Great response to Agrasena's film A smile on the face of the film crew

ಅಗ್ರಸೇನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ; ಚಿತ್ರತಂಡದ ಮುಖದಲ್ಲಿ ಮಂದಹಾಸ - CineNewsKannada.com

ಅಗ್ರಸೇನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ; ಚಿತ್ರತಂಡದ ಮುಖದಲ್ಲಿ ಮಂದಹಾಸ

ಕಳೆದ ವಾರ ತೆರೆಗೆ ಬಂದ ಅಗ್ರಸೇನಾ ಚಿತ್ರಕ್ಕೆ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರತಂಡದ ಮುಖದಲ್ಲಿ ಗೆಲುವಿನ ಮಂದಹಾಸ ಮನೆ ಮಾಡಿದೆ. ನಾಯಕರಾದ ಅಮರ್ ವಿರಾಜ್, ಅಗಸ್ತ್ಯ ಬೆಳಗೆರೆ ಹಾಗು ನಾಯಕಿ ರಚನಾ ದಶರಥ ಅವರಲ್ಲಿ ಗೆಲುವು ಖುಷಿಕೊಟ್ಟಿದ ಸಂಭ್ರಮದಲ್ಲಿದ್ದರು.

ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ, ಸಿನಿಮಾ ಯಶಸ್ಸು ಕಂಡಿದೆ. ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಬಿ.ಸಿ ಸೆಂಟರ್ ನಲ್ಲಿ ಹೆಚ್ಚಾಗಿ ಓಡುತ್ತಿದೆ. 25 ದಿನದಲ್ಲಿ ಮತ್ತೆ ಸಿಗೋಣ ಎಂದರೆ ಮತ್ತೊಬ್ಬ ನಿರ್ಮಾಪಕ ಜಯರಾಮ ರೆಡ್ಡಿ, ಸಿನಿಮಾ ಚೆನ್ನಾಗಿ ಮೂಡಿ ಬರಲು ಮಾದ್ಯಮ ಕಾರಣ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಉತ್ತಮವಾಗಿ ಓಡುತ್ತಿದೆ ಎಂದರು

ನಾಯಕಿ ರಚನ ದಶರಥ ಮಾತನಾಡಿ, ಸಿನಿಮಾ ಯಶಸ್ಸಾಗಲು ಪ್ರೇಕ್ಷಕರೇ ಕಾರಣ. ಚಿತ್ರದ ಒದೊಂದು ಪಾತ್ರ ಗೆದ್ದಿಗೆ.ಹೀಗಾಗಿ ಇಡೀ ಅಗ್ರಸೇನಾ ಚಿತ್ರ ಗೆದ್ದಿದೆ. ಪತಿ ಕೂಡ ನಟ , ನಿರ್ದೇಶಕರು ಏನು ಹೇಳ್ತಾರೋ ಅದನ್ನು ಮಾಡು ಎಂದು ಹೇಳಿದ್ದರು.ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಎಂದರು.

ನಾಯಕ ಅಮರ್ ವಿರಾಜ್: ತುಂಬಾ ಖುಷಿ ಆಗ್ತಾ ಇದೆ. ಸಿನಿಮಾಎಲ್ಲಾ ಕಡೆ ಉತ್ತಮ ಕಡೆ ಓಡುತ್ತಿದೆ. ಜೀವನ ಸಾರ್ಥಕ ಆಯಿತು. ತೆಲುಗು ಸೆಂಟರ್ ಮುಳಬಾಗಿಲಿನಲ್ಲಿಯೂ ಚಿತ್ರ ಯಶಸ್ವಿಯಾಗಿದೆ. ಹೊಸಬರು ಚಿತ್ರರಂಗಕ್ಕೆ ಬಂದರೆ ಚಿತ್ರರಂಗ ಬೆಳೆಯುಯತ್ತದೆ. ಹಿರಿಯರು ಕೂಡ ಬೆಂಬಲಿಸಬೇಕು ಎಂದು ಹೇಳಿದರು.

ಮತ್ತೊಬ್ಬ ನಟ ಅಗಸ್ತ್ಯ ಬೆಳಗೆರೆ ಮಾತನಾಡಿ, ಚಿತ್ರ ಯಶಸ್ಸು ಕಾಣಲು ಪ್ರತಿಯೊಬ್ಬರು ಕಾರಣ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಮುಖ್ಯ ಎಂದರು.

ಚಿತ್ರದ ಕಥೆ ಮಾಡುವ ಸಮಯದಲ್ಲಿ ರಾತ್ರಿ ನಾಯಕ ಅಮರ್ ಗೆ ಹಾವು ಕಚ್ಚಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಅವರನ್ನು ಗುಣಮುಖರನ್ನಾಗಿ ಮಾಡಿದೆವು. ಅಮರ್ ವಿರಾಜ್ ಇದ್ದುದರಿಂದ ಅಗಸ್ತ್ತ ಪಾತ್ರ ಚಿತ್ರದಲ್ಲಿ ಗಮನ ಸೆಳೆಯಲು ಕಾರಣವಾಗಿದೆ. ಚಿತ್ರಕ್ಕೆ ಸಹಕಾರ ನೀಡಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿದರು.

ನಿರ್ದೇಶಕ ಮುಗುಗೇಶ್ ಕಣ್ಣಪ್ಪ ಅಗ್ರಸೇನಾ ಚಿತ್ರದ ಗೆಲುವು ನಿಮ್ಮ ಗೆಲವು. ಕಥೆಯನ್ನು ಜನರಿಗೆ ತಲುಪಿಸಿ ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ. ಇಡೀ ತಂಡದ ಸಹಕಾರ ಚಿತ್ರ ತಂಡಕ್ಕೆ ಎಷ್ಟೋ ಥರ ಸಹಕಾರ ದಿಂದ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಚಿತ್ರದಲ್ಲಿ ಸಂದೇಶ ಚೆನ್ನಾಗಿದೆ ಎಂದು ಯುವ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತೊಮ್ಮೆ ಧನ್ಯವಾದಗಳು ಎಂದರು.

ಸಂಗೀತ ನಿರ್ದೇಶಕ ತ್ಯಾಗರಾಜ್, ಸೇರಿದಂತೆ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin