#ಜೆರ್ಸಿ ನಂಬರ್ 10; ಯಶಸ್ವಿ ನಾಲ್ಕನೇ ವಾರ

ಆದ್ಯ ತಿಮ್ಮಯ್ಯ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ “ ಜೆರ್ಸಿ ನಂಬರ್ 10” ಚಿತ್ರ ಯಶಸ್ವಿ ನಾಲ್ಕನೇ ವಾರದಲ್ಲಿ ಮುನ್ನೆಡೆದಿದೆ. ಇದು ಸಹಜವಾಗಿಯೇ ನಟ, ನಿರ್ಮಾಪಕರೂ ಆಗಿರುವ ಆದ್ಯ ತಿಮ್ಮಯ್ಯ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಚಿತ್ರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ನಾಲ್ಕನೇ ವಾರದಲ್ಲಿ ಪ್ರದರ್ಶನ ಕಂಡಿದೆ. 25 ದಿನದತ್ತ ಮುನ್ನೆಡೆದಿರುವುದು ಹೊಸ ಪ್ರಯತ್ನಕ್ಕೆ ಒಂದಷ್ಟು ಟಾನಿಕ್ ಸಿಕ್ಕಂತಾಗಿದೆ,
ಒಳ್ಳೆಯ ಕಂಟೆಂಟ್ ಆಧಾರಿತ ಚಿತ್ರ ಮಾಡಿದರೆ ಚಿತ್ರವನ್ನು ಜನ ಖಂಡಿತ ಹಿಟ್ ಮಾಡಲಿದ್ದಾರೆ ಎನ್ನುವ ಮಾತು ನಿಜವಾಗಿದೆ . ಜನರಿಗೆ ಹತ್ತಿರವಾಗುವ ಚಿತ್ರ ನೀಡಿದರೆ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ.

ಹಾಕಿ ಕ್ರೀಡೆಯ ಹಿನ್ನೆಲೆಯಲ್ಲಿ ಚಿತ್ರ ಮಾಡಿದ್ದು ಅದರ ಒಳ ಹೊರಗನ್ನು ಚಿತ್ರದ ಮೂಲಕ ಅನಾವರಣ ಮಾಡಲಾಗಿದೆ. ಜೆರ್ಸಿ ನಂಬರ್ 10 ಚಿತ್ರದ ಮೂಲಕ ಹಾಕಿ ಕ್ರೀಡೆಯ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಕ್ರಿಡೆಯನ್ನು ನಂಬಿಕೊಂಡ ಯುವ ಜನರ ಬಗ್ಗೆಯೂ ಇಷ್ಟವಾಗುವ ಅಂಶಗಳನ್ನು ಚಿತ್ರದಲ್ಲಿವೆ.

ಜೊತೆಗೆ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ, ಅವರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಗುರಿ ಹೊಂದಬೇಕು, ಸಾಧನೆ ಅನ್ನುವುದರ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಹೇಳುತ್ತಾ ಎಳೆಯ ವಯಸ್ಸಿನ ಮಕ್ಕಳಿಗೆ ಕನಸುನ್ನು ಕಾಣುವುದರ ಜೊತೆಗೆ ಸಾಧಿಸುವ ಕಿಚ್ಚನ್ನು ಹಚ್ಚಿದ್ದರು. ಅದರ ಫಲವಾಗಿ ನನ್ನಮ್ಮ ನನಗಾಗಿ ಒಂದು ಕಥೆ ಸೃಷ್ಟಿ ಮಾಡಿ ಅದರೊಳಗೆ ನನ್ನನ್ನು ನಾಯಕನನ್ನಾಗಿ ಮಾಡಿ ಸಾಧನೆಯ ಗುರಿಯ ಬಗ್ಗೆ ಹೇಗೆಲ್ಲಾ ಇರಬೇಕು, ನಡೆಯಬೇಕೆಂದು ತಿಳಿಸಿದರ ಫಲವಾಗಿ ನಿಮ್ಮ ಮುಂದೆ ಈ ನಮ್ಮ ಜೆರ್ಸಿ ನಂ 10 ಸಿನಿಮಾ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಗೆಲುವಿನ ಖುಷಿ ಹಂಚಿಕೊಂಡರು.

ಮಾಡಲಿಂಗ್ ಲೋಕದಿಂದ ಸಾಕಷ್ಟು ಅವಕಾಶಗಳು ಇದ್ದಾಗಲು, ಸಿನಿಮಾ ಮಾಡಬೇಕು ಎನ್ನುವ ಕನಸು ಇತ್ತು. ಅದಕ್ಕೆ ಪೂರಕವಾಗಿ ತಯಾರಾಗಿದ್ದೇ ಜೆರ್ಸಿ ನಂಬರ್ 10 ಚಿತ್ರ. ರಂಗಭೂಮಿ, ನಿರ್ದೇಶನ ತರಬೇತಿಯಲ್ಲಿ ಸಾಕಷ್ಟು ಕಲಿತಿದ್ದರಿಂದ ಪಾತ್ರಕ್ಕೆ ಜೀವ ತುಂಬಲು ಸಹಕಾರಿಯಾಯಿತು ಎಂದು ಸಂತಸ ಹೊರ ಹಾಕಿದ್ದಾರೆ.
ಮೂಲತಃ ಕೊಡಗಿನವನಾಗಿದ್ದು, ನಮ್ಮ ಕ್ರೀಡೆ ಹಾಕಿ, ಹಾಕಿಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದೇ, ಇದರ ಜೊತೆಗೆ ಗೆಳೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಕ್ರೀಡೆ ಪ್ರತಿನಿಧಿಸಿದ್ದಾರೆ. ಇದರ ಎಳೆಯನ್ನು ಹಿಡಿದು ಸಾಧಿಸುವ ಹುಚ್ಚನ್ನು ಹೊಂದಿಸಿ ಹೆಣೆದ ಚಿತ್ರಕಥೆ ಜೆರ್ಸಿ ನಂ 10 ಸಿನಿಮಾ ಇದೀಗ ನಾಲ್ಕನೇ ವಾರ ಪ್ರವೇಶಿಸಿದೆ ಎಂದರು.

ಚಿತ್ರದಲ್ಲಿ ಹಿರಿಯ ಕಲಾವಿದ ದತ್ತಣ್ಣ ಅವರು ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ.ಇದು ಸಹಜವಾಗಿಯೇ ನಟ, ನಿರ್ಮಾಪಕ ಆದ್ಯ ತಿಮ್ಮಯ್ಯ ಅವರ ಮುಖದಲ್ಲಿ ಗೆಲುವಿನ ಗೆರೆ ಮೂಡಲು ಸಹಕಾರಿಯಾಗಿದೆ.
ಅವರ ಜೊತೆಗೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಮಂಡ್ಯ ರಮೇಶ್, ಶಂಕರ್ ಅಶ್ವಥ್,ಎಂ.ಡಿ ಕೌಶಿಕ್ , ಟೆನ್ನಿಸ್ ಕೃಷ್ಣ,ಚಂದನ್ ಆಚಾರ್, ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ,