ನಾನು ಮತ್ತು ಗುಂಡ ಶೀರ್ಷಿಕೆ ಗೀತೆ : ಜೋಗಿ ಪ್ರೇಮ್ ಬಿಡುಗಡೆ
ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅಂಥಾ ಗುಂಡ (ನಾಯಿ) ಮತ್ತು ಹುಡುಗನೊಬ್ಬನ ನಡುವಿನ ಸಂಬಂಧ ಹಾಗೂ ನಿಷ್ಕಲ್ಮಶ ಪ್ರೇಮದ ಕಥೆ ಹೇಳುವ ಚಿತ್ರ ‘ನಾನು ಮತ್ತು ಗುಂಡ-,2’ ಚಿತ್ರದ ಶೀರ್ಷಿಕೆ ಗೀತೆಯನ್ನು ನಿರ್ದೇಶಕ ಜೋಗಿ ಪ್ರೇಮ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ

“ನಾನು ಮತ್ತು ಗುಂಡ -2” ತೆರೆಗೆ ಬರಲು ಸಿದ್ದವಾಗಿದ್ದು ಇತ್ತೀಚೆಗಷ್ಟೇ ಈ ಚಿತ್ರದ ಟೀಸರನ್ನು ವಿಜಯ್ ಕಿರಗಂದೂರು ಪತ್ನಿ ಶೈಲಜಾ ಕಿರಗಂದೂರು ಬಿಡುಗಡೆ ಮಾಡಿದ್ದರು. ಚಿತ್ರದ ಮೆಲೋಡಿ ಹಾಡನ್ನು ಪ್ರೇಮ್ ಬಿಡುಗಡೆ ಮಾಡಿ ಶುಭ ಹಾರೈಸಿದರು.ಸಂಗೀತ ನಿರ್ದೇಶಕ ಆರ್.ಪಿ.ಪಟ್ನಾಯ್ ಕೂಡ ಹಾಜರಿದ್ದರು. ಪ್ರಜಾಕಿರಣ ಸೇವಾ ಕಿರಣ ಟ್ರಸ್ಟ್ ನ ನೂರಾರು ಮಕ್ಕಳು ಹಾಜರಿದ್ದರು
ರಘುಹಾಸನ್ ಕಥೆ ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರದಲ್ಲಿ ರಾಕೇಶ್ ಆಡಿಗ ನಾಯಕನಾಗಿದ್ದು, ರಚನಾ ಇಂದರ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.ಮಾಸ್ಟರ್ ಯುವನ್ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಪ್ರೇಮ್ ಮಾತನಾಡಿ ರಘು ನನ್ನ ಜತೆ ತುಂಬಾ ವರ್ಷ ಕೆಲಸ ಮಾಡಿದ್ದಾರೆ. ಆತ ಒಳ್ಳೆ ಟೆಕ್ನೀಷಿಯನ್. ಏನೇನೋ ಕಷ್ಟಪಟ್ಟು ಸಿನಿಮಾ ಮಾಡಿದರೂ, ಒಂದು ನಾಯಿಯನ್ನು ಪಳಗಿಸಿ ಆಕ್ಟ ಮಾಡಿಸೋದು ಸುಲಭದ ಮಾತಲ್ಲ. ಈ ಸಾಂಗ್ ಕೇಳಿದ್ದೆ. ಈಗ ವಿಜ್ಯುಯಲ್ ನೋಡಿದೆ. ತುಂಬಾ ಚೆನ್ನಾಗಿದೆ. ಹಾಡು ಕೇಳಿದಾಗಲೇ ಇದು ಹಿಟ್ ಆಗುತ್ತೆ ಅಂತ ರಘುಗೆ ಹೇಳಿದ್ದೆ. ಆರ್.ಪಿ.ಪಟ್ನಾಯಕ್ ಮಾಡಿರುವ ಎಕ್ಸ್ ಕ್ಯೂಸ್ ಮಿ ಚಿತ್ರದ ಹಾಡುಗಳುವಇವತ್ತಿಗೂ ಎವರ್ ಗ್ರೀನ್ ಆಗಿವೆ. ಅವರು ಒಂದು ಲೈನ್ ಇಟ್ಕೊಂಡು ಮೆಲೋಡಿ ಟ್ಯೂನ್ ಮಾಡೋ ಅದ್ಭುತ ಮ್ಯೂಸಿಕ್ ಮಾಂತ್ರಿಕ ಎಂದು ಹೇಳಿದರು.

ಬಹಳ ವರ್ಷಗಳ ನಂತರ ಸಂಗೀತ ನೀಡಿರುವ ಆರ್.ಪಿ ಪಟ್ನಾಯಕ್ ಮಾತನಾಡಿ ಒಂದು ನಾಯಿ ಹಾಗೂ ಬಾಲಕನೊಬ್ಬನ ಬಾಂಧವ್ಯದ ಅದ್ಭುತವಾದ ಕಥೆಯಿದು. ಈ ಹಾಡನ್ನು ಗುಂಡ(ನಾಯಿ) ಕೇಳಿ ಒಪ್ಪಿದ ಮೇಲೇ ಕಂಪೋಜ್ ಮಾಡಿದ್ದು. ನಾನು ಪಾರ್ಟ್ 1 ನೋಡಿದ್ದೇನೆ. ಅದರಲ್ಲಿದ್ದ ಎಮೋಷನ್ಸ್ ಇಲ್ಲೂ ಕ್ಯಾರಿ ಆಗಿದೆ ಎಂದರು.
ನಿರ್ಮಾಪಕ, ನಿರ್ದೇಶಕ ರಘು ಹಾಸನ್ ಮಾತನಾಡಿ ಹಾಡು ಕೇಳಿದ ಪ್ರೇಮ್ ಕೂಡಲೇ ಇಷ್ಟಪಟ್ಟು ನಾನೇ ಲಾಂಚ್ ಮಾಡ್ತೀನಿ ಅಂದರು.ಒಂದು ಸೋಲ್ ಸಾಂಗ್ ಆರ್.ಪಿ. ಅದ್ಭುತವಾಗಿ ಮಾಡಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಗೆ ಹೋಗಲಿದೆ. ಬೇಗನೇ ಇನ್ನೊಂದು ಸಾಂಗ್ ಟ್ರೈಲರ್ ಲಾಂಚ್ ಮಾಡುತ್ತೇವೆ ಎಂದರು.
ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದ್ದು, ಚಿತ್ರದ 6 ಹಾಡುಗಳಿಗೆ ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ. ತನ್ವಿಕ್ ಅದ್ಭುತವಾಗಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ ಎಂದರು
ಉಳಿದಂತೆ ನಾಯಕ ರಾಕೇಶ್ ಅಡಿಗ, ಹಾಡಲ್ಕಿ ಅಭಿನಯಿಸಿದ ನಯನ ಬಾಲನಟ ಜೀವನ್ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.ಶಂಕರನ ಮಗ ಹಾಗೂ ನಾಯಿ ಸಿಂಬು ಪಾತ್ರಗಳ ಮೂಲಕ ಈ ಸಿನಿಮಾ ಮುಂದುವರೆಯಲಿದೆ.ಅಲ್ಲದೆ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಸಹ ಈ ಚಿತ್ರದಲ್ಲಿ ಅಭಿನಯಿಸಿದೆ.
ಚಿತ್ರದ ಸಂಭಾಷಣೆ ಸಾಹಿತ್ಯವನ್ನು ರೋಹಿತ್ ರಮನ್ ಬರೆದಿದ್ದಾರೆ. ಹಿನ್ನೆಲೆ ಸಂಗೀತ ರುತ್ವಿಕ್ ಮುರಳೀಧರ್ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಕೆ.ಎಂ. ಪ್ರಕಾಶ್ ಸಂಕಲನ, ವಿ.ನಾಗೇಂದ್ರ ಪ್ರಸಾದ್, ರಘು ಹಾಸನ್ ಸಾಹಿತ್ಯ, ರಾಘು ನೃತ್ಯನಿರ್ದೇಶನ, ನವೀನ್ ಸೌಂಡ್ ಡಿಸೈನ್ ಚಿತ್ರಕ್ಕಿದೆ

