ನೈಜ ಘಟನೆ “ದ ರೂಲರ್ಸ್ ” ಆಗಸ್ಟ್ 30 ಕ್ಕೆ ಬಿಡುಗಡೆ : ಕುತೂಹಲ ಹೆಚ್ಚಳ
“ಪವರ್ ಆಫ್ ಕಾನ್ಸಿ ಟ್ಯೂಷನ್” ಅಡಿ ಬರಹವಿರುವ ” ದ ರೂಲರ್ಸ್ ” ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ತಿಂಗಳ 30 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಟೀಸರ್, ಟೈಲರ್ ಮತ್ರು ಕೋಲಾರ ಭಾಗ ಭಾಷೆಯಿಂದ ಚಿತ್ರ ಕುತೂಹಲ ಹೆಚ್ಚು ಮಾಡಿದೆ.
ಕೋಲಾರ ಜಿಲ್ಲೆಯಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ. ಅಶ್ವಥ್ ಬಳಗೆರೆ ಅವರ ನಿರ್ಮಾಣ ಮಾಡಿರುವ “ದ ರೂಲರ್ಸ್ “. ಚಿತ್ರದಲ್ಲಿ ಹೋರಾಟಗಾರ ಹಾಗು ಸಾಮಾಜಿಕ ಕಳಕಳಿ ಹೊಂದಿರುವ ಡಾ. ಸಂದೇ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಚಿತ್ರಕ್ಕೆ ಉದಯ್ ಭಾಸ್ಕರ್ ಆಕ್ಷನ್‌ಕಟ್ ಹೇಳಿದ್ದಾರೆ.
ಕೋಲಾರದ ಡಾ.ಕೆ.ಎಂ.ಸಂದೇಶ ದ ರೂಲರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಂದೇಶ್ ಅವರು ತಮ್ಮ ಜೀವನದ ನೈಜ ಪಾತ್ರವನ್ನು ತಾವೇ ನಿರ್ವಹಿಸಿದ್ದಾರೆ. ಸೂಕ್ಷ್ಮ ವಿಚಾರಗಳನ್ನು ನೇರವಾಗಿ ಹೇಳಲಾಗಿರುವ ಚಿತ್ರ ಸಾಕಷ್ಟು ಕುತೂಹಲದ ಜೊತೆಗೆ ನಿರೀಕ್ಷೆ ಹೆಚ್ಚು ಮಾಡಿದೆ.
ನಿರ್ಮಾಪಕ ಆಶ್ವಥ್ ಬಳಗೆರೆ ಮಾತನಾಡಿ 2017ರಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಿದ್ದೇವೆ.ಆ ಘಟನೆ ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು, ಇದನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ, 985ರಷ್ಟು ನೈಜ ಕಥೆ ಬಳಸಿಕೊಂಡಿದ್ದೇವೆ,ಏನಾದರೂ ಘಟನೆ ಸಂಭವಿಸಿದಾಗ ಅದರ ಬಗ್ಗೆ ತಿಳಿದುಕೊಳ್ಳುತ್ತೇನೆ. ಮೂಲತ: ರೈತನ ನಂತರ ರಿಯಲ್ ಎಸ್ಟೇಟ್ ಮಾಡುತ್ತ ಬಂದೆ, ಈ ಚಿತ್ರವನ್ನು 60 ದಿನಗಳವರೆಗೆ ಚಿತ್ರೀಕರಿಸಿದ್ದೇವೆ, ಸುಮಾರು 300 ಜನ ಕಲಾವಿದರು. ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದರೂ ಎಲ್ಲಿಯೂ ತೊಂದರೆ ಆಗಿಲ್ಲ. “ದ ರೂಲರ್” ಚಿತ್ರ ತಿಂಗಳಾಂತ್ಯಕ್ಕೆ ತೆರೆಗೆ ಬರಲಿದೆ ಎಲ್ಲರ ಸಹಕಾರ ಪ್ರೋತ್ಸಾಹ ಬೇಕು ಎಂದು ಕೇಳಿಕೊಂಡರು
ನಿರ್ದೇಶಕ ಉದಯ ಭಾಸ್ಕರ್ ಮಾತನಾಡಿ ನಾಯಕ ಸಂದೇಶ್ ಈ ಕಥೆ ಕೊಟ್ಟರು. ಒಂದು ಅನ್ಯಾಯ ನಡೆದಾಗ ಅದನ್ನು ಎದುರಿಸಿ ಕೇಳುವ ಧೈರ್ಯ ನಮಗೆ ಇರಬೇಕು ಎನ್ನುವುದನ್ನು ಚಿತ್ರದ ಮೂಲಕ ಹೇಳಹೊರಟಿದ್ದೇವೆ, ಇದೊಂದು ಮಹಿಳಾ ಪ್ರದಾನ ಕಥಾಹಂದರ ಹೊಂದಿದೆ. ಒಬ್ಬ ಹೆಣ್ಣು ತನಗಾದ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಹೇಗೆ ಗೆಲ್ಲುತ್ತಾಳೆ ಎನ್ನುವುದೇ ಈ ಚಿತ್ರದ ಕಥಾ ವಸ್ತು ಎಂದರು.
ಶಕ್ತಿ ಎನ್ನುವುದು ಎಲ್ಲರಿಗೂ ಇರುತ್ತೆ, ಅದನ್ನು ಹೇಗೆ ಎಲ್ಲಿ ಉಪಯೋಗಿಸಿಕೊಳ್ಳಬಹುದು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರಲ್ಲ, ಬಡವ, ಬಲ್ಲಿದರ ಸುತ್ತ ನಡೆಯುವ ಸಂಘರ್ಷದ ಕಥೆ ಇದರಲ್ಲಿದೆ. ಇಡೀ ಫ್ಯಾಮಿಲಿ ಜೊತೆ ಕೂತು ನೋಡುವಂಥ ಸಿನಿಮಾ ಇದಾಗಿದೆ .ಸಿನಿಮಾ ಮಾಡುವಾಗ ತುಂಬಾ ದೊಡ್ಡ ಜವಾಬ್ದಾರಿ ನನ್ನ ಮೇಲಿತ್ತು ಆ.30ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದರು
ನಾಯಕಿ ರಿತುಗೌಡ ಮಾತನಾಡಿ ಕೋಲಾರದ ಹತ್ತಿರದ ಹಳ್ಳಿಯಿಂದ ಬಂದಂಥ ಹುಡುಗಿ, ಒಬ್ಬ ಬಡ ಕುಟುಂಬದ ಯುವತಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಾಲೇಜಿಗೆ ಹೋದ ನಂತರ ಏನೇನೆಲ್ಲ ಆಗುತ್ತದೆ ಎಂಬುದನ್ನು ದೂಲರ್ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಹೇಳಿಕೊಂಡರು.
ಈ ಚಿತ್ರಕ್ಕೆ ಕರುಣ್ ಕೆ.ಜಿ.ಎಫ್. ಸಂಗೀತ ಸಂಯೋಜಿಸಿದ್ದಾರೆ. ವಿಶಾಲ್, ರಿತುಗೌಡ ನಾಯಕ ನಾಯಕಿಯಾಗಿ ನಟಿಸಿದ್ದು, ವಿಲನ್ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ.