“ಫಿನಿಕ್ಸ್ “ ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಬೆಂಕಿ: ನಟ ಭಾಸ್ಕರ್ ಶೆಟ್ಟಿ ಪಾರು

ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಫೀನಿಕ್ಸ್” ಚಿತ್ರದ ಚಿತ್ರೀಕರಣದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಕಲಾವಿದ ಭಾಸ್ಕರ್ ಶೆಟ್ಟಿ ಕೂದಲೆಳೆಯ ಅಂತರದಿಂದ ಪಾರಾಗಿದ್ಧಾರೆ.

ಕನಕಪುರ ರಸ್ತೆಯ ವಡೇರಹಳ್ಳಿಯಲ್ಲಿ ಚಿತ್ರದ ಅಂತಿಮ ಹಂತದ ಚಿತ್ರೀಕರಣ ವೇಳೆ ಬೆಂಕಿ ತಗುಲು ಕೈಕಾಲು ಸೇರಿದಂತೆ ಬೆಂಕಿಯಿಂದ ಸುಟ್ಟಗಾಯಗಳಾಗಿದ್ದು ಯಾವುದೇ ದೊಡ್ಡ ಅನಾಹುತವಾಗದಂತೆ ಪಾರಾಗಿದ್ಧಾರೆ, ಚಿತ್ರದಲ್ಲಿ ನಾಯಕ ನಟನಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಹಲವು ಮಹಿಳೆಯರು ಪೊರಕೆಯಲ್ಲಿ ಹೊಡೆಯುವ ಸನ್ನಿವೇಶ ಚಿತ್ರೀಕರಣ ಮಾಡಲಾಗಿತ್ತಿತ್ತು, ಆ ಬಳಿಕ ಬೆಂಕಿ ಹಚ್ಚುವ ಸನ್ನಿವೇಶದಲ್ಲಿ ಈ ಅವಘಡ ಸಂಭವಿಸಿದೆ.
ಹೊಡೆದಾಟದ ಸನ್ನಿವೇಶದಲ್ಲಿ ಈ ಘಟನೆ ನಡೆದಿದೆ, ಚಿತ್ರೀಕರಣದ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದ್ಧಾರೆ, ಇದರಿಂದ ನಟ ಭಾಸ್ಕರ್ ಶೆಟ್ಟಿ ಅಪಾಯದಿಂದ ಪಾರಾಗಿದ್ಧಾರೆ
ಇದರಿಂದ ಚಿತ್ರತಂಡ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ. ಚಿತ್ರೀಕರಣ ಸ್ಥಳದಲ್ಲಿದ್ದ ಚಿತ್ರತಂಡದ ಸದಸ್ಯರು ಬಾಸ್ಕರ್ ಶೆಟ್ಟಿಗೆ ಕಾಲಿಗೆ ತಗುಲಿದ್ದ ಬೆಂಕಿ ನಂದಿಸಿದ್ದಾರೆ.

.ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ಭಾಸ್ಕರ್ ಶೆಟ್ಟಿ,
“ಫಿನಿಕ್ಸ್” ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ವಿಲನ್ ಅನ್ನು ಹಿಡಿಯಲು ಅವನಿರುವ ಸ್ಥಳಕ್ಕೆ ಹೋಗುತ್ತೇನೆ. ಆಗ ಅಲ್ಲಿದವರು ನನ್ನ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಸನ್ನಿವೇಶದ ಚಿತ್ರೀಕರಣದ ಸಂದರ್ಭ. ಈ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಯಿತು. ತಕ್ಷಣ ಚಿತ್ರತಂಡದವರು ನನ್ನನ್ನು ಆರೈಕೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರೂ ಆಗಿರುವ ಓಂಪ್ರಕಾಶ್ ರಾವ್ ಅವರು ಸಹ ನನ್ನ ವಿಶೇಷ ಕಾಳಜಿ ಬಗ್ಗೆ ವಹಿಸಿದ್ದರು. ಅವರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ
ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. “ಫಿನಿಕ್ಸ್” ಓಂಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರ. ಇದೊಂದು ಮಹಿಳಾ ಪ್ರಾಧಾನ ಚಿತ್ರವಾಗಿದ್ದು, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಭಾಸ್ಕರ್ ಶೆಟ್ಟಿ, ನಿಮಿಕಾ ರತ್ನಾಕರ್, ಕಾಕ್ರೋಜ್ ಸುಧೀ, ಪ್ರಸನ್ನ ಮುಂತಾದವರು ತಾರಾಬಳಗದಲ್ಲಿದ್ದಾರೆ.
ರವಿ ವಲ್ಲೂರಿ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜಿಸಲಿದ್ದಾರೆ