ವಚನ್ ನಿರ್ದೇಶನದ ವಿಭಿನ್ನ ಕಥೆಯ ದಂತಕಥೆ; ತನಿಖಾ ಅಧಿಕಾರಿಗಳಾದ ಕಿಶೋರ್, ರಘು ಮುಖರ್ಜಿ
ಬಹುಭಾಷಾ ನಟ ಕಿಶೋರ್ ಮತ್ತು ರಘುಮುಖರ್ಜಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “ದಂತಕಥೆ” ಚಿತ್ರ ಎದುರಾಗಿದ್ದ ಅಡೆತಡೆ ಚಿತ್ರೀಕರಣ ಪೂರ್ಣಗೊಳಿಸಿದೆ. ಸದ್ಯ ಚಿತ್ರ ಡಿಐ ಹಂತದಲ್ಲಿದೆ. ಚಿತ್ರದ ಮೂಲಕ ಹೊಸದೊಂದು ಬಗೆಯ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ವಚನ್ ಮುಂದಾಗಿದ್ದಾರೆ.
ಹಲವು ವರ್ಷ ಸಹಯಾಕ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ವಚನ್, ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಮೋಡಿ ಮಾಡಲು ಸಿದ್ದವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಅನಾವರಣ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಿಸಿದ್ದಾರೆ.
ಈ ವೇಳೆ ರವಿಚಂದ್ರನ್ ಅವರು ಚಿತ್ರದ ಹೆಸರೇ ಚೆನ್ನಾಗಿದೆ, ಕ್ಯಾಮರಾಮನ್ ನವೀಶ್ ಕೌಶಲ್ಯ ಚಿತ್ರದಲ್ಲಿ ಎದ್ದು ಕಾಣುತ್ತದೆ. ಆ ನಂತರ ನಿರ್ದೇಶಕರದ್ದು ನಟ ಕಿಶೋರ್ ವೈಲೆಂಟ್ ಪಾತ್ರವನ್ನು ಸೈಲೆಂಟ್ ಆಗಿ ಮಾಡುವ ಪ್ರತಿಭಾವಂತ ನಟ. ಅವರ ಜೊತೆ ಕೆಲಸ ಮಾಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಅದೇ ರೀತಿ ರಘು ಮುಖರ್ಜಿ ಕೂಡ ಉತ್ತಮ ನಟ ಎಂದು ಪ್ರಂಶಿಸಿದರು.
ನಿರ್ದೇಶಕ ವಚನ್ ಮಾತನಾಡಿ, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತನಿಖೆಯ ಸುತ್ತ ನಡೆಯುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ, ಕೊರೊನಾ ಮುಂಚೆ ಆರಂಭವಾಗಿದ್ದ ಚಿತ್ರ ಆನಂತರ ಇಡೀ ಚಿತ್ರರಂಗ ಸ್ತಬ್ಧವಾಗಿದ್ದ ನಮ್ಮ ಚಿತ್ರವೂ ನಿಂತುಹೋಯಿತು. ಕರಾಳ ಅಧ್ಯಾಯ ಮುಗಿದ ನಂತರ ಚಿತ್ರೀಕರಣ ಆರಂಭಿಸಿ ಪೂರ್ಣಗೊಳಿಸಿದ್ದೇವೆ. ತನಿಖಾ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಘಟನೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಚಿತ್ರದ ತಿರುಳು.
ಚಿತ್ರದಲ್ಲಿ ರಘುಮುಖರ್ಜಿ ಎಸ್ ಐ ಪಾತ್ರದಲ್ಲಿ ಹಾಗು ಕಿಶೋರ್ ಅವರು ವಿಶೇಷ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಲೆ ಸುಲಿಗೆ, ದರೋಡೆ ಪ್ರಕರಣವನ್ನು ಹೇಗೆ ನಿಬಾಯಿಸಯತ್ತಾರೆ ಎನ್ನುವುದು ಚಿತ್ರದ ಕುತೂಹಲದ ಸಂಗತಿ ಎನ್ನುವ ವಿವರ ನೀಡಿದರು.
ಬೆಂಗಳೂರು, ಮೈಸೂರು ಸೇರಿದಂತೆ ಮತ್ತಿತರ ಕಡೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಟಾಕಿ ಭಾಗ ಸಂಪೂರ್ಣವಾಗಿ ಮುಗಿದಿದೆ. ಇನ್ನೊಂದು ಹಾಡು ಬಾಕಿ ಇದ್ದು ಸದ್ಯದಲ್ಲಿಯೇ ಅದರ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರವನ್ನು ನವಂಬರ್ ವೇಳೆಗೆ ತೆರೆಗೆ ತರುವ ಉದ್ದೇಶವಿದೆ ಎಂದರು.
ದಂತಕಥೆ ಚಿಕ್ಕಕತೆ ಆಧರಿಸಿ ಮಾಡಿದ ಚಿತ್ರ. ಒಂದೊಂದು ಕಥೆಗೂ ಒಂದೊಂದು ಹಿನ್ನೆಲೆ ಇರುತ್ತದೆ. ಅದೇ ರೀತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದ ಒಂದು ಪ್ರಕರಣವನ್ನು ಮುಂದಿಟ್ಟುಕೊಂಡು ಚಿತ್ರ ಮಾಡಿದ್ದೇವೆ.ಚಿತ್ರ ತಡವಾದರೂ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ.ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ರಘು ಮುಖರ್ಜಿ, ಕಿಶೋರ್, ರವಿಶಂಕರ್ ಸೇರಿದಂತೆವಿನೋದ್ ಗೊಬ್ಬರಗಾಲ, ವಿನಯ್ ಕೃಷ್ಣ ಮೂರ್ತಿ ಸೇರಿದಂತೆ ಮತ್ತಿತರಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆಯುವ ಕಥೆಯನ್ನು ನೈಜವಾಗಿ ನಡೆದಿದೆಯೋ ಅನ್ನುವ ಮಟ್ಟಿಗೆ ಚಿತ್ರವನ್ನು ಕಟ್ಟಿಕೊಟ್ಟಿದ್ದೇವೆ. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿತ್ರಕ್ಕೆ ಅಡ್ಡಿಯಾಯಿತು. ಈಗ ಚಿತ್ರೀಕರಣ ಮುಗಿಸಿದ್ದೇವೆ.ಸದ್ಯದಲ್ಲಿಯೇ ಚಿತ್ರ ತೆರೆಗೆ ತರುತ್ತೇವೆ.ಲೂಸಿಯಾ ಪವನ್ ಕುಮಾರ್ ಅವರ ಅಸೋಸಿಯೇಟ್ ಆಗಿ ಟೂಯರ್ನ್, ತೆಲುಗು ತಮಿಳು ಚಿತ್ರದಲ್ಲಿ ಕೆಲಸ ಮಾಡಿದ್ದೆ. ಕನ್ನಡದಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗಿದ್ದೇನೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ನಟ ಕಿಶೋರ್ ಮಾತನಾಡಿ ಸಿನಿಮಾದ ಐಡಿಯಾ ಹುಟ್ಟಿ ಅದನ್ನು ಜನರ ಮುಂದೆ ಬರುವ ತನಕ ಕಟ್ಟಿಕೊಡುವೇ ಹಾದಿಯೇ ಒಂದು ದಂತಕಥೆ. ಹೊಸತನದ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆಯೇ ಇದು ಎಂದರೆ ಮತ್ತೊಬ್ಬ ನಟ ರಘು ಮುಖರ್ಜಿ, ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಜನರಿಗೆ ಇಷ್ಟವಾಗಲಿದೆ ಎಂದರು.
ನಾಯಕಿ ಯಶ ಶಿವಕುಮಾರ್, ನಾಲ್ಕು ವರ್ಷದ ಹಿಂದೆ ಆರಂಭವಾದ ಕಥೆ ಚಿತ್ರದಲ್ಲಿ ನನ್ನದು ಪ್ರಾಚ್ಯವಸ್ತುಶಾಸ್ತ್ರ ವಿದ್ಯಾರ್ಥಿಯ ಪಾತ್ರ ಎನ್ನುವ ವಿವರ ನೀಡಿದರು
ನಿರ್ಮಾಪಕರಾದ ಧರಣಿ ಎಸ್ ಕೆ ಗೌಡ ಮಾತನಾಡಿ ಪೂನಾದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದೇನೆ. ಕಥೆ ಇಷ್ಟವಾಯಿತು ಸಿನಿಮಾ ಮಾಡುತ್ತಿದ್ದೇನೆ ಎಂದರೆ ಮತ್ತೊಬ್ಬ ನಿರ್ಮಾಪಕ ಅರುಣ್ ಕುಮಾರ್ ಕನ್ನಡದಲ್ಲಿ ವಿಭಿನ್ನ ರೀತಿಯ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಬ್ಬ ನಿರ್ಮಾಪಕ ಜನಾರ್ಧನ್, ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಎಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.
ಸಂಭಾಷಣೆ ಬರೆದಿರುವ ಮಾಸ್ತಿ, ಇಡೀ ಚಿತ್ರತಂಡದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಛಾಯಾಗ್ರಹಕ ನವೀನ್ ಅವರನ್ನು ನಟಿ ಅನುಪ್ರಭಾಕರ್ ¸ಸೇರಿದಂತೆ ಅನೇಕರು ಮೆಚ್ಚುಗೆ ಮಾತನಾಡಿದರು.