Fans are heartbroken for "Prema Shringara" of the movie 'Kananjaru'

ಕಣಂಜಾರು ” ಚಿತ್ರದ “ಪ್ರೇಮ ಶೃಂಗಾರ” ಕ್ಕೆ ಮನಸೋತ ಅಭಿಮಾನಿಗಳು - CineNewsKannada.com

ಕಣಂಜಾರು ” ಚಿತ್ರದ “ಪ್ರೇಮ ಶೃಂಗಾರ” ಕ್ಕೆ ಮನಸೋತ ಅಭಿಮಾನಿಗಳು

ಕಣಂಜಾರು’, ಚಿತ್ರದ ಹೆಸರೆ ವಿಶೇಷ ಮತ್ತು ವಿಭಿನ್ನವಾಗಿದೆ.
‘ಪ್ರೇಮ ಶೃಂಗಾರದ’ ಮೂಲಕ ಗಮನ ಸೆಳೆಯುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿಯ ಸಿನಿಮಾಗಳಲ್ಲಿ ಒಂದು
.

ಆರ್.ಬಾಲಚಂದ್ರ ನಿರ್ಮಿಸಿ, ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಚಿತ್ರ ಕಣಂಜಾರು. ಕ್ಯಾಚಿ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಕಣಂಜಾರು ಸದ್ಯ ರೋಮ್ಯಾಂಟಿಕ್ ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ.

ಈಗಾಲೇ ಚಿತ್ರೀಕರಣ ಮುಗಿಸಿ ಬಿಡುಗಡೆ ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದೆ.

ಕಣಂಜಾರು ಚಿತ್ರದ ಸುಂದರವಾದ ಹಾಡನ್ನು ಸ್ಯಾಂಡಲ್ವುಡ್ ನ ಅನೇಕ ಗಣ್ಯರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಾಟೇರ, ಭೀಮ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ಡೈಲಾಗ್ ಬರೆದಿರುವ ಮಾಸ್ತಿ, ನಟರಾದ ನಕುಲ್ ಗೌಡ, ಶ್ರೇಯಸ್ ಮಂಜು, ವಿಕ್ಕಿ, ಹಾಗೂ ನಿರ್ದೇಶಕ ಮಹೇಶ್ ಗೌಡ, ನಟಿಯರಾದ ಕಾರುಣ್ಯ ರಾಮ್, ಅನುಷಾ ರೈ ಸೇರಿದಂತೆ ಅನೇಕ ಗಣ್ಯರು ಕಣಂಜಾರು ಸಿನಿಮಾದ ಹಾಡನ್ನು ರಿಲೀಸ್ ಮಾಡಿ ಸಿನಿಮಾಗೆ ಸಾಥ್ ನೀಡಿದರು.

ನಾಯಕ ಆರ್ ಬಾಲಚಂದ್ರ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಪೂರ್ವ ಸಿನಿಮಾ ಖ್ಯಾತಿಯ ನಟಿ ಅಪೂರ್ವಾ ನಾಯಕಿಯಾಗಿ ಮಿಂಚಿದ್ದಾರೆ. ಈ ಹಾಡಿನಲ್ಲಿ ಅಪೂರ್ವಾ ಸಿಕ್ಕಪಟ್ಟೆ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

‘ಪ್ರೇಮ ಶೃಂಗಾರ…’ ಸಾಲುಗಳಿರುವ ಈ ಪ್ರೇಮ ಗೀತೆ ನಿಜಕ್ಕು ರವಿಚಂದ್ರನ್ ಅವರ ಸಿನಿಮಾಗಳ ಹಾಡುಗಳನ್ನು ನೆನಪಿಸುತ್ತಿದೆ. ಅಂದಹಾಗೆ ಈ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆವಿದೆ, ಸಂತೋಷ್ ನಾಯಕ್ ಸಾಹಿತ್ಯ ರಚಿಸಿದ್ದು ಮೋಹನ್ ಮಾಸ್ಟರ್ ಕೊರಿಯೋಗ್ರಫಿವಿದೆ.

ನಾಯಕ, ನಿರ್ದೇಶಕ ಬಾಲಚಂದ್ರ, ‘ಯೂಟ್ಯೂಬ್ ನಲ್ಲಿ ರಿಲೀಸ್ ಮಾಡೋಣ ಅಂತ ಅಂದುಕೊಂಡಿದ್ದೆ. ಆದರೆ ಕೆಲವರು ಅದ್ಭುತವಾಗಿದೆ ಅಂತ ಹೇಳಿದ್ರು ಹಾಗಾಗಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿದ್ದೀವಿ. ನನ್ನನ್ನು ಹೊಸಬ ಅಂತ ಅಂದುಕೊಳ್ಳದೆ ನಾಯಕಿ ಅಪೂರ್ವಾ ಕೂಡ ಒಪ್ಪಿಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ತುಂಬಾ ಸಹಾಯ ಮಾಡಿದ್ದಾರೆ. ಇತ್ತೀಚಿಗಷ್ಟೇ ತರುಣ್ ಸುಧೀರ್ ಮತ್ತು ಸೋನಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಈ ಹಾಡನ್ನು ಅರ್ಪಿಸುತ್ತಿದ್ದೇನೆ’ ಎಂದರು.

ನಾಯಕಿ ಅಪೂರ್ವಾ ಮಾತನಾಡಿ, ‘ಸಿನಿಮಾದ ಟೀಸರ್ ರಿಲೀಸ್ ಆದ್ಮೇಲೆ ಅದ್ಭುತವಾದ ರೆಸ್ಪಾನ್ಸ್ ಬಂದಿದೆ. ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದೆ. ಹಾಗಾಗಿ ಈ ಸಿನಿಮಾವನ್ನು ನಾನು ಒಪ್ಪಿಕೊಂಡೆ. ಮೊದಲು ಕಥೆಗೆ ಆದ್ಯತೆ ನೀಡುತ್ತೇನೆ. ಜನ ಸಿನಿಮಾ ನೋಡಲ್ಲ ಅಂತ ಹೇಳ್ತಾರೆ ಆದ್ರೆ ಒಳ್ಳೆ ಸಿನಿಮಾ ಬಂದ್ರೆ ಖಂಡಿತ ಜನ ಥಿಯೇಟರಿಗೆ ಬರ್ತಾರೆ. ಈ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ’ ಎಂದರು. ಸದಿಯ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಕಣಂಜಾರು ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ ಎಂದು ಹೇಳಿದರು.

Editor

2 thoughts on “ಕಣಂಜಾರು ” ಚಿತ್ರದ “ಪ್ರೇಮ ಶೃಂಗಾರ” ಕ್ಕೆ ಮನಸೋತ ಅಭಿಮಾನಿಗಳು

  1. ಹಾಡು ಅದ್ಬುತವಾಗಿ ಮತ್ತು ಕಲರ್ ಫುಲ್ ಆಗಿ ಮೂಡಿ ಬಂದಿದೆ ಸಂಗೀತ ಸಂಯೋಜನೆಯ ಜೊತೆ ಜೊತೆಗೆ ಕ್ಯಾಮೆರಾ ವರ್ಕ್ ತುಂಬಾ ಅದ್ಬುತವಾಗಿದೆ. ಉತ್ತಮ ಛಾಯಾಗ್ರಹಣ ಎಂದರು ತಪ್ಪಾಗಲಾರದು ಇಡೀ ಚಿತ್ರ ತಂಡಕ್ಕೆ ಶುಭವಾಗಲಿ 💐.

  2. Haadu thumba chennagide ravichandran sir tara colortumbsidare bahala chennagide camera man yaaru idakke anno maahiti iddidre olledittu. Ottinalli camera work chennagide artical bareyuvaga techinication kooda nenapallittu bariyabeku patrikeyavaru adenu baritiro eano🙏

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin