“ಮಗ್ಗಿಪುಸ್ತಕ” ಬದುಕಿನ ಲೆಕ್ಕಾಚಾರ : ಫೆಬ್ರವರಿ 13ಕ್ಕೆ ತೆರೆಗೆ
ಮೊಬೈಲ್ ಬಗ್ಗೆ ಮಾಡಿರುವ “ಮಗ್ಗಿಪುಸ್ತಕ” ಚಿತ್ರದ ಮೂರನೇ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು ಗಮನ ಸೆಳೆದಿದ್ದು 13ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಸಿ.. ಯತಿರಾಜ್ ಸ್ನೇಹಿತರ ಜತೆಸೇರಿ ಚಿತ್ರ ನಿರ್ಮಿಸಿದ್ದಾರೆ. ಜತೆಗೆ ನಿರ್ದೇಶಕರೂ ಕೈಜೋಡಿಸಿದ್ದಾರೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಹರಿವರಾಸನಂ, ಮಗ್ಗಿ ಪುಸ್ತಕ ಮಕ್ಕಳ ಚಿತ್ರವಲ್ಲ,ಬದುಕಿನ ಲೆಕ್ಕಾಚಾರ, ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ, ಇದರಲ್ಲಿ ಒಳ್ಳೆದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು, ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು ಎಂದು ಹೇಳಿದ್ದೇನೆ ಎಂದರು
ಅವನಿ ಕಾದಂಬರಿ ಆಧರಿಸಿ ಮಾಡಿದ ಚಿತ್ರವಿದು. ನಾಲ್ಕು ಆಯಾಮಗಳಲ್ಲಿ ನಡೆಯುವ ಹೈಪರ್ ಲಿಂಕ್ ಚಿತ್ರ. ಜೀವನದ ಲೆಕ್ಕಾಚಾರ ಇದರಲ್ಲಿದೆ ಎಂದು ಮಾಹಿತಿ ನೀಡಿದರು.
ನಟಿ ರಕ್ಷಾಗೌಡ ಮಾತನಾಡಿ ಈಗಾಗಲೇ ರಾಧಾರಮಣ, ಪುಟ್ಮಲ್ಲಿ ಸೀರಿಯಲ್ಗಳಲ್ಲಿ ಅಭಿನಯಿಸಿದ್ದೆ, ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದೇನೆ. ತಾಯಿಯ ಪಾತ್ರ ಅನ್ನೋದಕ್ಕಿಂತ ಚಾಲೆಂಜಿಂಗ್ ಪಾತ್ರ ಅದಾಗಿತ್ತು ಎಂದು ವಿವರಿಸಿದರು,

ನಟ ಕೃಷ್ಣ ಮಹೇಶ್ ಮಾತನಾಡಿ ನೆಗೆಟಿವ್ ಪಾತ್ರ ಮಾಡಿದ್ದೇನೆ,ನಾಲ್ಕು ವೇನಲ್ಲಿ ಸಾಗುವ ಚಿತ್ರದ ಕಥೆ ಕ್ಲೈಮ್ಯಾಕ್ಸ್ ನಲ್ಲಿ ಒಂದೆಡೆ ಸೇರುತ್ತದೆ, ಮೊಬೈಲ್ ಹೆಚ್ಚು ಬಳಸುವುದರಿಂದ ಏನೇನೆಲ್ಲ ಆಗುತ್ತದೆ, ಅದರ ಅನುಕೂಲ, ಅನಾನುಕೂಲತೆಗಳೇನು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇನೆ ಎಂದರು.
ನಿರ್ಮಾಪಕ ಯತಿರಾಜ್ ಮಾತನಾಡಿ ಮೊದಲ ಚಿತ್ರ, ಎಲ್ಲರೂ ಪೆÇ್ರೀತ್ಸಾಹಿಸಿ ಎಂದು ಹೇಳಿದರೆ, ದಡ್ಡ ಪ್ರವೀಣ್ ಖ್ಯಾತಿಯ ರಂಜಿತ್ ಕಾಸರಗೋಡು, ವರ್ಧನ್ ತೀರ್ಥಳ್ಳಿ, ರಾನ್ವಿ ಶೇಖರ್ ತಂತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು,

ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ, ಮಗ್ಗಿಪುಸ್ತಕ ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, 17 ಜನ ಸಿಂಗರ್ಸ್ ಹಾಡಿದ್ದಾರೆ.
ಎಸ್.ಎಸ್. ನಾಚಪ್ಪ ಸಂಗೀತ ಸಂಯೋಜನೆಯಿದೆ. ಡಾ. ವಿಷ್ಣುವರ್ಧನ್ ಅಭಿನಯದ ಅಪ್ಪಾಜಿ, ಜಮೀನ್ದರರು ಚಿತ್ರಗಳಿಗೆ ಸಂಗೀತ ನೀಡಿದ್ದ ಎಂ.ಎಂ.ಕೀರವಾಣಿ ಬಹಳ ದಿನಗಳ ನಂತರ ಚಿತ್ರದ ಹಾಡೊಂದಕ್ಕೆ ದನಿಯಾಗಿರುವುದು ವಿಶೇಷ. ಉಳಿದಂತೆ ಕನ್ನಡ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್,ಕಂಭದ ರಂಗಯ್ಯ, ನವೀನ್ ಸಜ್ಜು, ಇಂದು ನಾಗರಾಜ್, ಗುರುರಾಜ್ ಹೊಸಕೋಟೆ, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ 17 ಜನ ಈ ಚಿತ್ರದಲ್ಲಿ ಹಾಡಿರುವುದು ಮತ್ತೊಂದು ವಿಶೇಷ.
ಎಂ.ಪಿ. ಫಿಲಂಸ್ ಮೂಲಕ ಕೆ. ಮುನೀಂದ್ರ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ, ಸರ್ಕಾರಿ ಹಿರಿಯ ಪಾಠಶಾಲೆ ಖ್ಯಾತಿಯ ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಇನ್ನಿತರರು ನಟಿಸಿದ್ದಾರೆ. ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ಶಿವಕುಮಾರ್ ಸಂಕಲನವಿದೆ.


