ಅಕ್ಷರಾ ಚಿತ್ರದ ಟ್ರೈಲರ್ ಬಿಡುಗಡೆ : ಹೊಸ ತಂಡದ ಹೊಸ ಕನಸು
ಸಾಹಸ ಸಿಂಡ ಡಾ. ವಿಷ್ಣುವರ್ಧನ್ ಅವರೊಂದಿಗೆ “ಸಿರಿವಂತ” ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಭುವನ್ ಚಂದ್ರ, “ಕಿಡಿ” ಚಿತ್ರದ ಮೂಲಕ ನಾಯಕನಾಗಿ ಗಮನ ಸೆಳೆದವರು. ಇದೀಗ “ಅಕ್ಷರಾ” ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಂಗದಲ್ಲಿ ಭರವಸೆ ಮೂಡಿಸಲು ಮುಂದಾಗಿದ್ದಾರೆ.
ಚಿತ್ರದ ಚಿತ್ರದ ಟೀಸರ್ ಬಿಡುಗಡೆ ಮಾಡಿದ ನಟ ಪ್ರತಾಪ್ ನಾರಾಯಣ್ ಸೇರಿದಂತೆ ಹಲವರು ಚಿತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದರು…
ಹೊಸ ತಂಡ ಹೊಸ ಕನಸಿನೊಂದಿಗೆ ಅಕ್ಷರಾ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದೆ. ಟ್ರೈಲರ್ ಬಿಡುಗಡೆ ಬಳಿಕ ತಂಡ ಮಾಹಿತಿ ನೀಡಿತು.
ನಟ ಭುವನ್ ಚಂದ್ರ ಮಾತನಾಡಿ ನಿರ್ದೇಶಕ ನರೇಂದ್ರ ಬಾಬು ಅವರು ಹೇಳಿದ ಅಕ್ಷರಾ ಚಿತ್ರದ ಕಥೆ ಇಷ್ಟವಾಯಿತು. ನಟಿಸಿದ್ದೇನೆ. ನಾಡಿನ ಹಲವು ಭಾಗಗಳಲ್ಲಿ ನರಬಲಿ ಎನ್ನುವುದು ಇನ್ನೂ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರ ನೋಡಿ ಜನರ ಹರಸಿದರೆ ನಮ್ಮ ಪ್ರಯತ್ನ ಸಾರ್ಥಕ ಎನ್ನುವ ವಿವರ ನೀಡಿದರು
ನಿರ್ಮಾಪಕ ಕಿಶೋರ್ ಕುಮಾರ್ ಜಿ ಮಾಹಿತಿ ನೀಡಿ ಮಾತೃಭಾಷೆ ತೆಲುಗು ಆದರೂ ಕನ್ನಡ ನಾಡಿನ ಪ್ರೀತಿ ಅಭಿಮಾನದಿಂದ ಚಿತ್ರ ಮಾಡಿದ್ದೇನೆ. ಚಿಕ್ಕಂದಿನಿಂದಿರುವಾಗಲೇ ಎಲ್ಲರೂ ತೆಲುಗು ನಟ ನಿತಿನ್ ಥರ ಕಾಣ್ತೀಯ ಅಂತ ಹೇಳುತ್ತಿದ್ದರು.ಹೀಗಾಗಿ ಚಿತ್ರರಂಗದ ಕಡೆ ವ್ಯಾಮೋಹ ಹೆಚ್ಚಾಯಿತು, ಚಿತ್ರ ಕೂಡ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ನರೇಂದ್ರ ಬಾಬು ಮಾತನಾಡಿ ಚಿತ್ರದ ಮೂಲಕ ಒಳ್ಳೆಯ ಕಥೆಯನ್ನು ತೆರೆಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಸಹಕಾರ ಪೆÇ್ರೀತ್ಸಾಹ ಇರಲಿ ಎಂದು ಕೇಳಿಕೊಂಡರು.
ಭವನ್ ಚಂದ್ರಗೆ ನಾಯಕಿಯಾಗಿ ಅಲ್ಮಾಸ್ ಮೋಟಿವಾಲ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮಡಿಕೇರಿ,ಶನಿವಾರ ಸಂತೆ,ಬೆಂಗಳೂರು ಸೇರಿದಂತೆ ಮತ್ತಿತರ ಕಡೆ 40 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂದರು
ಚಿತ್ರದಲ್ಲಿ ರಮೇಶ್ ಪಂಡಿತ್, ಭಜರಂಗಿ ಪ್ರಸನ್ನ ರಾಜ್‍ಉದಯ್, ಕಿಶೋರ್ ಕುಮಾರ್.ಜಿ.ರಮಿತ್ ಎಲಕ್ಕಿ, ರಕ್ಷಿತ್ ತಾರಾಬಳಗದಲ್ಲಿದ್ದಾರೆ.ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರು ಮಾಹಿತಿ ಹಂಚಿಕೊಂಡರು.
ಚಿತ್ರದಲ್ಲಿ ಸುಷ್ಮಾ, ಸ್ವಾತಿ, ಮಧೂರ, ಚೈತ್ರಾ, ರಾಜ್ ಉದಯ್ ಸೇರಿದಂತೆ ಮತ್ತಿತರು ಮಾಹಿತಿ ನೀಡಿದರು.