Manomurthy Musical Company buys the audio rights of the film "Kuladali Keelyavudo"

“ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಮನೋಮೂರ್ತಿ ಮ್ಯೂಸಿಕಲ್ ಕಂಪನಿ - CineNewsKannada.com

“ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಆಡಿಯೋ ಹಕ್ಕು ಖರೀದಿಸಿದ ಮನೋಮೂರ್ತಿ ಮ್ಯೂಸಿಕಲ್ ಕಂಪನಿ

ನಾಡಿನೆಲ್ಲೆಡೆ ಹನುಮ ಜಯಂತಿಯ ಸಂಭ್ರಮದಲ್ಲರುವಾಗ ಕೆ ರಾಮ್ ನಾರಾಯಣ್ ನಿರ್ದೇಶನದ, “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಆಡಿಯೋ ಹಕ್ಕನ್ನು ಸಂಗೀತ ನಿರ್ದೇಶಕ ಮನೋಮೂರ್ತಿ ಮಾಲೀಕತ್ವದ ಮ್ಯೂಸಿಕಲ್ ಕಂಪನಿ ತನ್ನದಾಗಿಸಿಕೊಂಡಿದೆ

ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಟಿಸಿರುವ ಚಿತ್ರ ಇದು.

ಯೋಗರಾಜ್ ಭಟ್ ಜಯಂತ್ ಕಾಯ್ಕಿಣಿ, ರಾಮ್ ನಾರಾಯಣ್ ಬರೆದಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಚಿತ್ರೀಕರಣ ನಡೆಯುತ್ತಿರುವ ಸಮಯದಲ್ಲೇ ಆಡಿಯೋ ಹಕ್ಕನ್ನು ಒಳ್ಳೆಯ ಮೊತ್ತಕ್ಕೆ ಮನೋಮೂರ್ತಿ ಮ್ಯೂಸಿಕಲ್ ಕಂಪನಿ ಪಡೆದುಕೊಂಡಿದೆ.

ಸಂಗೀತ ನಿರ್ದೇಶಕರು ಮನೋಮೂರ್ತಿ ಅವರೆ ಆಗಿರುವುದು ವಿಶೇಷ. ಹನುಮ ಜಯಂತಿಯ ದಿನವೇ ಅಂಜನಾದ್ರಿಗೆ ಭೇಟಿ ನೀಡಿರುವ ಚಿತ್ರತಂಡದ ಸದಸ್ಯರು ಅಂಜನಿಸುತ ಆಂಜನೇಯನ ದರ್ಶನ ಪಡೆದು ಆಡಿಯೋ ರೇಟ್ಸ್ ಸೋಲ್ಡ್ ಔಟ್ ಆಗಿರುವ ವಿಷಯ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin