“ಜೊತೆಯಾಗಿರು” ಚಿತ್ರದ ಚಿತ್ರೀಕರಣ ಪೂರ್ಣ: ಟ್ರೈಲರ್ ಬಿಡುಗಡೆ
![“ಜೊತೆಯಾಗಿರು” ಚಿತ್ರದ ಚಿತ್ರೀಕರಣ ಪೂರ್ಣ: ಟ್ರೈಲರ್ ಬಿಡುಗಡೆ](https://www.cininewskannada.com/wp-content/uploads/2024/01/2-6.jpg?v=1704343004)
ಹೊಸ ಕಲಾವಿದರ ದಂಡು ಸೇರಿಕೊಂಡು ನಟಿಸಿ, ನಿರ್ಮಿಸಿರುವ “ಜೊತೆಯಾಗಿರು” ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆ ಮಾಡಿದ್ದು ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆಯ ಮಾತು ಕೇಳಿ ಬಂದಿವೆ.
![](https://www.cininewskannada.com/wp-content/uploads/2024/01/1-7.jpg?v=1704343050)
ಹೊಸನಗರ ಮೂಲದ ಭರವಸೆಯ ನಾಯಕ ವೆಂಕಟೇಶ್ ಹೆಗ್ಡೆ ಈ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡಿ ಆ ನಂತರ ನಿರೂಪಕಿಯಾಗಿ ಕೆಲಸ ಮಾಡಿ ಕೊನೆಗೆ ನಾಯಕಿಯಾಗಿದ್ದಾರೆ ನಟಿ ರಶ್ಮಿಗೌಡ. ಜೊತೆಗೆ ಸುನೀಲ್ ಕಾಂಚನ್ , ಶಂಕರ್ ನಾರಾಯಣ್ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.2009 ರಲ್ಲಿ ನಡೆದ ನೈಘ ಘಟನೆ ಆಧರಿಸಿ ನಿರ್ದೇಶಕ ಸತೀಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ನಾಯಕ ವೆಂಕಟೇಶ್ ಹೆಗ್ಡೆ ಮಾತನಾಡಿ ವಿಭಿನ್ನವಾದ ಪ್ರೇಮ ಕಥೆಯನ್ನು ಚಿತ್ರದ ಮೂಲಕ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ. ಕಿಪ್ಯಾಡ್ ಮೊಬೈಲ್ ಕಾಲದ ಪ್ರೀತಿ, ಅದರಿಂದ ಆಗುವ ಅನಾಹುತ ಸೇರಿದಂತೆ ಮತ್ತಿತರ ವಿಷಯಗಳನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು
.
ನಿರ್ದೇಶಕ ಸತೀಶ್ ಕುಮಾರ್ ಮಾತನಾಡಿ ಎರಡು ಲವ್ ಸ್ಟೊರಿ, ಮತ್ತು ಕೀಪ್ಯಾಡ್ ಮೊಬೈಲ್ ಕಾಲದ ಪ್ರೇಮಕಥೆ, ಹಣದಾಸೆಯ ಹುಡುಗಿ ಮುಗ್ದ ಹುಡಗನ ಪ್ರೀತಿ ಮಾಡಿದರೆ ಏನಾಗಲಿದೆ ಎನ್ನುವುದು ಮತ್ತೊಂದು ಟ್ರಾಕ್ ನಲ್ಲಿ ಸಾಗಲಿದೆ. ಕಳಸ, ಸಕಲೇಶಪುರ, ಕುಂದಾಪುರ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.ಸ್ನೇಹಿತ ಜೀವನದಲ್ಲಿ ನಡೆದ ಘಟನೆ ಆದರಿಸಿ ಚಿತ್ರ ಮಾಡಲಾಗಿದೆ. ಎರಡು ಲವ್ ಸ್ಟೋರಿ ಜೊತೆಗೆ ಸ್ನೇಹಿತರು ಟ್ರಾಕ್ ಇದೆ. ಸೆನ್ಸಾರ್ ನಿಂದ ಯು/ ಎ ಪ್ರಮಾಣ ಪತ್ರ ನೀಡಿದೆ. ಐದು ಮಂದಿ ಸ್ನೇಹಿತರು ಸೇರಿ ಮಾಡಿದ ಚಿತ್ರ ಎಂದು ಮಾಹಿತಿ ನೀಡಿದರು
ನಾಯಕಿ ರಶ್ಮಿ ಗೌಡ ಮಾತನಾಡಿ ಹೊಸಬರ ಸಿನಿಮಾ ಮಾಡುವುದು ಕಷ್ಟ ಸರ್, ಹೊಸ ತಂಡವನ್ನು ಬೆಂಬಲಿಸಿ ಹರಸಿ, ಕೀಪ್ಯಾಡ್ ಮೊಬೈಲ್ ಕಾಲದ ಪ್ರೀತಿಯನ್ನು ನೆನಪು ಮಾಡುವ ಉದ್ದೇಶ ನಮ್ಮದು ಎಂದರು.
ಮತ್ತೊಬ್ಬ ನಾಯಕ ಸುನೀಲ್ ಕಾಂಚನ್ ಮಾತನಾಡಿ , ಚಿತ್ರದಲ್ಲಿ ಎರಡನೆ ನಾಯಕನ ಪಾತ್ರ ಸಿಕ್ಕಿದೆ. ಇಡೀ ತಂಡ ಜೊತೆಯಾಗಿ ಕೆಲಸ ಮಾಡಿದ್ದೇವೆ ಹರಸಿ ಹಾರೈಸಿ ಎಂದು ಕೇಳಿಕೊಂಡರು
![](https://www.cininewskannada.com/wp-content/uploads/2024/01/3-5-1024x631.jpg?v=1704343179)
ಹಿರಿಯ ಕಲಾವಿದ ಶಂಕರ್ ನಾರಾಯಣ್ ಮಾತನಾಡಿ ಟೀಮ್ ಗೆ ಅಣ್ಣನಾಗಿದ್ದೇನೆ. ಅಭಿಮಾನಕ್ಕಿಂತ ದೊಡ್ಡದು ಯಾವುದು ಇಲ್ಲ. ಸಂಭಾವನೆ ಕೊಟ್ಟಿದ್ದಾರೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಬಿಡುಗಡೆವರೆಗೆ ಬಂದಿದೆ ಖುಷಿಯಾಗಿದೆ ಎಂದರು
ಕಲಾವಿದರಾದ ಸುಧಾ,ಮಂಜು ಸೇರಿದಂತೆ ಮತ್ತಿತರರು ಮಾಹಿತಿ ಹಂಚಿಕೊಂಡರು ಚಿತ್ರಕ್ಕೆ ರಾಜ ಶಿವಶಂಕರ್, ಆನಂದ್ ಇಳಯರಾಜ ಛಾಯಾಗ್ರಾಹಣವಿದ್ದು ವಿನು ಮನಸು ಸಂಗೀತವಿದೆ.