“ಅರಸಯ್ಯನ ಪ್ರೇಮ ಪ್ರಸಂಗ” ಸೆಪ್ಟಂಬರ್ 19ಕ್ಕೆ ತೆರೆಗೆ
ಮೇಘಶ್ರೀ ರಾಜೇಶ್ ನಿರ್ಮಾಣದ, ಜೆ.ವಿ.ಆರ್ ದೀಪು ನಿರ್ದೇಶನದ ಹಾಗೂ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಕಥಾಹಂದರ ಹೊಂದಿರುವ “ಅರಸಯ್ಯನ ಪ್ರೇಮ ಪ್ರಸಂಗ” ಸೆಪ್ಟಂಬರ್ 19ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ

ಚಿತ್ರಕ್ಕಾಗಿ ವಿಕ್ರಮ್ ವಸಿಷ್ಠ ಬರೆದಿರುವ, ನಿತಿನ್ ರಾಜರಾಮ್ ಶಾಸ್ತ್ರಿ ಹಾಗೂ “ಜೋಗಿ” ಸುನಿತಾ ಅವರು ಹಾಡಿರುವ ಮತ್ತು ಪ್ರವೀಣ್ – ಪ್ರದೀಪ್ ಸಂಗೀತ ನೀಡಿರುವ “ಪೋಸ್ಟ್ ಕಾರ್ಡ್” ಹಾಡು ನಟ ಚಂದನ್ ಶೆಟ್ಟಿ ಹಾಗೂ ನಿರ್ದೆಶಕ ಆರ್ ಚಂದ್ರು ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು
ನಿರ್ಮಾಪಕರಾದ ನವರಸನ್, ಸಂಜಯ್ ಗೌಡ, ಚೇತನ್ ಗೌಡ ಹಾಗೂ ವಿತರಕರಾದ ಜಗದೀಶ್ ಗೌಡ, ಕೃಷ್ಣ ಸಾರ್ಥಕ್, ಗುರುದೇವ್ ಸಾಥ್ ನೀಡಿದರು
ನಿರ್ದೇಶಕ ಜೆ.ವಿ.ಆರ್ ದೀಪು ಮಾತನಾಡಿ ಕನ್ನಡದ ಜನರು ಉತ್ತಮ ಕಂಟೆಂಟ್ ವುಳ್ಳ ಚಿತ್ರವನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಚಿತ್ರದಲ್ಲೂ ಅಂತಹ ಉತ್ತಮ ಕಂಟೆಂಟ್ ಇದೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಜನರ ಮನಸ್ಸಿಗೆ ಹತ್ತಿರವಾಗಿದೆ.ಸೆಪ್ಟಂಬರ್ 19 ರಂದು ಬಡಿಯನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದರು

ನಾಯಕ ಮಹಾಂತೇಶ್ ಹಿರೇಮಠ ಮಾತನಾಡಿ ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಯಾವುದೇ ಮೋಸ ಆಗದ ಸಿನಿಮಾ ಇದು. ಮನೋರಂಜನೆಯ ಪ್ರಧಾನವಾಗಿರುವ “ಅರಸಯ್ಯನ ಪ್ರೇಮ ಪ್ರಸಂಗ”ವನ್ನು ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು
ನಾಯಕಿ ರಶ್ಮಿತ ಆರ್ ಗೌಡ, ನಿರ್ಮಾಪಕಿ ಮೇಘಶ್ರೀ ರಾಜೇಶ್, ಚಿತ್ರದಲ್ಲಿ ನಟಿಸಿರುವ ಪಿ.ಡಿ.ಸತೀಶ್, ವಿಜಯ್ ಚೆಂಡೂರ್, ಸುಜಿತ್, ಸುಧಾ, ಚಿಲ್ಲರ್ ಮಂಜು, ಮಹದೇವ್ ಲಾಲಿಪಾಳ್ಯ , ಸಂಗೀತ ನಿರ್ದೇಶಕ ಪ್ರವೀಣ್ – ಪ್ರದೀಪ್, ಛಾಯಾಗ್ರಾಹಕ ಗುರುಪ್ರಸಾದ್ ನಾರ್ನಾಡ್, ಸಂಕಲನಕಾರ ಸುನೀಲ್ ಕಶ್ಯಪ್, ಹಾಡು ಬರೆದಿರುವ ವಿಕ್ರಮ್ ವಸಿಷ್ಠ, ಗಾಯಕ ನಿತಿನ್ ರಾಜರಾಮ್ ಶಾಸ್ತ್ರಿ, ನೃತ್ಯ ನಿರ್ದೇಶಕ ರಾಮ್ ಪ್ರಸಾದ್ ಸೇರಿದಂತೆ ಹಲವು ಉಪಸ್ಥಿತರಿದ್ದರು.


