Artist Harish Raj's new film "Venkatesaya Namah" begins

ಕಲಾಕಾರ ಹರೀಶ್ ರಾಜ್ ಹೊಸ ಚಿತ್ರ “ವೆಂಕಟೇಶಾಯ ನಮಃ” ಆರಂಭ - CineNewsKannada.com

ಕಲಾಕಾರ ಹರೀಶ್ ರಾಜ್ ಹೊಸ ಚಿತ್ರ “ವೆಂಕಟೇಶಾಯ ನಮಃ” ಆರಂಭ

ಸ್ಯಾಂಡಲ್ ವುಡ್‍ನ ಕಲಾಕಾರ ಎಂದೇ ಹೆಸರು ಮಾಡಿರುವ ಹರೀಶ್ ರಾಜ್ ನಟಿಸಿ ನಿರ್ದೇಶಿಸುತ್ತಿರುವ ಹೊಸ ಚಿತ್ರ “ವೆಂಕಟೇಶಾಯ ನಮಃ” ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ಬೆಂಗಳೂರಿನ ಆನಂದ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶಾಯ ನಮಃ ಚಿತ್ರದ ಮುಹೂರ್ತ ಆಗಿದ್ದು,ಚಿತ್ರಕ್ಕೆ ಜನಾರ್ದನ ಬಂಡವಾಳ ಹೂಡಿದ್ದು,ನಾಯಕ ನಟರಾಗಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಹರೀಶ್ ರಾಜ್.

ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮದೇ ಆದ ಸುಧೀರ್ಘ ಅನುಭವ ಹೊಂದಿದಂತಹ ಹರೀಶ್ ರಾಜ್ ನಿರಂತರವಾಗಿ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ನಿರ್ದೇಶನ ಸಹ ಮಾಡುತ್ತಿರುವ ಎಲ್ಲರಿಗೂ ಗೊತ್ತಿದೆ..

ಈ ಬಗ್ಗೆ ಮಾತನಾಡಿದ ನಿರ್ದೇಶಕ ಹರೀಶ್ ರಾಜ್, ವೆಂಕಟೇಶಾಯ ನಮಃ ಚಿತ್ರ ರೋಮ್ಯಾಂಟಿಕ್ ಕಾಮಿಡಿ ಅಂಶವನ್ನು ಹೊಂದಿದ್ದು ಇದರಲ್ಲಿ ಪ್ರೀತಿ ಪ್ರೇಮದ ಜೊತೆಗೆ ಕೌಟುಂಬಿಕ ಅಂಶವೂ ಇರುತ್ತದೆ .ಸುಮಾರು 45 ದಿನಗಳ ಒಂದೇ ಷೆಡ್ಯೂಲ್ ನಲ್ಲಿ ಬಹುತೇಕ ಚಿತ್ರೀಕರಣವನ್ನು ಮುಗಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಚಿತ್ರದಲ್ಲಿ ಉಮಾಶ್ರೀ,ತಬಲಾ ನಾಣಿ ಯಂತಹ ಹಿರಿಯ ಕಲಾವಿದರ ಜೊತೆಗೆ ಬಹಳಷ್ಟು ಹೊಸ ಕಲಾವಿದರು ಇರಲಿದ್ದಾರೆ ಎಂದರು

ಚಿತ್ರಕ್ಕೆ ಭರ್ಜರಿ ಚೇತನ್,ಪ್ರಮೋದ ಮರವಂತೆ ಸಾಹಿತ್ಯ,ಶಿವಶಂಕರ್ ಛಾಯಾಗ್ರಹಣ, ಶ್ರೀನಿವಾಸ್ ಮೂರ್ತಿ ಸಂಗೀತ ಚಿತ್ರಕ್ಕಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin