"Mafia" movie Duet Released: The song that grabbed attention
“ಮಾಫಿಯಾ” ಚಿತ್ರದ ಯುಗಳ ಗೀತೆ ಬಿಡುಗಡೆ: ಗಮನ ಸೆಳೆದ ಹಾಡು
ಪ್ರಜ್ವಲ್ ದೇವರಾಜ್ – ಅದಿತಿ ಪ್ರಭುದೇವ ಅಭಿನಯದ ಚಿತ್ರ ಮಾಫಿಯಾದ ಯುಗಳ ಗೀತೆಯನ್ನು ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ.ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶನವಿದೆ.
“ಮಾಫಿಯಾ” ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಅವರು ಬರೆದಿರುವ “ತುಂಬಾನೆ ಕೇಳಲಾರೆ” ಎಂಬ ಸುಂದರ ಯುಗಳ ಗೀತೆಯ ಲಿರಿಕಲ್ ವಿಡಿಯೋ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಪ್ರೇಮಗೀತೆಯನ್ನು ಹರಿಹರನ್ ಹಾಗೂ ಸಾನ್ವಿ ಶೆಟ್ಟಿ ಸುಶ್ರಾವ್ಯವಾಗಿ ಹಾಡಿದ್ದಾರೆ.
ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲರ ಮೆಚ್ಚಗೆ ಗಳಿಸುತ್ತಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.