಾಡಿ” ಚಿತ್ರದ ಐಟಂ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಈಗ ಆದಿತ್ಯ ಶಶಿಕುಮಾರ್ ಅಂತ ಹೆಸರು ಬದಲಾಯಿಸಿಕೊಂಡು ಚಿತ್ರರಂಗದಲ್ಲಿ ‘ ಕಾದಾಡಿ” ಚಿತ್ರದ ಮೂಲಕ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

‘ಕಾದಾಡಿ’ ಚಿತ್ರ ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಮೂರನೇ ಹಾಡು ಐಟಂ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಕೃಷ್ಣ ಸಾಹಿತ್ಯದ ‘ನೂರು ಪುಟದ ಜೀವನ, ಒಂದು ಏಳೆಯ ಕಾಗದ. ಬರೆದುಕೋ ನಂದೇ ಜೀವನ, ತಪ್ಪು ತಿಳಿದುಕೋ, ತಿಳಿದ ಮೇಲೆ ಮರೆತು ತಪ್ಪು ಮಾಡಿದರೆ ಜನ್ಮ ಪಾವನ. ದಂ ಕಿರಿಕಿರಿ, ಗುಂಡಲ್ಲೂ ಕಿರಿಕಿರಿ’ ಹಾಡಿಗೆ ಅನನ್ಯ ಭಟ್ ಧ್ವನಿಯಾಗಿದ್ದು, ನಾಯಕನೊಂದಿಗೆ ಬಾಂಬೆ ನಟಿ ಸೋನಿ ಚೇರಿಸ್ಟ ಹೆಜ್ಜೆ ಹಾಕಿದ್ದಾರೆ.

ತ್ಯಾಗಮಯವಾಗುತ್ತಿರುವ ಜನರ ಜೀವನವು ದಿನದ ಅಂತ್ಯದಲ್ಲಿ ಪ್ರತಿಯೊಬ್ಬರು ತ್ಯಾಗಮಯಿರಾಗುತ್ತಾರೆ. ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಆಗಬೇಕು. ನಾವು ದಿನದಿಂದ ದಿನಕ್ಕೆ ಹೋರಾಟ ನಡೆಸುತ್ತಿದ್ದೆವೆ. ಇಂತಹ ಅಂಶಗಳನ್ನು ಥ್ರಿಲ್ಲರ್ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.

ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರು. ಉಳಿದಂತೆ ಪೆÇೀಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್ ಮನೋಹರ್, ಶ್ರವಣ್ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ.

ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಡಿ.ಯೋಗಿಪ್ರಸಾದ್, ಕಲೆ ಅರ್ಜುನ್‍ಸೂರಿಸೆಟ್ಟಿ, ಸಂಕಲನ ಪ್ರಕಾಶ್‍ತೋಟ, ನೃತ್ಯ ರಾಜ್‍ಪಿಡಿ-ರಾಜ್‍ಕೃಷ್ಣ, ಸಾಹಸ ಬಿ.ಎಲ್.ಸತೀಶ್-ವಿನ್‍ಚೇನ್‍ಆಂಜಿ-ಬಿಂಬಸಾರ-ರಾಮಕೃಷ್ಣ-ರಾಮಸುಂಕರ ಅವರದಾಗಿದೆ. ಗೋವಾ, ಚಿಕ್ಕಮಗಳೂರು, ಹೈದರಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಸಿನಿಮಾವು ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin