ದಾಖಲೆ ಬರೆಯಲು ಸಜ್ಜಾದ “ಜೈ” ಚಿತ್ರ: ಸದ್ದಿಲ್ಲದ 25 ದಿನ ಪೂರ್ಣ
ನಟ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಬಿಡುಗಡೆಯಾಗಿ ದಾಖಲೆ ಬರೆಯುತ್ತಿದೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆ ಬೇರೆ ದೇಶದಲ್ಲೂ ಅಬ್ಬರಸುತ್ತಿದೆ

ಸಿನಿಮಾ ಬಿಡುಗಡೆಯಾಗಿ 25 ದಿನ ಪೂರ್ಣಗೊಂಡಿದ್ದು ದಿನಕಳೆದಂತೆ ಸಿನಿಮಾದೊಳಗಿರುವ ಕಂಟೆಂಟ್ ಬಗ್ಗೆ ಜನ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಒಂದು ವಾರ ಥಿಯೇಟರ್ ನಲ್ಲಿ ಇದ್ದರೆ ಹೆಚ್ಚು. ಅಂಥಹದರಲ್ಲಿ ಜೈ ಸಿನಿಮಾ 16 ಥಿಯೇಟರ್ ನಲ್ಲಿ 25 ದಿನವನ್ನು ಪೂರೈಸಿದೆ.
ಜೈ ಸಿನಿಮಾ 2025ರ ಸಕ್ಸಸ್ ಫುಲ್ ಮೂವಿ ಅಂದ್ರೆ ತಪ್ಪಾಗುವುದಿಲ್ಲ. ಇದೇ ಖುಷಿಯಲ್ಲಿ ಸಿನಿಮಾ ತಂಡ 14ನೇ ತಾರೀಖು ನಾಳೆ ಮುಂಬೈನಲ್ಲಿ 25 ಪ್ರೀಮಿಯರ್ ಶೋ ನಡೆಸಲು ಪ್ಲ್ಯಾನ್ ಹಾಕಿಕೊಂಡಿದೆ. ಇಷ್ಟು ದೊಡ್ಡ ಮಟ್ಟಕ್ಕೆ ತುಳುವಾಗಲಿ, ಕನ್ನಡವಾಗಲಿ ನಡೆದಿರಲಿಲ್ಲ. ಇದೀಗ ಜೈ ಆ ಎರಡು ಭಾಷೆಯ ಸಿನಿಮಾವನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ರೂಪೇಶ್ ಶೆಟ್ಟಿ.

ಸಿನಿಮಾದ ಹಲವು ರೈಟ್ಸ್ ಗಳು ಈಗಾಗಲೇ ಒಳ್ಳೆ ಬಜೆಟ್ ಗೆ ಸೇಲ್ ಆಗಿದೆ. ಬಲ್ಲ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಜೈ ಸಿನಿಮಾ 5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಜೈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ. ನಾಯಕಿಯಾಗಿ ಅದ್ವಿತಿ ಶೆಟ್ಟಿ ಬಣ್ಣಹಚ್ಚಿದ್ದಾರೆ.


