ಕರ್ನಾಟಕ ವೀಲ್‍ಚೇರ್ ಪ್ರೀಮಿಯರ್ ಲೀಗ್ ಸೀಸನ್ 3ರ ಟ್ರೋಫಿ ಅನಾವರಣ

ಕರ್ನಾಟಕ ವೀಲ್‍ಚೇರ್ ಪ್ರೀಮಿಯರ್ ಲೀಗ್ ಸೀಸನ್ 3ರ ಟ್ರೋಫಿಯನ್ನು ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು. ನಟ, ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಸಾತ್ ನೀಡಿದರು.

ಈ ವರ್ಷದ ಕರ್ನಾಟಕ ವೀಲ್‍ಚೇರ್ ಪ್ರೀಮಿಯರ್ ಲೀಗ್ ಹಿಂದಿನ ಎರಡು ಸೀಸನ್‍ಗಳಿಗಿಂತ ಗ್ರ್ಯಾಂಡ್ ಆಗಿರಲಿದೆ. ಈ ಸೀಸನ್‍ನಲ್ಲಿ ಸ್ಥಳೀಯ ಪ್ರತಿಭೆಗಳು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ.
ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ ಆಟಗಾರರಿಗೆ ಕ್ರೀಡೆಯಲ್ಲಿ ಮಾತ್ರವಲ್ಲದೆ ಅವರ ಜೀವನದಲ್ಲೂ ನಿಜವಾದ ಚಾಂಪಿಯನ್ ಆಗಲು ಈ ವೇದಿಕೆ ತುಂಬ ಮಹತ್ವದ್ದು ಎಂದರು.
ವಿಜಯ ರಾಘವೇಂದ್ರ “ನಾನು ಇಂದು ಮಾತ್ರವಲ್ಲದೆ ಲೀಗ್ ಪಂದ್ಯಾವಳಿಯ ಸಮಯದಲ್ಲಿಯೂ ಇರುತ್ತೇನೆ. ಎಲ್ಲರ ಜತೆಗಿದ್ದು, ಟೂರ್ನಮೆಂಟ್ ಅನ್ನು ಯಶಸ್ವಿಗೊಳಿಸೋಣ ಎಂದರು.

ದಿವ್ಯಾಂಗ್ ಮೈತ್ರಿ ಸ್ಪೋಟ್ರ್ಸ್ ಅಕಾಡೆಮಿ ಸಂಸ್ಥಾಪಕ ಸದಸ್ಯ ಶಿವಪ್ರಸಾದ್, ಈ ವರ್ಷ ಕೆಡಬ್ಲ್ಯೂಪಿಎಲ್ ಸೀಸನ್-3ರ ಗುರಿಯು ಕ್ರೀಡಾ ಮನೋಭಾವದ ಜತೆಗೆ ಸಮುದಾಯ ನಿರ್ಮಾಣದ ಮನೋಭಾವ ಹುಟ್ಟುಹಾಕುವ ಕೆಲಸವಾಗಲಿದೆ. ಈ ಮೂಲಕ ಕ್ರೀಡೆಯಲ್ಲಿ ಜೀವನೋಪಾಯದ ದೃಷ್ಟಿ ವೃದ್ಧಿಸಲು ವೀಲ್‍ಚೇರ್ ಕ್ರಿಕೆಟ್‍ಅನ್ನು ಕ್ರಾಂತಿಯ ರೀತಿ ಸಿದ್ಧಪಡಿಸಬೇಕಿದೆ ಎಂದರು.
ಐಪಿಎಲ್‍ನಂತಹ ವೃತ್ತಿಪರ ಕ್ರಿಕೆಟ್ ಲೀಗ್‍ಗಳಂತೆ, ಕೆಡಬ್ಲ್ಯೂಪಿಎಲ್ ಸೀಸನ್ 3ರಲ್ಲಿಯೂ ಆಟಗಾರರ ಹರಾಜು ನಡೆಯಲಿದೆ. ತಂಡದ ಮಾಲೀಕರು ತಮ್ಮ ತಂಡಗಳನ್ನು ಕಾರ್ಯತಂತ್ರವಾಗಿ ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಅಸಾಧಾರಣ ಪ್ರತಿಭೆ, ದೃಢತೆ ಮತ್ತು ವಿಕಲಾಂಗ ಅಥ್ಲೀಟ್‍ಗಳ ಉತ್ಸಾಹವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.