"Desai" starring actor Praveen in the lead will hit the screens this week
ನಟ ಪ್ರವೀಣ್ ನಾಯಕರಾಗಿರುವ “ದೇಸಾಯಿ” ಚಿತ್ರ ಈ ವಾರ ತೆರೆಗೆ

ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿರುವ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನದ “ದೇಸಾಯಿ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

“ದೇಸಾಯಿ” ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಉತ್ತರ ಕರ್ನಾಟಕದ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರದ ರಚನೆ ಹಾಗೂ ನಿರ್ದೇಶನ ನಾಗಿರೆಡ್ಡಿ ಭಡ ಅವರದು. ಬಾದಾಮಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

“ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಮೈಸೂರಿನ ರಾಧ್ಯ ಇದ್ದಾರೆ. “ಒರಟ” ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಾಗಿರೆಡ್ಡಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ನಿರ್ಮಾಪಕ ಮಹಾಂತೇಶ್ ಅವರಿಗೂ “ದೇಸಾಯಿ” ಮೊದಲ ನಿರ್ಮಾಣದ ಚಿತ್ರ.