ಜೂನಿಯರ್ ಎನ್‍ಟಿಆರ್- ಪ್ರಶಾಂತ್ ನೀಲ್ ಚಿತ್ರದ ಅದ್ಧೂರಿ ಮುಹೂರ್ತ
ಜೂನಿಯರ್ ಎನ್ ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ ಅದ್ದೂರಿ ಮುಹೂರ್ತ ನಡೆದಿದೆ. ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗಲಿದ್ದು ಎಲ್ಲಾ ಅಂದುಕೊಂಡಂತೆ ಆದರೆ 2026ರ ಜನವರಿ 9 ರಂದು ಚಿತ್ರ ಬಿಡುಗಡೆಯಾಗಲಿದೆ.
ಚಿತ್ರದ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ, ಮೈತ್ರಿ ಮೂವಿ ಮೇಕರ್ಸ್ ಘೋಷಣೆ ಮಾಡಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾ ಎನ್‍ಟಿಆರ್ ಮತ್ತು ಪ್ರಶಾಂತ್ ನೀಲ್ ಅಭಿನಯದ ಮುಹೂರ್ತ ನಡೆಯಿತು
ಎನ್‍ಟಿಆರ್ ಮತ್ತು ಪ್ರಶಾಂತ್ ನೀಲ್ ಚಿತ್ರದ ಉದ್ಘಾಟನಾ ಕಾರ್ಯಕ್ರಮದ ಫೆÇೀಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಎನ್‍ಟಿಆರ್ ಮತ್ತು ಪ್ರಶಾಂತ್ ನೀಲ್ ಜೊತೆಗೆ ಕಲ್ಯಾಣ್ ರಾಮ್ ಮತ್ತು ಚಿತ್ರದ ನಿರ್ಮಾಪಕರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಈಗಾಗಲೇ ಎನ್‍ಟಿಆರ್ ಮತ್ತು ನೀಲ್ ಜೋಡಿಯ ಸಿನಿಮಾ ಘೋಷಣೆ ಆಗಿಯೇ ವರ್ಷಗಳು ಕಳೆದಿವೆ. ಆದರೆ, ಮುಂದುವರಿದು ಯಾವುದೇ ಅಪ್ಡೇಟ್ ಹೊರಬಂದಿರಲಿಲ್ಲ. ಇದೀಗ ಎನ್‍ಟಿಆರ್ ಮತ್ತು ನೀಲ್ ಕಾಂಬಿನೇಷನ್ ಸಿನಿಮಾ ಸೆಟ್ಟೇರಿದೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮುಹೂರ್ತ ಮಾತ್ರವಲ್ಲದೆ, ಚಿತ್ರದ ಬಿಡುಗಡೆಯ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. 2026ರ ಸಂಕ್ರಾಂತಿಗೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಮೂಲ ತೆಲುಗು ಜತೆಗೆ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
ಬ್ಲಾಕ್‍ಬಸ್ಟರ್ ಹಿಟ್ ಸಿನಿಮಾಗಳಿಂದಲೇ ಹೆಸರುವಾಸಿಯಾದ ಪ್ರಶಾಂತ್ ನೀಲ್, ಎನ್‍ಟಿಆರ್ ಜತೆಗಿನ ಈ ಸಿನಿಮಾಕ್ಕೆ ಇನ್ನಷ್ಟು ಶ್ರಮ ಹಾಕುತ್ತಿದ್ದಾರೆ. ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ಅವರು ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್‍ಟಿಆರ್ ಆಟ್ರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಕೆಜಿಎಫ್, ಸಲಾರ್ ಖ್ಯಾತಿಯ ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಪಾತ್ರವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ.