After "Bharjari", Druva Sarja-Rachita Ram pair up in "Criminal"

ಭರ್ಜರಿ ಬಳಿಕ “ಕ್ರಿಮಿನಲ್’ ನಲ್ಲಿ ಒಂದಾದ ದೃವ ಸರ್ಜಾ-ರಚಿತಾ ರಾಮ್ ಜೋಡಿ - CineNewsKannada.com

ಭರ್ಜರಿ ಬಳಿಕ “ಕ್ರಿಮಿನಲ್’ ನಲ್ಲಿ ಒಂದಾದ ದೃವ ಸರ್ಜಾ-ರಚಿತಾ ರಾಮ್ ಜೋಡಿ

ಭರ್ಜರಿ ಚಿತ್ರದ ಬಳಿಕ ಬರೋಬ್ಬರಿ 8 ವರ್ಷದ ನಂತರ ನಟ ದೃವ ಸರ್ಜಾ ಮತ್ತು ನಟಿ ರಚಿತಾ ರಾಮ್ “ಕ್ರಿಮಿನಲ್” ನಲ್ಲಿ ಮತ್ತೆ ಒಂದಾಗಿದ್ಧಾರೆ, ಅಂದಹಾಗೆ ಇವರಿಬ್ಬರು ನಟಿಸುತ್ತಿರುವ ಹೊಸ ಚಿತ್ರದ ಹೆಸರು “ಕ್ರಿಮಿನಲ್”. ಉತ್ತರ ಕರ್ನಾಟದಕ ಕಥೆ ಹೊಂದಿರುವ ಚಿತ್ರ ಸೇಟ್ಟೇರಿದ್ದು ದೃವ ಸರ್ಜಾ ರಗಡ್ ಲುಕ್‍ನಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಲು ಸಜ್ಜಾಗಿದ್ದಾರೆ

ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವಮಂತ್ರಾಲಯ ಮಂದಿರದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು ಧ್ರುವ ಸರ್ಜಾ ಏಳನೇ ಚಿತ್ರವಾಗಿದ್ದು. ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿರುವ ಸಿನಿಮಾ ನೈಜ ಘಟನೆ ಆಧರಿಸಿದೆ.

ದೇವರ ಮುಂದೆ ನಟ ದೃವ ಸರ್ಜಾ, ನಟಿ ರಚಿತಾರಾಮ್ ಜುಟ್ಟು ಹಿಡಿದು ಅಬ್ಬರಿಸುವ ದೃಶ್ಯದೊಂದಿಗೆ ಚಿತ್ರ ಆರಂಭವಾಗಿದ್ದು ಹಿರಿಯ ನಟಿ ತಾರಾ ಅನುರಾಧ ಸೇರಿದಂತೆ ಚಿತ್ರತಂಡ ಈ ಕ್ಷಣಕ್ಕೆ ಸಾಕ್ಷಿಯಾಯಿತು. ಚಿತ್ರದಲ್ಲಿ ಹಳ್ಳಿಹೈದನಾಗಿ ಶಿವನಾಗಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಪಾರ್ವತಿಯಾಗಿ ರಚಿತಾ ರಾಮ್ ಬಣ್ಣ ಹಚ್ಚಿದ್ದಾರೆ.

ನಿರ್ದೇಶಕ ರಾಜ್ ಗುರು ಮಾತನಾಡಿ ಕಥೆ ಹೇಳಿ ಧ್ರುವ ಸರ್ಜಾ ಒಕೆ ಮಾಡಿದರು. ಬಳಿಕ ಸೆಲ್ಫಿ ತೆಗೆದುಕೊಂಡೆ. ಸೆಲ್ಫಿ ನೋಡಿ ಖುಷಿ ಜೊತೆ ಭಯ ಶುರುವಾಯ್ತು. ಜವಾಬ್ದಾರಿ ಎಂಬ ಭಯ. ಉತ್ತರ ಕರ್ನಾಟಕದ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ. ದೊಡ್ಡ ಪ್ರೊಡಕ್ಷನ್ಸ್ ಕಂಪನಿ ನನಗೆ ಅವಕಾಶ ಕೊಟ್ಟಿದೆ. ಇದು ನನ್ನ ಎರಡನೇ ಸಿನಿಮಾ.ಈ ಚಿತ್ರಕ್ಕೆ ನಿಮ್ಮ ಸಪೋರ್ಟ್ ಇರಲಿ ಎಂದರು.

ನಿರ್ಮಾಪಕ ಮನೀಶ್ ಮಾತನಾಡಿ, ಧ್ರುವ ಸಿನಿಮಾ ನಿರ್ಮಾಣ ಮಾಡಿ ಎಂದಾಗ ನನಗೆ ಸರ್ ಪ್ರೈಸ್ ಆಯ್ತು. ನನ್ನ ಕನಸು ನನಸಾಗಿದೆ. ನಾನು ಕನ್ನಡ ಸಿನಿಮಾ ಮಾಡುತ್ತಿರುವುದು ಖುಷಿ ಆಗಿದೆ. ಎಂದು ಹೇಳಿದರು’

ಧ್ರುವ ಸರ್ಜಾ ಮಾತನಾಡಿ, ಉತ್ತರ ಕರ್ನಾಟಕ ಹಾವೇರಿಯ ಹಾನಗಲ್ ನಲ್ಲಿ ನಡೆದ ಪ್ರೇಮ ಕಥೆಯಾಧಾರಿತ ಸಿನಿಮಾ ಮಾಡ್ತಿದ್ದೀನಿ. ಶೇಕಡಾ 99 ಸ್ಟೋರಿ ಏನಿದೆ ಅದೇ ತರ ಶೂಟ್ ಮಾಡ್ತೀವಿ. ಭರ್ಜರಿಯಲ್ಲಿ ತಾಯಿ ಆದ ನಂತರ ತಾರಮ್ಮ ಮತ್ತೆ ಅಮ್ಮನಾಗಿ ಕಾಣಿಸಿಕೊಳ್ತಿದ್ದಾರೆ. ರಚಿತಾ ಭರ್ಜರಿ ನಂತ ಟಚ್ ಅಲ್ಲಿ ಇದ್ವಿ. ಕಥೆ ಕೇಳಿದ ಮೇಲೆ ರಚಿತಾಗೆ ಹೇಳ್ದೆ ಅವರು ಕೂಡಾ ಒಪ್ಪಿಕೊಂಡ್ರು. ತುಂಬಾನೇ ಯುನಿಕ್ ಸಬ್ಜೆಕ್ಟ್.. ಇಡಿ ಸಿನಿಮಾ ಉತ್ತರ ಕರ್ನಾಟಕದ ಭಾಷೆಯಲ್ಲೇ ಇರುತ್ತೆ ಅದಕ್ಕಾಗಿ ತಯಾರಿ ಮಾಡಿಕೊಳ್ತಿದ್ದೀನಿ ಎಂದು ಹೇಳಿದರು.

ನಟಿ ರಚಿತಾ ರಾಮ್ ಮಾತನಾಡಿ, ಎಂಟು ವರ್ಷಗಳ ನಂತರ ನನ್ನ ಒಳ್ಳೆ ಫ್ರೆಂಡ್ ಧ್ರುವ ಅವರ ಜೊತೆ ಸಿನಿನಾ ಮಾಡುತ್ತಿರುವುದು ಖುಷಿ ಆಗ್ತಿದೆ. ಭರ್ಜರಿ ಸಿನಿಮಾದ ಮುಹೂರ್ತ ಇಲ್ಲೇ ಆಗಿದೆ. ಕ್ರಿಮಿನಲ್ ಕೂಡ ಇಲ್ಲೇ ಆಗಿದೆ. ಹೊಸ ತಂಡದ ಕೆಲಸ ಮಾಡುತ್ತಿರುವುದು ಖುಷಿ ಇದೆ. ಗೋಲ್ಡ್ ಮೈನ್ ಪ್ರೊಡಕ್ಷನ್ಸ್ ಜೊತೆ ಕೆಲಸ ಮಾಡುತ್ತಿದ್ದೇನೆ. ಫಸ್ಟ್ ನನಗೆ ಧ್ರುವ ಕಾಲ್ ಮಾಡಿದರು. ಕಥೆ, ಪ್ರೊಡಕ್ಷನ್ಸ್ ಹೌಸ್ ಏನೂ ಕೇಳಲಿಲ್ಲ. ಒಕೆ ಮಾಡ್ತೀನಿ ಎಂದೆ. ಆಮೇಲೆ ನಿರ್ದೇಶಕರು ಮನೆಗೆ ಬಂದು ಕಥೆ ಹೇಳಿದರು. ತುಂಬಾ ಎಕ್ಸ್ ಪಿರಿಮೇಂಟ್ ರೋಲ್ ನ ಧ್ರುವ ಮಾಡುತ್ತಿದ್ದಾರೆ. ಇದು ಅವರ ಏಳನೇ ಸಿನಿಮಾ. ಇದು ಅವರ ಸಿನಿಕರಿಯರ್‍ನ ಬೆಸ್ಟ್ ಚಿತ್ರವಾಗಲಿದೆ ಎಂದರು.

‘ಕೆರೆಬೇಟೆ’ ನಿರ್ದೇಶನ ಮಾಡಿದ್ದ ರಾಜ್ ಗುರು ಈಗ ‘ಕ್ರಿಮಿನಲ್’ ಚಿತ್ರಕ್ಕೂ ಆಕ್ಷನ್ ಕಟ್ ಹೇಳ್ತಿದ್ದಾರೆ.. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಂದನ್ ಶೆಟ್ಟಿ ಸಂಗೀತ , ವೈದಿ ಛಾಯಾಗ್ರಹಣ, ರವಿವರ್ಮಾ, ವಿಕ್ರಂ ಮೋರ್ ಸಾಹಸ ಸಂಯೋಜನೆ ಚಿತ್ರಕ್ಕಿರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin