ಅರ್ಜುನ್ ಸರ್ಜಾ ನಿರ್ದೇಶನದ “ಸೀತಾ ಪಯಣ” ಫೆಬ್ರವರಿ 14ರಂದು ತೆರೆಗೆ
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಿರಂಜನ್ – ಐಶ್ವರ್ಯ ಅರ್ಜುನ್ ನಾಯಕ, ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಸೀತಾ ಪಯಣ” ಚಿತ್ರ ಫೆಬ್ರವರಿ 14 ರಂದು ತೆರೆಗೆ ಬರಲು ಸಜ್ಜಾಗಿದೆ
ಚಿತ್ರ ಬಿಡುಡಗೆ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಅರ್ಜುನ್ ಸರ್ಜಾ,’ಸೀತಾ ಪಯಣ” ಕನ್ನಡದ ಎರಡನೇ ನಿರ್ದೆಶನದ ಸಿನಿಮಾ.

ಹದಿನೈದು ಚಿತ್ರಗಳ ನಿರ್ದೇಶನ ಮಾಡಿದ್ದೇನೆ. “ಸೀತಾ ಪಯಣ”ದ ಕಥೆಯನ್ನು ಹದಿಮೂರು ವರ್ಷಗಳ ಹಿಂದೆಯೇ ಸಿದ್ದಮಾಡಿಕೊಂಡಿದೆ. ಮಗಳು ಐಶ್ವರ್ಯ ನಾಯಕಿಯಾಗಿ, ನಿರಂಜನ್ ನಾಯಕನಾಗಿ ನಟಿಸಿರುವ ಚಿತ್ರವಿದು. ಪ್ರಕಾಶ್ ರೈ, ಸತ್ಯರಾಜ್, ಕೋವೈ ಸರಳ ಅವರಂತಹ ಅನುಭವಿ ಕಲಾವಿದರ ತಾರಾಬಳಗವಿರುವ ಚಿತ್ರದಲ್ಲಿ ಕೂಡ ಅಭಿನಯಿಸಿದ್ದೇನೆ ಎಂದರು.
ನಟ ಧ್ರುವ ಸರ್ಜಾ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಸೀತಾ ಪಯಣ”, ಬರೀ ವ್ಯಕ್ತಿಯ ಪಯಣವಲ್ಲ. ಮನಸ್ಸಿನ ಪಯಣ, ತಿಳಿದುಕೊಳ್ಳಬೇಕಿರುವ ಮೌಲ್ಯಗಳ ಪಯಣ ಹಾಗೂ ಭಾವನೆಗಳ ಜೊತೆಗಿನ ಸುಂದರ ಪಯಣ. ಒಟ್ಟಿನಲ್ಲಿ ಚಿತ್ರ ನೋಡಿದವರು ಚಿತ್ರಮಂದಿರದಿಂದ ಹೋಗುವಾಗ ನಗುವಿನ ಜೊತೆ ಹೋಗುವುದು ಖಂಡಿತ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಲ್ಲರ ಸಹಕಾರವಿರಲಿ ಎಂದರು
ನಾಯಕಿ ಐಶ್ವರ್ಯ ಅರ್ಜುನ್ ಮಾತನಾಡಿ ಮೊದಲ ಚಿತ್ರ “ಪ್ರೇಮ ಬರಹ”ದ ಬಳಿಮ ಎರಡನೇ ಚಿತ್ರ ಇದು. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಪ್ರಕಾಶ್ ರೈ, ಸತ್ಯಜಿತ್ ಹಾಗೂ ಅಪ್ಪ ಸೇರಿದಂತೆ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಬಹಳ ಖುಷಿಯಾಗಿದೆ. ನಿರಂಜನ್ ಅವರು ಕೂಡ ಒಳ್ಳೆಯ ನಟ. ಇನ್ನೂ, ಧ್ರುವ ಸರ್ಜಾ ಅವರು ವಿಶೇಷ ಪಾತ್ರದಲ್ಲ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆಯಲಿದೆ ಎಂದು ಹೇಳಿದರು

ನಾಯಕ ನಿರಂಜನ್ ಮಾತನಾಡಿ “ಸೀತಾ ಪಯಣ” ದಲ್ಲಿ ನಟಿಸಿದ್ದು ಬಹಳ ಸಂತೋಷವಾಗಿದೆ. ಬೇರೆ ಚಿತ್ರದಲ್ಲಿ ಅಭಿನಯಿಸಿದ್ದು ಅಂತ ಅನಿಸಲಿಲ್ಲ. ಎಂದರು.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ ಮಾಹಿತಿ ನೀಡಿದರು. ಚಿತ್ರದ ತಂತ್ರಜ್ಞರಾದ ಅಂಜನ ಅರ್ಜುನ್ ಹಾಗೂ ಸೂರಜ್ ಸರ್ಜಾ ಉಪಸ್ಥಿತರಿದ್ದರು.

