Manasote Manasare song from the movie "Jamboo Circus" released

“ಜಂಬೂ ಸರ್ಕಸ್” ಚಿತ್ರದ ಮನಸೋತೆ ಮನಸಾರೆ ಹಾಡು ಬಿಡುಗಡೆ - CineNewsKannada.com

“ಜಂಬೂ ಸರ್ಕಸ್” ಚಿತ್ರದ ಮನಸೋತೆ ಮನಸಾರೆ ಹಾಡು ಬಿಡುಗಡೆ

ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಯಶಸ್ವಿ ನಿರ್ದೇಶಕ ಎಂ ಡಿ ಶ್ರೀಧರ್ , ಇದೀಗ ” ಜಂಬೂ ಸರ್ಕಸ್” ಚಿತ್ರದ ಮೂಲಕ‌ ಮತ್ತೊಮ್ಮೆ ಮೋಡಿ ಮಾಡಲು ಮುಂದಾಗಿದ್ದಾರೆ.

ಚಿತ್ರದ ಇಂಪಾದ ಹಾಡು ‘ಮನಸೂತೆ ಮನಸಾರೆ. ಗೀತೆಯನ್ನು
ಕವಿರಾಜ್ ಗೀತ ಸಾಹಿತ್ಯದಲ್ಲಿ ನಕುಲ ಅಭಯಂಕರ ಹಾಡಿರುವ ಈ ಹಾಡನ್ನು ವಾಸುಕಿ ವೈಭವ ಸಂಯೋಜನೆ ಮಾಡಿದ್ದಾರೆ.‌ಇದರ ಜೊತೆಗೆ ‘ಗ್ರಹಚಾರ.. ಹಾಗೂ ಗಾಂಚಲಿ ಗಂಗವ್ವ.. ಹಾಡು ಬಿಡುಗಡೆಗೊಂಡಿದ್ದು ಗಮನ. ಸೆಳೆದಿವೆ.

ಕಾರ್ಯಕಾರಿ ನಿರ್ಮಾಪಕಿ ಸುಪ್ರೀತಾ ಶೆಟ್ಟಿ ಮಾತನಾಡಿ ‘ಜಂಬೂ ಸರ್ಕಸ್’ ಚಿತ್ರಕ್ಕೆ ಕಥಾ ಹಂದರ ಮೊದಲು ಬಂದಿದ್ದು ಹಾಸ್ಯ ನಟ ಸುಂದರ್ ವೀಣಾ ಅವರಿಂದ. ಅಲ್ಲಿಂದ ನಾವೆಲ್ಲ ಕುಳಿತು ಅದನ್ನು ಪಸಂದಾಗಿ ಮನರಂಜನೆ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹಾಗೆ ಚಿತ್ರಕಥೆ ಸಿದ್ದ ಮಾಡಿದೆವು . ಈ ಚಿತ್ರಕ್ಕೆ ಎಂ ಡಿ ಶ್ರೀಧರ್ ಅಂತಹ ನಿರ್ದೇಶಕರು ಇದ್ದ ಮೇಲೆ ಸಿನಿಮಾಕ್ಕೆ ಒಂದು ದೊಡ್ಡ ತೂಕ ಬಂದಿತು ಎಂದು ಅವರು ಮೆಚ್ಚುಗೆ ತಿಳಿಸಿದರು.

ನಿರ್ಮಾಪಕ ಎಚ್ ಸಿ ಸುರೇಶ್ ಈ ಜಂಬೂ ಸರ್ಕಸ್ ಅನ್ನು ನಿಮ್ಮ ಸಿನಿಮಾ ಎಂದು ಪ್ರೋತ್ಸಾಹಿಸಿ ಎಂದು ಮಾಧ್ಯಮದರನ್ನು ಹಾರೈಸುವಂತೆ ವಿನಂತಿಸಿಕೊಂಡರು.

ನಿರ್ದೇಶಕ ಎಂ ಡಿ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾದಲ್ಲೂ ಸಹ ನಾಯಕಿಯ ಹೆಸರನ್ನು ಅಂಕಿತ ಎಂದು ಮುಂದುವರೆಸಿದ್ದಾರೆ. ಅವರ ಮೊದಲ ಸಿನಿಮದಿಂದ ಸಹ ನಾಯಕಿಗೆ ಅಂಕಿತ ಎಂದೇ ಇರಬೇಕು ಎಂದು ಅವರ ಸಂಕಲ್ಪ ಯಾಕೆ ಮಾಡಿದ್ದಾರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ

ನಿರ್ದೇಶಕ ಎಂ.ಡಿ‌ ಶ್ರೀಧರ್ ,ಜಂಬೂ ಸರ್ಕಸ್ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು. ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಅವರ ವಸ್ತ್ರ ವಿನ್ಯಾಸದ ಪರಿಣಿತಿಯನ್ನು ಹೋಗಳಿ ಅವರನ್ನು ತಮ್ಮ ಮುಂದಿನ ಸಿನಿಮಗಳಲ್ಲಿ ಸಹ ಜೊತೆಯಾಗಿದ್ದರೆ ಅನುಕೂಲ ಆಗುವುದು ಎಂದು ತಿಳಿಸಿದರು.

ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಅವರಿಗೆ ಪ್ರತಿಭೆ ಹೇರಳವಾಗಿದೆ. ಅವರಿಬ್ಬರೂ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಕ್ಕೆ ಎರಲಿದ್ದಾರೆ ಎಂಬ ಭರವಸೆ ವ್ಯಕ್ತ ಮಾಡಿದರು.

ಟಾಮ್ ಅಂಡ್ ಜೆರ್ರಿ ರೀತಿಯಲ್ಲಿ ಜಂಬೂ ಸರ್ಕಸ್ ಚಿತ್ರದ ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಎಸ್ ಅನೀಶ್ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದ ಸಂಭಾಷಣೆಕಾರ ರಘು ನೀಡುವಲ್ಲಿ ವಿವರಿಸಿದರು.

ಪೋಷಕ ನಟಿ ಲಕ್ಷ್ಮಿ ಸಿದ್ದಯ್ಯ ಜಗಳಗಂಟಿಯ ಪಾತ್ರ ಮಾಡಿದ್ದೆ ಅಲ್ಲದೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಸಮಾಧಾನ ಹಾಗೂ ಸಂತೋಷ ತಂದಿದೆ ಎಂದು ವಿವರಿಸಿದರು.

ನಾಯಕ ಪ್ರವೀಣ ತೇಜ್ ಮಾತನಾಡಿ, ಚಿತ್ರ ರಂಗದಲ್ಲಿ ಇರೋದಕ್ಕೆ ನಿರ್ದೇಶಕ ಎಂ ಡಿ ಶ್ರೀಧರ್ ಕಾರಣ. ಅವರ ನಿರ್ದೇಶನದ ಸಿನಿಮಾ ಎಂದು ನಿರ್ಮಾಪಕ ಸುರೇಶ್ ಹೇಳಿದಾಗ ನಾನು ಕುಣಿದು ಕುಪ್ಪಳಿಸಿದೆ. ಅದಕ್ಕೆ ತಕ್ಕಂತೆ ಅವರು ನನಗೆ ವಿಭಿನ್ನವಾದ ಪಾತ್ರ ನಿರ್ವಹಣೆ ಸಹ ನೀಡಿ ಸಂತೋಷ ಇನ್ನೂ ಹೆಚ್ಚು ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಅಂಜಲಿ ನನಗಿಂತ ಚನ್ನಾಗಿ ನೃತ್ಯ ಮಾಡಿದ್ದಾರೆ ಎಂದು ಹೇಳಿಕೊಂಡರು.

ನಾಯಕಿ ಅಂಜಲಿ ಎಸ್ ಅನೀಶ್ ಮಾತನಾಡಿ ಒಳ್ಳೆ ಪಾತ್ರಗಳು ಕಷ್ಟ ಸಿಗುವುದು. ಅದು ನನ್ನ ಪಾಲಾಗಿದೆ ಈ ಚಿತ್ರದಲ್ಲಿ. ಇದಕ್ಕೆ ಎಲ್ಲರ ಪ್ರೋತ್ಸಾಹ ಬೇಕು ಎಂದು ಮನವಿ ಮಾಡಿಕೊಂಡರು

ಖ್ಯಾತ ಛಾಯಾಗ್ರಾಹಕ ಎ ವಿ ಕೃಷ್ಣಕುಮಾರ್ ಹಲವು ಬಾರಿ ಭವಿಷ್ಯ ನುಡಿದದ್ದು ನಿಜವಾಗಿದೆ. ಜಂಬೂ ಸರ್ಕಸ್ ಇಂದ ನಾಯಕಿ ಅಂಜಲಿ ಹಾಗೂ ನಾಯಕ ಪ್ರವೀಣ್ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ಶ್ರೀ ಮಹತಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಜಂಬೂ ಸರ್ಕಸ್ ನಿರ್ಮಾಪಕರು ಎಚ್ ಸಿ ಸುರೇಶ್. ಸಾಹಸವನ್ನು ಡಾ ರವಿ ವರ್ಮಾ ನೀಡಿದ್ದಾರೆ, ಎ ಹರ್ಷ ಮೂರು ಹಾಡುಗಳಿಗೆ ನೃತ್ಯ ನಿರ್ದೇಶನ ಒದಗಿಸಿದ್ದಾರೆ. ಜಯಂತ್ ಕಾಯಕಿಣಿ, ಡಾ ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಗೀತ ಸಾಹಿತ್ಯವಿದೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ, ಜ್ಞಾನೇಶ ಸಂಕಲನ ಓದಗಿಸಿದ್ದಾರೆ.

ಜಂಬೂ ಸರ್ಕಸ್ ಪೋಷಕ ಕಾಲವಿದರಾಗಿ ಅವಿನಾಶ್, ಅಚ್ಯುತ ಕುಮಾರ್, ರವಿಶಂಕರ್ ಗೌಡ, ಆಶಾಲತ, ಲಕ್ಷ್ಮಿ ಸಿದ್ದಯ್ಯ, ನಯನ ಶರತ್, ಜಗಗಶ್ರೀಧರ್ ದಿವಂಗತ ಮೋಹನ್ ಜುನೇಜ ಇದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin