‘ಪೆಪೆ’ ಚಿತ್ರದ ಶೋ ರೀಲ್ ನೋಡಿ ಮೆಚ್ಚಿದ ಕಿಚ್ಚ ಸುದೀಪ್
“ಒಂದು ಸರಳ ಪ್ರೇಮ ಕಥೆ” ಚಿತ್ರದ ಯಶಸ್ಸಿನಲ್ಲಿರುವ ವಿನಯ್ ರಾಜ್ ಕುಮಾರ್ ಅವರ ಮತ್ತೊಂದು ಚಿತ್ರ “ಪೆಪೆ” ಚಿತ್ರ ತಿಂಗಳಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ.
ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ” ಪೆಪೆ” ಚಿತ್ರದ ಶೋ ರೀಲ್ ನೀಡಿ ಕನ್ನಡ ಚಿತ್ರದ ಬಾದ್ ಶಾ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಸಹಜವಾಗಿ ವಿನಯ್ ರಾಜ್ ಕುಮಾರ್ ಸೇರಿ ಚಿತ್ರತಂಡದ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.
” ಪೆಪೆ” ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗಲಿದ್ದು ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪೆಪೆ ತಂಡವನ್ನು ಹಾರೈಸಲಿದ್ದು ಚಿತ್ರತಂಡಕ್ಕೆ ಮತ್ತಷ್ಟು ಆನೆ ಬಲಬಂದಂತಾಗಿದೆ.
” ಪೆಪೆ” ಸಿನಿಮಾದ ಬಗ್ಗೆ ವಿನಯ್ ರಾಜ್ ಕುಮಾರ್ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ ಸುದೀಪ್, ಇಂಥ ಸಿನಿಮಾಗಳನ್ನ ನೀವು ಮಾಡಬೇಕು. ಗುಲಾಬಿ ಹಿಡಿದು ಮರ ಸುತ್ತೋ ಪಾತ್ರಕ್ಕಿಂತ ಇಂಥ ಮಾಸ್ ಪಾತ್ರಗಳನ್ನ ಮಾಡಬೇಕು. ಪೆಪೆ ಪಾತ್ರ ನಿಮಗೆ ಒಪ್ಪುತ್ತದೆ. ಹೊಸ ಹೀರೋಗಳು ನಮ್ ಇಂಡಸ್ಟ್ರಿಗೆ ಬೇಕಾಗಿದೆ. ಈ ಸಿನಿಮಾವನ್ನು ಜನರಿಗೆ ದೊಡ್ಡ ಮಟಕ್ಕೆ ತಲುಪಿಸಿ. ಪ್ರೇಕ್ಷಕರು ಖಂಡಿತವಾಗಿ ಕೈ ಹಿಡಿಯುತ್ತಾರೆ. ನನ್ನ ಪೂರ್ತಿ ಬೆಂಬಲ ಪೆಪೆ ತಂಡದ ಮೇಲೆ ನಿಮ್ಮ ಮೇಲೆ ಇರುತ್ತದೆ ಎಂದು ಮನಸಾರೆ ಆಲ್ ದಿ ಬೆಸ್ಟ್ ಹೇಳಿ ಹರಸಿದ್ದಾರೆ
ಕಿಚ್ಚ ಸುದೀಪ್ ಅವರ ನಿವಾಸಕ್ಕೆ ವಿನಯ್ ರಾಜ್ ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಮೆಚ್ಚುಗೆಯ ಮಾತನಾಡಿರುವುದು ಅವರಲ್ಲಿ ಹರ್ಷ ತಂದಿದೆ.
ನಾಳೆ ಮಾಲ್ ಆಫ್ ಎಷಿಯಾದಲ್ಲಿ ನಡೆಯಲಿರುವ ಪೆಪೆ ಟ್ರೈಲರ್ ಲಾಂಚ್ ಇವೆಂಟ್ ಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.