“ಫಾದರ್ ” ತಂದೆ- ಮಗನ ಭಾವನಾತ್ಮಕ ಕಥನ – ನಿರ್ಮಾಪಕ ಆರ್.ಚಂದ್ರು
ಆರ್. ಚಂದ್ರು. ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ. ಸಧಬಿರುಚಿಯ ಚಿತ್ರಗಳ ನಿರ್ಮಾಪಕ. ಯಾವುದೇ ಕೆಲಸ ಮಾಡಿದರೂ ಅದರಲ್ಲೊಂದು ವಿಭಿನ್ನತೆ ಮತ್ತು ವಿಶೇಷತೆ ಇದ್ದೇ ಇರಲಿದೆ. ಇದೀಗ ” ಫಾದರ್ ” ಚಿತ್ರದ ಮೂಲಕ ತಂದೆ – ಮಗನ ಭಾವನಾತ್ಮಕ ಕಥೆಯನ್ನು ಮುಂದಿಟ್ಟುಕೊಂಡು ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ

ಕಬ್ಜ” ಚಿತ್ರದ ನಂತರ ಆರ್ ಚಂದ್ರು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ ” ಫಾದರ್” . ನಟ ಡಾರ್ಲಿಂಗ್ ಕೃಷ್ಣ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ತಂದೆ- ಮಗನಾಗಿ ಕಾಣಿಸಿಕೊಂಡಿರುವ ಸೆಂಟಿಮೆಂಟ್ ಚಿತ್ರ. ಈ ಕಾರಣಕ್ಕಾಗಿಯೇ ಚಿತ್ರ ಬಿಡುಗಡೆಗೆ ಮುನ್ನವೇ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು ರಾಜ್ ಮೋಹನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
“ಫಾದರ್ ” ಚಿತ್ರದ ಮೋಷನ್ ಪೋಸ್ಟರ್ ಅನ್ನು ನಿರ್ಮಾಪಕ ಆರ್. ಚಂದ್ರು ಅವರ ತಂದೆ ರಾಮಣ್ಣ ಬಿಡುಗಡೆ ಮಾಡಿ ಮಗನ ಚಿತ್ರಕ್ಕೆ ಮನದುಂಬಿ ಹಾರೈಸಿದರು. ಈ ವೇಳೆ ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಚಂದ್ರು ಅವರ ಹಿತೈಷಿಗಳು ,ಆಪ್ತರು ಭಾಗಿಯಾಗಿ ಚಿತ್ರಕ್ಕೆ ಶುಭ ಕೋರಿದರು.

ಈ ವೇಳೆ ಮಾತಿಗಿಳಿದ ನಿರ್ಮಾಪಕ ಆರ್. ಚಂದ್ರು, ಪ್ರತಿಯೊಬ್ಬರಿಗೂ ಅವರ ತಂದೆಯ ಮೇಲೆ ಅಪಾರ ಪ್ರೀತಿ ಇದ್ದೆ ಇರುತ್ತದೆ ಅದನ್ನು ಪದಗಳಲ್ಲಿ ವರ್ಣಿಸಲು ಅಸಾದ್ಯ. ಮೋಷನ್ ಪೋಸ್ಟರ್ ಮೂಲಕ ತಂದೆಯ ಮೌಲ್ಯ ಎಷ್ಟು ಎನ್ನುವುದನ್ನು ತೋರಿಸಲಾಗಿದೆ. ಇಂತಹ ಅನೇಕ ವಿಷಯಗಳು ” ಫಾದರ್ ” ಚಿತ್ರದಲ್ಲಿವೆ. ನಿರ್ದೇಶಕ ರಾಜ್ ಮೋಹನ್ ಚಿತ್ರದ ಒಂದು ಸಾಲಿನ ಕಥೆ ಕೇಳಿ ಥ್ರಿಲ್ ಆಗಿದ್ದೆ. ಅದಕ್ಕೆ ಇನ್ನಷ್ಟು ವಿಷಯಗಳನ್ನು ಸೇರಿಸಿ ಚಿತ್ರ ಮಾಡಿದ್ದೇವೆ. ಮುಂದಿನ ವರ್ಷದ ಮದ್ಯ ಭಾಗದಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.
ತಂದೆ – ಮಗನ ನಡುವಿನ ಬಾಂಧವ್ಯದ ಕಥೆ ಚಿತ್ರದ ತಿರುಳು.ಇದರ ಜೊತೆಗೆ ಇನ್ನಷ್ಟು ಕಥೆಗಳು ಇವೆ. ಹೊಸತನದ ವಿಷಯಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುವ ಕಥೆಗಳೊಂದಿಗೆ ಜನರ ಮುಂದೆ ಬರುತ್ತೇವೆ. ನಾಯಕ ಡಾರ್ಲಿಂಗ್ ಕೃಷ್ಣ ನಿರ್ದೇಶನ, ನಟನೆಯ ಲವ್ ಮಾಕ್ಟೇಲ್ ಸೀಕ್ವೆಲ್ ಕೂಡ ಬಿಡುಗಡೆಗೆ ಸಿದ್ದವಾಗಿದೆ, ಹೀಗಾಗಿ ಇಬ್ಬರೂ ಚರ್ಚೆ ನಡೆಸಿ ಸೂಕ್ತ ಸಮಯದಲ್ಲಿ ಚಿತ್ರವನ್ನು ಪ್ರೇಪಕ್ಷಕರ ಮುಂದೆ ಇಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು
ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ ತಂದೆ -ಮಗನ ಕಥೆಗಳು ಸಾಕಷ್ಟು ಮೂಡಿಬಂದಿವೆ, ಈ ಮಾದರಿ ಕಥೆ ನೋಡಿಲ್ಲ, ಕೇಳಿಲ್ಲ, ಬಹುದಿನದಿಂದ ಕೌಟಂಬಕ ಪ್ರಧಾನ ಚಿತ್ರ ಮಾಡುವ ಆಸೆ ಇತ್ತು. ಅದು ಫಾದರ್ ಚಿತ್ರದ ಮೂಲಕ ನೆರವೇರಿದೆ. ಜನರ ಮನಸಲ್ಲಿ ಬಹಳ ದಿನಗಳವರೆಗೆ ಉಳಿಯುವ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕಿ ಅಮೃತಾ ಅಯ್ಯಂಗಾರ್ ಮಾತನಾಡಿ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ತಂದೆ ಮಗನ ಕಥೆ ಎಲ್ಲರಿಗೂ ಇಷ್ಟವಾಗಲಿದೆ. ಜೊತೆಗೆ ನನ್ನ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ ಎಂದರು.
ನಟ ನಾಗಭೂಷಣ ಮಾತನಾಡಿ ನಂದು ಕೃಷ್ಣ ಇಬ್ಬರದೂ ಲಕ್ಕಿ ಜೋಡಿ. ಮೂರನೇ ಸಲ ಒಂದಾಗಿದ್ದೇವೆ. ಕಥೆ ಕೇಳಿ ಕೃಷ್ಣ ಅವರು ಪಾತ್ರವನ್ನು ನಾಗಭೂಷಣ ಮಾಡಿದ್ದರೆ ಚೆನ್ನಾಗಿರತ್ತೆ ಎಂದು ಹೇಳಿದ್ದರಂತೆ. ಒಳ್ಳೆಯ ತಂಡದಲ್ಲಿರುವ ಖುಷಿಯಿದೆ. ಇದೊಂದು ಎಮೋಷನಲ್ ಚಿತ್ರವಾದರೂ ಮನರಂಜನೆಗೆ ಕೊರತೆ ಇಲ್ಲ ಎಂದು ಹೇಳಿದರು.
ನಿರ್ದೇಶಕ ರಾಜ್‌ಮೋಹನ್ ಮಾತನಾಡಿ ಕನ್ನಡದಲ್ಲಿ ಮೊದಲ ಚಿತ್ರ. ನಿರ್ಮಾಪಕ ಆರ್. ಚಂದ್ರು ಫಾದರ್ ಕಥೆ ಕೇಳಿ ಒಪ್ಪಿಕೊಂಡರು.ಹೀಗಾಗಿ ಚಿತ್ರ ಸಿದ್ದವಾಗಿದೆ. ಚಿತ್ರದಲ್ಲಿ ನಟಿಸಿರುವ ಎಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರು.

ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಮಾತನಾಡಿ ಚಿತ್ರದ ಕಥೆಯೇ ತುಂಬಾ ಅದ್ಬುತವಾಗಿದೆ ಜೀವನದಲ್ಲಿ ತಂದೆಯ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.ಎಲ್ಲರ ನಟನೆ ಕೂಡ ಅದ್ಭುತವಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ ಎಂದರು
ಸಾಹಿತಿ ಕಿನ್ನಾಳ ರಾಜ್ ಈ ಚಿತ್ರದ ಮೂರು ಹಾಡು ಬರೆದಿದ್ದಾರೆ. ಡ್ರೋಣ್ ಪ್ರತಾಪ್,ಸೇರಿದಂತೆ ಚಂದ್ರು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು


