Former Prime Minister HD Deve Gowda launched Latashri Sarthya's Harshini Cinemas

ಲತಾಶ್ರೀ ಸಾರಥ್ಯದ ಹರ್ಷಿಣಿ ಸಿನಿಮಾಸ್ ಸಂಸ್ಥೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಚಾಲನೆ - CineNewsKannada.com

ಲತಾಶ್ರೀ ಸಾರಥ್ಯದ ಹರ್ಷಿಣಿ ಸಿನಿಮಾಸ್ ಸಂಸ್ಥೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಚಾಲನೆ

ವಿಜಾಪುರ ಜಿಲ್ಲೆಯ ಮಾಜಿ ಶಾಸಕ ಡಾ.ದೇವಾನಂದ್ ಚವ್ಹಾಣ ಹಾಗೂ ಸುನೀತಾ ದೇವಾನಂದ ಚವ್ಹಾಣ ಪುತ್ರಿ ಲತಾಶ್ರೀ ಅವರು ಹರ್ಷಿಣಿ ಸಿನಿಮಾಸ್ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಚಾಲನೆ ನೀಡಿ ಮನದುಂಬಿ ಹಾರೈಸಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರ ನಿರ್ಮಾಣ ಮಾಡುವ ಆಶಯ ಹೊಂದಿರುವ ಹರ್ಷಿಣಿ ಸಿನಿಮಾಸ್ ಸಂಸ್ಥೆ ಮೊದಲ ಚಿತ್ರವಾಗಿ “ಕಿರುನಗೆ” ಚಿತ್ರ ನಿರ್ಮಿಸುತ್ತಿದೆ. “ಸತ್ಯಂ” ಸೇರಿದಂತೆ ಈಗಾಗಲೇ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿರುವ ಅಶೋಕ್ ಕಡಬ “ಕಿರುನಗೆ” ಚಿತ್ರ ನಿರ್ದೇಶಿಸುತ್ತಿದ್ದಾರೆ.

ಮಹಿಳಾ ಪ್ರಧಾನ ಚಿತ್ರಕ್ಕೆ ಲತಾಶ್ರೀ ಡಿ.ಸಿ ಕಥೆ ಬರೆದಿದ್ದಾರೆ. ಚಿತ್ರಕಥೆ ಅಶೋಕ್ ಕಡಬ ಅವರದು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ತಂಡದ ಸುಕೃತ್ “ಕಿರುನಗೆ” ಗೆ ಸಂಗೀತ ನೀಡಲಿದ್ದಾರೆ. ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಕನ್ನಡ ಖ್ಯಾತ ನಟಿಯೊಬ್ಬರು ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಒಂದು ಹೆಣ್ಣು ತನ್ನ ಪ್ರೀತಿ, ಇಷ್ಟ, ಸಂತೋಷವೆಲ್ಲವನ್ನು ತ್ಯಜಿಸಿ ಹೆತ್ತವರ ಸಂತೋಷಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು, ತಾನು ಎಲ್ಲರಂತೆ ನಗುನಗುತ್ತಾ ಇರುತ್ತಿರುವ, ಆ ಹೆಣ್ಣಿನ ನಗುವಿನ ಹಿಂದೆ ಬಚ್ಚಿಟ್ಟ ಹಲವು ನಿಗೂಢ ವಿಷಯಗಳನ್ನು ಬೆನ್ನಟ್ಟಿ ಹೊರಟ ಒಂದು ಗರ್ಭಿಣಿ ಹೆಣ್ಣು ಮಗಳಿಬ್ಬಳ ಸುತ್ತ ತೆರೆದು ಕೊಳ್ಳುವ ಒಂದು ಭಾವನಾತ್ಮಕ ಕಥೆಯೇ ಈ “ಕಿರುನಗೆ “

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin