KM Chaitanya with Vinod Prabhakar through "Balaramana Dinagalu

“ಬಲರಾಮನ ದಿನಗಳು” ಮೂಲಕ ವಿನೋದ್ ಪ್ರಭಾಕರ್ ಜೊತೆಯಾದ ಕೆ,ಎಂ ಚೈತನ್ಯ - CineNewsKannada.com

“ಬಲರಾಮನ ದಿನಗಳು” ಮೂಲಕ ವಿನೋದ್ ಪ್ರಭಾಕರ್ ಜೊತೆಯಾದ ಕೆ,ಎಂ ಚೈತನ್ಯ

“ಆ ದಿನಗಳು” ಖ್ಯಾತಿಯ ನಿರ್ದೇಶಕ ಕೆ.ಎಂ ಚೈತನ್ಯ ಮತ್ತು ಟೈಗರ್ ವಿನೋದ್ ಪ್ರಭಾಕರ್ ಮೊದಲ ಬಾರಿಗೆ “ ಬಲರಾಮನ ದಿನಗಳು” ಚಿತ್ರದಲ್ಲಿ ಜೊತೆಯಾಗಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ ಸೃಷ್ಠಿಯಾಗಿದೆ.

ಟೈಗರ್ ವಿನೋದ್ ಪ್ರಭಾಕರ್,25ನೇ ಚಿತ್ರ “ ಬಲರಾಮನ ದಿನಗಳು” ಚಿತ್ರದ ಮೂಲಕ ಹೊಸ ಗೆಟಪ್ ಮತ್ತು ಲುಕ್‍ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ.

ಈ ವೇಳೆ ಮಾತಿಗಿಳಿದ ನಟ ವಿನೋದ್ ಪ್ರಭಾಕರ್, ಇದು ನನ್ನ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. “ಬಲರಾಮನ ದಿನಗಳು” ಗೆ ಬಲ ನೀಡುವುದಕ್ಕೆ ಸಂತೋಷ್ ನಾರಾಯಣನ್ ಅವರು ಇಲ್ಲಿಗೆ ಬಂದಿದ್ದಾರೆ. ಸಂತೋಷ್ ನಾರಾಯಣನ್ ಅವರೇ ಯಾಕೆ ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ನಮ್ಮಲ್ಲಿ ಜನ ಒಪ್ಪಿಕೊಂಡಿದ್ದಾರೆ. ಅವರು ಯಾರು ಎಂದು ಗೊತ್ತಿಲ್ಲದಿರಬಹುದು, ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್‍ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಪೆÇೀಸ್ಟ್ ನೋಡಿ, ಇವರ ಸಿಗ್ನೇಚರ್ ಸಂಗೀತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಿತ್ರತಂಡದವರೆಲ್ಲಾ ನಿರ್ಧಾರ ತೆಗೆದುಕೊಂಡು ಅವರನ್ನು ಕರೆಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

“ಬಲರಾಮನ ದಿನಗಳು” ಗ್ಯಾಂಗ್‍ಸ್ಟರ್ ಮತ್ತು ಕಲ್ಟ್ ಸಿನಿಮಾ ಆಗಿರುವುದರಿಂದ ಅವರೇ ಸೂಕ್ತ ಎಂದನಿಸಿತು. ಅವರು ದೊಡ್ಡ ಸಂಗೀತ ನಿರ್ದೇಶಕ. ಅವರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. `ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು ಎಂದರು.

ಬಲರಾಮನ ದಿನಗಳು ಚಿತ್ರ ವಿಭಿನ್ನವಾಗಿದೆ, 80 ಮತ್ತು 90ರ ಕಾಲಘಟ್ಟದ ಚಿತ್ರವಾಗಿರುವುದರಿಂದ ಸಾಕಷ್ಟು ಪ್ರಯೋಗ ಮಾಡಬಹುದು ಎಂದು ಖುಷಿಪಟ್ಟು ಒಪ್ಪಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದಿರುವ ಹೆಮ್ಮೆ ಇದೆ. ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದು ಹೇಳಿಕೊಂಡರು

ನಿರ್ದೇಶಕ ಕೆ,ಎಂ ಚೈತನ್ಯ ಮಾತನಾಡಿ ಬಲರಾಮನ ದಿನಗಳು ಚಿತ್ರ 90 ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆ. ಟೈಗರ್ ಅವರ ಚಿತ್ರವನ್ನು ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರಾದ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ಗೆ ವಂದನೆಗಳು. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆಯ ಹಾಡುಗಳು ಬರಲಿದೆ ಎಂದರು.

ನಿರ್ಮಾಪಕ ಶ್ರೇಯಸ್ ಮಾತನಾಡಿ ವಿನೋದ್ ಪ್ರಬಾಕರ್ ನಾಯಕರಾಗಿ ನಟಿಸುತ್ತಿರುವ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷವಾಗಿದೆ. ಮೊದಲ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ ಹಾಗೂ ಕೆ.ಎಂ.ಚೈತನ್ಯ ನಿರ್ದೇಶನ ಮಾಡುತ್ತಿದ್ದಾರೆ. ಕನಸಿಗೆ ಆಸರೆಯಾದ ಅಪ್ಪ ಅಮ್ಮನಿಗೆ ಧನ್ಯವಾದ. ಮುಂದೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದರು

ನಿರ್ಮಾಪಕ ಶ್ರೇಯಸ್. ನಿರ್ಮಾಪಕಿ ಪದ್ಮಾವತಿ ಜಯರಾಂ ಹಾಗೂ ಜಯರಾಂ ಅವರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin