ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಲ್ಯಾಕ್ ಶೀಪ್ ಚಿತ್ರ
ಜನರನ್ನು ಚಿತ್ರಮಂದಿರಕ್ಕೆ ಕರೆತರಲು ತಂಡವು ಏನಾದರೂಂದು ಕಾರ್ಯತಂತ್ರ ರೂಪಿಸುತ್ತದೆ. ಆ ಸಾಲಿಗೆ ’ಬ್ಲ್ಯಾಕ್ ಶೀಪ್’ ಎನ್ನುವ ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಮೂಲತ: ಡ್ಯಾನ್ಸರ್ ಹಾಗೂ ’ದೇವ್ ಸನ್ ಆಫ್ ಮುದ್ದೆಗೌಡ’ ಚಿತ್ರದಲ್ಲಿ ಚಾರ್ಮಿಕೌರ್‌ಗೆ ಜೋಡಿಯಾಗಿದ್ದ ಜೀವನ್ ಹಳ್ಳಿಕಾರ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ನಿರ್ದೇಶನ ಜತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಗ್ಲಿಟ್ಟರರ್ರ‍್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಗುರುಚರಣ್ ಬಂಡವಾಳ ಹೂಡಿದ್ದಾರೆ. ಮಂಜುನಾಥ್.ಪಿ.ರಾವ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಕಥೆಯು ನಾಯಕ ಮತ್ತು ಖಳನಾಯಕನ ನಡುವೆ ನಡೆದ ಒಂದು ಸಂಘರ್ಷದಲ್ಲಿ ಕೆಲ ಘಟನೆಗಳನ್ನು ಮರೆತು ಹೇಗೆ ಜೀವನ ಸಾಗಿಸುತ್ತಾರೆ. ಆ ಮರೆತ ವಿಷಯಗಳು ಅವನಿಗೆ ಅವರನ್ನು ಹುಡುಕಲು ಯಾವ ಮಾರ್ಗದ ಮೂಲಕ ಮುನ್ನುಗ್ಗುತ್ತಾನೆ ಎಂಬುದನ್ನು ಕುತೂಹಲದೊಂದಿಗೆ ತೋರಿಸಲಾಗಿದೆ.
ನವ ಪ್ರತಿಭೆಗಳಾದ ವಿಶಾಲ್‌ಕಿರಣ್, ಪ್ರಶಾಂತ್.ವಿ.ಹರಿ, ನಿಶಾಹೆಗ್ಡೆ, ಶಿವಾಂಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕೃಷ್ಣಹೆಬ್ಬಾಳೆ, ಕೆ.ಎಸ್.ಶ್ರೀಧರ್, ಸುಂದರ್‌ವೀಣಾ, ಭಜರಂಗಿಪ್ರಸನ್ನ ಮುಂತಾದವರ ನಟನೆ ಇದೆ. ಅಭಿಜಿತ್ ಮಹೇಶ್ ಸಾಹಿತ್ಯದ ಗೀತೆಗಳಿಗೆ ಪೀಪಲ್ ಟ್ರೀ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೇವೂ, ಸಂಕಲನ ಆಕಾಶ್.ಎಸ್.ಮಹೇಂದ್ರಕರ್, ಸಾಹಸ ಅವತಾರ್‌ಆದಿತ್ಯ ಅವರದಾಗಿದೆ. ಬೆಂಗಳೂರು, ಮಂಗಳೂರು, ಮುಂಬೈ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.