ಕಾಮಿಡಿ ಕಥಾ ಹಂದರ ” ಪೌಡರ್ ” ಆಗಸ್ಟ್ 23 ರಂದು ಬಿಡುಗಡೆ
ಕಾಮಿಡಿ ಕಥಾಹಂದರದ ತಿರುಳು ಹೊಂದಿರುವ. ” ಪೌಡರ್ ” ಚಿತ್ರ ಇದೇ 23 ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದಕೊಂಡಂತೆ ಆಗಿದ್ದರೆ ಸ್ವಾತಂತ್ರ್ಯ ದಿನದಂದೇ ಚಿತ್ರ ತೆರೆಗೆ ಬರಬೇಕಾಗಿತ್ತು. ಅಂದು ಎರಡು ಚಿತ್ರ ಬಿಡುಗಡೆ ಇದ್ದುದರಿಂದ ನಮ್ಮಲ್ಲೇ ಸ್ಪರ್ಧೆ ಬೇಡ ಎನ್ನುವ ನಿರ್ಮಾಪಕರ ದೊಡ್ಡ ಗುಣದಿಂದ ಚಿತ್ರ ಒಂದು ವಾರ ಮುಂದೆಕ್ಕೆ ಹೋಗಿ ಈ ವಾರ ಬಿಡುಗಡೆಯಾಗುತ್ತಿದೆ.

ಪೌಡರ್ ಒಂದು ಕಾಮಿಡಿ ಜಾನರ್ ಚಿತ್ರ, ಯುವಕರಿಬ್ಬರು ನಿಗೂಢ ಪೌಡರ್ ಪ್ರಭಾವದಿಂದ ದಿಡೀರನೇ ಶ್ರೀಮಂತರಾಗಲು ಹೊರಟು ಮಾಡುವ ಪ್ರಯತ್ನಗಳು, ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್, ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ, ಅವರ ಕನಸುಗಳು ನನಸಾಗುವುದೇ, ಪೌಡರ್ ಹಿಂದಿನ ಶಕ್ತಿ ಅವರಿಗೆ ತಿಳಿಯುವುದೇ ಇದೆಲ್ಲವನ್ನು ನಿರ್ದೇಶಕ ಜನಾರ್ಧನ ಚಿಕ್ಕಣ್ಣ ಚಿತ್ರದಲ್ಲಿ ಕುತೂಹಲಕರವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.
ಕೆಆರ್ ಜಿ ಸಂಸ್ಥೆಯ ಮೂಲಕ ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದು ಜನಾರ್ದನ್ ಚಿಕ್ಕಣ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಗಸ್ಡ್ 23 ಕ್ಕೆ ಚಿತ್ರ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮಾದ್ಯಮ ಮುಂದೆ ಮುಖಾಮಖಿಯಾಗಿತ್ತು

ಕೆಆರ್ ಜಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಕಾರ್ತೀಕ್‌ಗೌಡ, ಯೋಗಿ ರಾಜ್, ದಿಗಂತ್, ಧನ್ಯಾ ರಾಮಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ಅನಿರುದ್ ಆಚಾರ್ಯ ಹಾಜರಿದ್ದು ಮಾಹಿತಿ ನೀಡಿದರು
ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ ತ್ರಿವೇಣಿ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೌಡರ್ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ಒಂದು ವಾರ ಮುಂದೂಡಿದ್ದರಿಂದ ನಿಜಕ್ಕೂ ಒಳ್ಳೆಯ ನಿರ್ಧಾರ. ಇಲ್ಲ ಪ್ರದರ್ಶನ ಡಿವೈಡ್ ಆಗೋದು. ಒಂದು ವಾರ * ಮುಂದಕ್ಕೆ ಹೋಗಿರುವುದರಿಂದ ಇನ್ನಷ್ಟು ಪ್ರಚಾರ ಮಾಡಲು ಸಹಕಾರಿಯಾಗಿದೆ ಎಂದರು

ಪೌಡರ್ ಡ್ರಗ್ಸ್ ಕುರಿತಾದ ಚಿತ್ರ ಎಂದು ಇಷ್ಟರಲ್ಲಾಗಲೇ ಗೊತ್ತಾಗಿರುತ್ತದೆ. ಆದರೆ, ಅದಕ್ಕಿಂತ ಬೇರೆಯದೇ ಕಥೆ ಚಿತ್ರದಲ್ಲಿದೆ. ಬರೀ ಮಾದಕ ವಸ್ತು ಅಥವಾ ಡ್ರಗ್ಸ್ ಕುರಿತ ಚಿತ್ರ ಅಲ್ಲ ಇಲ್ಲೊಂದು ಡ್ರಗ್ಸ್ ಪ್ಯಾಕ್ ಮಿಸ್ ಆಗಿರುತ್ತದೆ. ಅದನ್ನು ಮಾರುವಾಗ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತಮಾಷೆಯಾಗಿ ಹೇಳುವ ಚಿತ್ರ. ಇಲ್ಲಿ ಯಾವುದೇ ಲಾಜಿಕ್ ಇಲ್ಲ. ಇದೊಂದು ಪಕ್ಕಾ ಮನರಂಜನಾತ್ಮಕ ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು

ನಟ ದಿಗಂತ್ ಮಾತನಾಡಿ ಇದನ್ನು ವಿಭಿನ್ನ ಚಿತ್ರ ಎನ್ನುವುದಕ್ಕಿಂತ ಇಂಥದ್ದೊಂದು ಪಾತ್ರವನ್ನು ಇದುವರೆಗೂ ಮಾಡಿರಲಿಲ್ಲ ನನಗೆ ತುಂಬಾ ತೃಪ್ತಿಕೊಟ್ಟ ಪಾತ್ರವಿದು. ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ. ಎಲ್ಲಾ ಸರಳವಾದ ಪಾತ್ರಗಳು. ಎಲ್ಲರಿಗೂ ಪ್ರಾಮುಖ್ಯತೆ ಇದೆ. ಎಲ್ಲರಿಗೂ ಅವರದ್ದೇ ಆದ ಕಥೆಗಳಿವೆ. ಈ ಸಿನಿಮಾ ಗೆದ್ದರೆ, ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಧೈರ್ಯ ಬರುತ್ತದೆ ಎಂದು ಹೇಳಿಕೊಂಡರು
ನಟಿಯರಾದ ಧನ್ಯಾ ರಾಮ್ಯುಮಾರ್ ಮತ್ತು ಶರ್ಮಿಳಾ ಮಾಂಡ್ರೆ, ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿದದರು.

ಪೌಡರ್ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್‌ಕುಮಾರ್, ಅನಿರುದ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ವಾಸುಕಿ -ತ್ತಿದ್ದೇನೆ. ವೈಭವ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್‌ಗೌಡ, ಯೋಗಿ ಜಿ.ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಸೇರಿ ಕೆ.ಆರ್.ಜಿ. ಸ್ಪೂ ಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್. ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ.

