Challenging Star Darshan's "The Devil" to release on December 11

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ದಿ ಡೆವಿಲ್” ಡಿಸೆಂಬರ್ 11ಕ್ಕೆ ಬಿಡುಗಡೆ - CineNewsKannada.com

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ದಿ ಡೆವಿಲ್” ಡಿಸೆಂಬರ್ 11ಕ್ಕೆ ಬಿಡುಗಡೆ

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಲಿವೆ ಎನ್ನುವ ನಂಬಿಕೆ ಗಾಂಧಿನಗರದಲ್ಲಿದೆ, ಅದಕ್ಕೆ ಉದಾಹರಣೆಗಳೂ ಕಣ್ಣಮುಂದೆ ಇವೆ. ಹೀಗಾಗಿ ಸೂಪರ್ ಸ್ಟಾರ್ ನಟರ ಚಿತ್ರಗಳು ಹೆಚ್ಚಾಗಿ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ. ಹಾಗಂತ ಬೇರೆ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು ಹಿಟ್ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಸಹಜ, ಆದರೂ ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗಕ್ಕೆ ಅದೃಷ್ಠದ ಸಂಕೇತ.

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ದಿ ಡೆವಿಲ್” ಕೂಡ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ, ನಿಗಧಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 12ರ ಬದಲು ಡಿಸೆಂಬರ್ 11ಕ್ಕೆ ಚಿತ್ರ ತೆರೆಗೆ ಬರಲಿದ್ದು ನಟ ದರ್ಶನ್ ಅವರ ಸೆಲೆಬ್ರಿಟಿಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮತ್ತು ಕಾತುರ ಹೆಚ್ಚುವಂತೆ ಮಾಡಿದೆ.

ಈ ಮುಂಚೆ ನಿಗಧಿ ಪಡಿಸಿದ ಡಿಸೆಂಬರ್ 12ರ ಬದಲು ಡಿಸೆಂಬರ್ 11ಕ್ಕೆ ಚಿತ್ರ ತೆರೆಗೆ ಬರುತ್ತಿರುವ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಣ ಸಂಸ್ಥೆ ಶ್ರೀಜೈಮಾತ ಕಂಬೈನ್ಸ್ ಮಾಹಿತಿ ಹಂಚಿಕೊಂಡಿದ್ದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳ ಕಾತುರ ಹೆಚ್ಚುವಂತೆ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ “ಡಿಸೆಂಬರ್ 12 ಅಲ್ಲ, ಡಿಸೆಂಬರ್ 11, ಒಂದು ದಿನ ಮೊದಲೇ” ಎನ್ನುವ ಶೀರ್ಷಿಕೆ ಹಾಕಿಕೊಂಡು ಚಿತ್ರ ಬಿಡುಗಡೆಯನ್ನು ಒಂದು ದಿನ ಮುಂಚೆಯೇ ಮಾಡಲು ನಿರ್ಧರಿಸಿದೆ.

ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಮತ್ತು ಸಧಬಿರುಚಿಯ ಚಿತ್ರ ನೀಡಿರುವ ಪ್ರಕಾಶ್ ವೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಚಿತ್ರಕ್ಕೆ ನಿರ್ದೇಶಕರ ತಾಯಿ ಜಯ್ಯಮ್ಮ ಬಂಡವಾಳ ಹಾಕಿದ್ದು ಶ್ರೀಜೈಮಾತ ಕಂಬೈನ್ಸ್ ನಡಿ ಚಿತ್ರ ಮೂಡಿಬಂದಿದೆ.

ಕಾಟೇರ ಚಿತ್ರದ ಯಶಸ್ಸಿನ ನಂತರ ನಟ ದರ್ಶನ್ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್” ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಾಗಿತ್ತು ಕಾರಾಣಾಂತರಗಳಿಂದ ತಡವಾಗಿದೆ, ಅಡೆ ತಡೆ ದಾಟಿ ಇಡೀಗ ಅಭಿಮಾನಿಗಳನ್ನು ರಂಜಿಸಲು ಚಿತ್ರ ತೆರೆಯ ಮೇಲೆ ಬರಲು ಸಜ್ಜಾಗಿದೆ.

ಚಿತ್ರದಲ್ಲಿ ನಟ ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದಾರೆ, ಇದರ ಜೊತೆಗೆ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ.ರೋಜರ್ ನಾರಾಯಣ್,ಶೋಭರಾಜ್, ಶ್ರೀನಿವಾಸಪ್ರಭು, ತುಳಸಿ ಶಿವಮಣಿ ಸೇರಿದಂತೆ ಮತ್ತಿತರ ಕಲಾವಿದರ ದಂಡು ಚಿತ್ರದಲ್ಲಿದೆ. ಸುಧಾಕರ್ ರಾಜ್ ಚಿತ್ರಕ್ಕೆ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿದೆ.

ಈಗಾಗಲೇ ಚಿತ್ರದ ಇದ್ರೆ ನೆಮ್ದಿಯಾಗಿರಬೇಕು ಸೇರಿದಂತೆ ಚಿತ್ರದ ಹಲವು ಹಾಡುಗಳು ಹಿಟ್ ಆಗಿದ್ದು ಚಿತ್ರದ ಬಗ್ಗೆ ಅಭಿಮಾನಿಗಳ ಕಾತುರ ಹೆಚ್ಚುವಂತೆ ಮಾಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin