"Kelo Macha" song from the movie "Just Married" released on 14th January

“ಜಸ್ಟ್ ಮ್ಯಾರೀಡ್” ಚಿತ್ರದ “ಕೇಳೋ ಮಚ್ಚಾ ಹಾಡು ಜನವರಿ 14 ರಂದು ಬಿಡುಗಡೆ - CineNewsKannada.com

“ಜಸ್ಟ್ ಮ್ಯಾರೀಡ್” ಚಿತ್ರದ “ಕೇಳೋ ಮಚ್ಚಾ ಹಾಡು ಜನವರಿ 14 ರಂದು ಬಿಡುಗಡೆ

“ಜಸ್ಟ್‌ ಮ್ಯಾರೀಡ್” ತಂಡ “ಕೇಳೋ ಮಚ್ಚಾ” ಎಂಬ ಎರಡನೇ ಗೀತೆಯನ್ನು ಘೋಷಿಸಿದ್ದು ಜನವರಿ 14 ರಂದು ಬಿಡುಗಡೆ ಆಗಲಿದೆ.ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಡಿಜಿಟಲ್‌ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಿಸಿದೆ

ಅಭಿಮಾನಿಯಾಗಿ ಹೋದೆ” ಎಂಬ ಮಾಧುರ್ಯ ಪ್ರಧಾನ ಗೀತೆಯ ನಂತರ ಇದೀಗ ಒಂದು ಪಾರ್ಟಿ ಗೀತೆಯನ್ನು ಘೋಷಿಸುವ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರಲ್ಲಿ ಕುತೂಹಲವನ್ನು ಸೃಷ್ಟಿಸಿದೆ.

ಒಟ್ಟಾರೆ “ಜಸ್ಟ್ ಮ್ಯಾರೀಡ್”‌ ಹಾಡುಗಳು ವಿವಿಧ ಭಾವನೆಗಳನ್ನು ಬಿಂಬಿಸುವ ವಿವಿಧ ಪ್ರಕಾರಗಳಲ್ಲಿ ಇರಬಹುದು ಎಂಬುದು ಸಿನಿಪ್ರಿಯರ ಊಹೆ. “ಕೇಳೋ ಮಚ್ಚಾ” ಎಂಬ ಪಾರ್ಟಿ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ರಚನೆ ಮಾಡಿದ್ದು,‌ನಕಾಶ್ ಅಜ಼ೀಜ಼್ ಹಾಡಿರುತ್ತಾರೆ.

ಸಿ. ಆರ್‌ ಬಾಬಿ ನಿರ್ದೇಶನದ “ಜಸ್ಟ್‌ ಮ್ಯಾರೀಡ್” ಕೌಟುಂಬಿಕ ಬಾಂಧವ್ಯಗಳ ಮೌಲ್ಯ ತಿಳಿಸುವ ರೊಮ್ಯಾಂಟಿಕ್‌ ಡ್ರಾಮಾ ಚಿತ್ರವಾಗಿದೆ.

ಚಿತ್ರದಲ್ಲಿ ಶೈನ್‌ ಶೆಟ್ಟಿ, ಅಂಕಿತಾ ಅಮರ್‌, ಶೃತಿ ಹರಿಹರನ್, ದೇವರಾಜ್‌, ಶ್ರುತಿ, ಅನೂಪ್‌ ಭಂಡಾರಿ, ಅಚ್ಯುತ್‌ ಕುಮಾರ್‌ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ಬಿ. ಅಜನೀಶ್‌ ಲೋಕ್‌ ನಾಥ್‌ ಸಂಗೀತ ಸಂಯೋಜನೆ ಮಾಡಿರುತ್ತಾರೆ, ಹಾಗು ಸಿ. ಆರ್‌ ಬಾಬಿ ಮತ್ತು ಬಿ. ಅಜನೀಶ್‌ ಲೋಕ್‌ ನಾಥ್‌ ನಿರ್ಮಾಣ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin