DK Sivakumar released the show reel of the movie "Tamate

“ತಮಟೆ” ಚಿತ್ರದ ಶೋ ರೀಲ್ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್ - CineNewsKannada.com

“ತಮಟೆ” ಚಿತ್ರದ ಶೋ ರೀಲ್ ಬಿಡುಗಡೆ ಮಾಡಿದ ಡಿಕೆ ಶಿವಕುಮಾರ್

ವಂದನ್ ಎಂ ನಿರ್ಮಾಣದ, ಮಯೂರ್ ಪಟೇಲ್ ಮೊದಲ ನಿರ್ದೇಶನದ ಹಾಗೂ ಮದನ್ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ತಮಟೆ” ಚಿತ್ರದ ಶೋ ರೀಲ್ ಅನ್ನು ಉಪ ಮುಖ್ಯಮಂತ್ರಿವಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್,ನಾನು ಕೂಡ ಟೂರಿಂಗ್ ಟಾಕೀಸ್ ನಡೆಸುತ್ತಿದೆ ಸಿನಿಮಾ ನೋಡಿ ಇಪ್ಪತ್ತೈದು ವರ್ಷಗಳಾಗಿದೆ. ನಮ್ಮದೇ ಚಿತ್ರಮಂದಿರಗಳಿದ್ದರೂ ಸಹ ಸಿನಿಮಾ ನೋಡಿಲ್ಲ. ಎಷ್ಟೋ ದಿನಗಳ ನಂತರ “ತಮಟೆ” ಚಿತ್ರ ದ ಶೋ ರೀಲ್ ಅನ್ನು ಅರ್ಧ ಗಂಟೆ ಕಾಲ ವೀಕ್ಷಿಸಿದ್ದೇನೆ. ಚಿತ್ರ ತುಂಬಾ ಚೆನ್ನಾಗಿದೆ. ಮುಂದೆ ಸಮಯ ಸಿಕ್ಕಾಗ ಪೂರ್ತಿ ಚಲನಚಿತ್ರ ವೀಕ್ಷಿಸುತ್ತೇನೆ.‌ ಮದನ್ ಪಟೇಲ್ ಮೊದಲಿನಿಂದಲೂ ಪರಿಚಯ. ಅವರ ಮಗ ಮಯೂರ್ ಪಟೇಲ್ ಈ ಚಿತ್ರವನ್ನು ನಿರ್ದೇಶಿಸಿರುವ ವಿಚಾರ ತಿಳಿದು ಖುಷಿಯಾಯಿತು. ಗ್ರಾಮೀಣ ಸೊಗಡಿನ ಹಾಗೂ “ತಮಟೆ” ವಾದ್ಯಗಾರನೊಬ್ಬನ ಜೀವನದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮದನ್ ಪಟೇಲ್ ಉತ್ತಮವಾಗಿ ಅಭಿನಯಿಸಿದ್ದಾರೆ. “ತಮಟೆ” ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಮದನ್ ಪಟೇಲ್ ಮಾತನಾಡಿ ಕೆಲವು ವರ್ಷಗಳ ಹಿಂದೆ . ಕಾದಂಬರಿ ಬರೆದಿದ್ದೆ. ಈಗ ಅದನ್ನು ನನ್ನ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ. “ತಮಟೆ” ವಾದ್ಯಗಾರನೊಬ್ಬನ ಜೀವನ ಆಧರಿಸಿದ ಕಥೆಯಿದು. ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ.‌ ಈವರೆಗೂ ಮಾಡಿರದ ಪಾತ್ರವಿದು. ಚಿತ್ರಕ್ಕೆ ಚಿತ್ರಕಥೆ ಬರೆಯುವುದರೊಂದಿಗೆ ಸಂಗೀತ ನೀಡಿ, ನಿರ್ಮಾಣ ಮಾಡಿದ್ದೇನೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ “ತಮಟೆ” ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ ಎಂದರು

ನಿರ್ದೇಶಕ ಮಯೂರ್ ಪಟೇಲ್ ಮಾತನಾಡಿ ಅಪ್ಪ ಬರೆದಿರುವ “ತಮಟೆ” ಕಾದಂಬರಿಯನ್ನು ಓದುತ್ತಿದ್ದಾಗ , ಈ ಕಾದಂಬರಿಯನ್ನು ಸಿನಿಮಾ ಮಾಡುವ ಆಸೆಯಾಯಿತು. ಅಪ್ಪನ‌ ಬಳಿ ಹೇಳಿದೆ. ಅಪ್ಪ, ನೀನೇ ಚಿತ್ರವನ್ನು ನಿರ್ದೇಶನ ಮಾಡು. ನಾನು ನಿರ್ಮಾಣ ಮಾಡುತ್ತೇನೆ ಎಂದರು. ಸಿನಿಮಾದ ಮುಖ್ಯಪಾತ್ರದ ಅನ್ವೇಷಣೆಯಲ್ಲಿದ್ದಾಗ ಎಲ್ಲರೂ ಈ ಪಾತ್ರವನ್ನು ನಿಮ್ಮ ತಂದೆ ಅವರೆ ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಅಪ್ಪ “ತಮಟೆ” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.

ಪ್ರತಿಭಾವಂತ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನುರಿತ ತಂತ್ರಜ್ಞರು ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರ ಸಹಕಾರದಿಂದ “ತಮಟೆ” ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin