ಗೌರಿ ಗಣೇಶ ಹಬ್ಬಕ್ಕೆ “ಭೀಮ” ಚಿತ್ರದ ಹಾಡು ಬಿಡುಗಡೆ

ವಿಜಯ್ ಕುಮಾರ್ ನಟನೆ ನಿರ್ದೇಶನದ “ಭೀಮ” ಚಿತ್ರ ಸೆಟ್ಟೇರಿದ ದಿನದಿಂದ ಕುತೂಹಲ ಕಾಪಾಡಿಕೊಂಡು ನಿರೀಕ್ಷೆ ಹೆಚ್ಚಿಸಿಕೊಂಡೇ ಬಂದಿದೆ. ಸದ್ಯ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಯ ಸನಿಹದಲ್ಲಿದೆ. ಈ ನಡುವೆ ಗೌರಿ ಗಣೇಶ ಹಬ್ಬಕ್ಕೆ “ಭೀಮ”ನ ಬ್ಯಾಡ್ ಬಾಯ್ಸ್ ಹಾಡು ಬಿಡುಗಡೆಯಾಗಲಿದೆ. ಇದು ಸಹಜವಾಗಿ ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಮತ್ತಷ್ಟು ಕಾತುರ ಹೆಚ್ಚುವಂತೆ ಮಾಡಿದೆ.

ಸಲಗ ಚಿತ್ರದ ಬಳಿಕ ನಟ, ನಿರ್ದೇಶಕ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಚಿತ್ರ ಇದು. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಸ್ಯಾಂಡಲ್‍ವುಡ್‍ನ ಸಲಗ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟ್ರಟೈನರ್ ಚಿತ್ರ ಇದಾಗಿದೆ.
ದುನಿಯಾ ವಿಜಯ್ ಪ್ರತಿಭಾವಂತರ ದಂಡುಕಟ್ಟಿಕೊಂಡು ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಮಾಡಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ.

ಭೀಮ ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್ಸ್ ಕೊನೆಯ ಹಂತದಲ್ಲಿದೆ. ಇದೀಗ ಒಂದೊಂದೇ ಹಾಡು ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ 18ನೇ ತಾರೀಖು ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಾಡು ಬಿಡುಗಡೆಯಾಗಲಿದೆ.
ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ವಿಜಯ್ ಸಲಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲನ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಬಿಡುಗಡೆಯಾಗಿರುವ ಬಿಟ್ ನಲ್ಲೇ ವಿಜಯ್ ಚರಣ್ ಮ್ಯೂಸಿಕ್ ಝಲಕ್ ನ ಬಿಟ್ಟು ಕುತೂಹಲ ಹೆಚ್ಚಿಸಿದೆ.