ಭೀಮಾ ತೀರದಲ್ಲಿ ಈಗ ತೆಲುಗಿನಲ್ಲಿ ಕಡಪ ಚಿತ್ರ ಮಾರ್ಚ್ 6ಕ್ಕೆ ಬಿಡುಗಡೆ
14 ವರ್ಷಗಳ ಹಿಂದೆ ಅಣಜಿ ನಾಗರಾಜ್ ನಿರ್ಮಿಸಿದ್ದ, ದುನಿಯಾ ವಿಜಯ್ ಅಭಿನಯದ ಚಿತ್ರ ಭೀಮಾತೀರದಲ್ಲಿ ತೆರೆಕಂಡಿತ್ತು. ಇದೀಗ ಡಿಜಿಟಲ್ ರೂಪದಲ್ಲಿ ತೆರೆಯ ಮೇಲೆ ಬರಲಿದೆ. ದರ್ಶನ್, ಸುದೀಪ್‍ರಂಥ ಸ್ಟಾರ್ ಚಿತ್ರಗಳ ನಿರ್ದೇಶಕ ಓಂಪ್ರಕಾಶ್‍ರಾವ್ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಚಿತ್ರವನ್ನು ಅಣಜಿ ನಾಗರಾಜ್ ನಿರ್ಮಾಣ ಮಾಡಿದ್ದರು, ಇದೇ ಮಾರ್ಚ್ 6ರಂದು ಬಿಡುಗಡೆಯಾಗುತ್ತಿದೆ

ನಿರ್ದೇಶಕ ಓಂ ಪ್ರಕಾಶ್‍ರಾವ್ ಮಾತನಾಡಿ ಅಣಜಿ ನಾಗರಾಜ್ ಅವರ ಜತೆ ತುಂಬಾ ಸಿನಿಮಾ ಮಾಡಿದ್ದೇನೆ, ಅದರಲ್ಲಿ ಭೀಮಾ ತೀರದಲ್ಲಿ ತುಂಬಾ ಸದ್ದು ಮಾಡಿ ಯಶಸ್ವೀ ಪ್ರದರ್ಶನ ಕಂಡಿತ್ತು, ಚಿತ್ರದ ಹಿಂದಿರುವ ಕಥೆಗಳು ತುಂಬಾ ಇವೆ, ನಡೆಯಲು ಸಾಧ್ಯವಾಗದ ನಟ ಲೋಕನಾಥ್ ಆಗ ಅಟ್ಟವನ್ನೂ ಸಹ ಹತ್ತಿ ಅಭಿನಯಿಸಿದ್ದರು, ಸಿನಿಮಾಗೆ ನಿರ್ಮಾಪಕ ನಾಗರಾಜ್ ತುಂಬಾ ಕಷ್ಟಪಟ್ಟಿದ್ದರು, ನಂತರ ಚಿತ್ರ ಯಶಸ್ವಿಯೂ ಆಗಿತ್ತು, ಇದೀಗ ನೆಗೆಟಿವ್‍ನಲ್ಲಿದ್ದ ಚಿತ್ರವನ್ನು ಸ್ವಲ್ಪ ಟ್ರಿಮ್ ಮಾಡಿ ಡಿಜಿಟಲ್ ರೂಪಕ್ಕೆ ತಂದು ರಿಲೀಸ್ ಮಾಡುತ್ತಿದ್ದಾರೆ. ಕನ್ನಡ ಅಲ್ಲದೆ ತೆಲುಗು, ತಮಿಳು ಸೇರಿ ಬೇರೆ ಭಾಷೆಗಳಿಗೂ ಡಬ್ ಮಾಡಿಸಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ, ನಾನೇ ಯೂಟ್ಯೂಬ್‍ನಲ್ಲಿ ಐದಾರು ಸಲ ಈ ಚಿತ್ರವನ್ನು ನೋಡಿದ್ದೇನೆ. ಆಗ ಡೈಲಾಗ್, ಮೇಕಿಂಗ್‍ನಲ್ಲಿ ತುಂಬಾ ಕೆಲಸ ಮಾಡಿದ್ದೆವು ಎಂದರು.
ನಿರ್ಮಾಪಕ ಅಣಜಿ ನಾಗರಾಜ್ ಮಾತನಾಡಿ ಮಾರ್ಚ್ 6ಕ್ಕೆ ಭೀಮಾ ತೀರದಲ್ಲಿ ರಿಲೀಸ್‍ಆಗುತ್ತಿದೆ, ತುಂಬಾ ಇಷ್ಟಪಟ್ಟು ಮಾಡಿದ ಚಿತ್ರವಿದು, ಈಗ ಎಡಿಟ್ ಮಾಡಿ ಹೊಸ ರೂಪದಲ್ಲಿ ರಿಲೀಸ್ ಮಾಡುತ್ತಿದ್ದೇವೆ, ದಿಜಿಟಲ್‍ಗೂ ರೀಲ್‍ಗೂ ತುಂಬಾ ವ್ಯತ್ಯಾಸವಿದೆ. ರೀಲ್ ಕ್ವಾಲಿಟಿ ಡಿಜಿಟಲ್‍ನಲ್ಲಿ ಮಾಡಲು ಸಾಧ್ಯವಿಲ್ಲ, ನೆಗೆಟಿವ್‍ನಲ್ಲಿ ನಮ್ಮ ಚಿತ್ರವೇ ಕೊನೆಯದಾಗಿತ್ತು, 14 ವರ್ಷಗಳಾದರೂ ನೋಡುವಾಗ ಈಗಷ್ಟೇ ಮಾಡಿದ ಚಿತ್ರ ಅನಿಸುತ್ತದೆ, ಆಗ ಐದಾರು ಕೋಟಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು, ಈಗದು 50-60 ಕೋಟಿ ಬಜೆಟ್‍ನ ಸಿನಿಮಾ ಅನಿಸುತ್ತದೆ ಎಂದು ಹೇಳಿದರು
ಸ್ನೇಹಿತ ವೆಂಕಟೇಶ್ ಜತೆ ಇತರರು ಸೇರಿ ಭೀಮಾ ತೀರದಲ್ಲಿ ತೆಲುಗಿನ ಕಡಪ ಚಿತ್ರವನ್ನು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ, ಈವಾರ ಕನ್ನಡ ಮತ್ತು ತೆಲುಗಿನಲ್ಲಿ, 2 ವಾರ ಬಿಟ್ಟು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ, ನಾಯಕ ವಿಜಯ್ ನಟಿಸಿದ್ಧಾರೆ ಎಂದರು

