Mass love story "Pranayam" release on February 9,

ಫೆಬ್ರವರಿ 9ಕ್ಕೆ ಮಾಸ್ ಲವ್ ಸ್ಟೋರಿ “ಪ್ರಣಯಂ” ಬಿಡುಗಡೆ - CineNewsKannada.com

ಫೆಬ್ರವರಿ 9ಕ್ಕೆ ಮಾಸ್ ಲವ್ ಸ್ಟೋರಿ “ಪ್ರಣಯಂ” ಬಿಡುಗಡೆ

ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್, ನೈನಾ ಗಂಗೂಲಿ ನಟಿಸಿರುವ, ಮಾಸ್ ಪ್ರೇಮಕಥೆ ಯೊಂದನ್ನು ಹೇಳುವ “ಪ್ರಣಯಂ” ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪಲ್ಲಕ್ಕಿ, ಪಾರಿಜಾತದಂಥ ನವಿರು ಪ್ರೇಮ ಕಥೆಗಳನ್ನು ನೀಡಿದ ಪರಮೇಶ್ ಅವರ ಬ್ಯಾನರ್ ನಲ್ಲಿ ಮೂಡಿಬಂದಿರುವ ಮತ್ತೊಂದು ಇನ್ ಟೆನ್ಸ್ ಲವ್ ಸ್ಟೋರಿ ಪ್ರಣಯಂ ಚಿತ್ರದಲ್ಲಿದೆ. ಮನಸ್ವಿ ವೆಂಚರ್ಸ್ ಹಾಗೂ ಪಿಟು ಪೆÇ್ರಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ. ಫೆಬ್ರವರಿ 9ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿರುವ ಈ ಚಿತ್ರವು ತನ್ನ ಟ್ರೈಲರ್ , ಸಾಂಗ್ಸ್ , ಮೇಕಿಂಗ್ ಮೂಲಕವೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಪ್ರಣಯಂ ಚಿತ್ರಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಅವರು 3 ಸುಂದರ ಪ್ರೇಮಗೀತೆಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ.ಪರಮೇಶ್ ಅವರು ಒಂದು ಚಿತ್ರ ಮಾಡುವಾಗ ಅದಕ್ಕೆ ತುಂಬಾ ಎಫರ್ಟ್ ಹಾಕುತ್ತಾರೆ. ತಾನೊಬ್ಬ ನಿರ್ಮಾಪಕ, ಬಂಡವಾಳ ಹಾಕುವುದಷ್ಟೇ ನನ್ನ ಕೆಲಸ ಎಂದುಕೊಳ್ಳದೆ ಎಲ್ಲಾ ವಿಭಾಗದಲ್ಲೂ ಜವಾಬ್ದಾರಿ ತೆಗೆದುಕೊಂಡು ತಾವೇ ನಿಭಾಯಿಸುತ್ತಾರೆ. ನಿಜಕ್ಕೂ ಅವರು ಜೋಷ್ ಇರುವಂಥ ನಿರ್ಮಾಪಕ. ಅದೇ ಕಾರಣಕ್ಕೆ ಅವರ ನಿರ್ಮಾಣದ ಚಿತ್ರಗಳು ಬಿಡುಗಡೆಗೂ ಮುನ್ನವೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತವೆ.

ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ದತ್ತಾತ್ರೇಯ ಚಿತ್ರದ ಕಾನ್ಸೆಪ್ಟ್ ಗೆ ಸೂಕ್ತವಾಗುವಂಥ ಸಾಕಷ್ಟು ಲೊಕೇಶನ್ ಗಳನ್ನು ಹುಡುಕಾಡಿದ ನಂತರವಫ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ ಲೊಕೇಶನ್ ಸಿಕ್ತು. ಎಲ್ಲರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಬಂದಿದೆ. ನಾಗೇಶ್ ಅವರು ಇಡೀ ಚಿತ್ರವನ್ನು ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಕನ್ನಡ ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಈಗಿನ ಕಾಲದ ಸಾಕಷ್ಟು ಕುಟುಂಬಗಳಲ್ಲಿ ಈ ಥರದ ಘಟನೆಗಳು ನಡೆಯುತ್ತಲೇ ಇವೆ. ಅಂಥಾ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ಪರಮೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿದೇಶದಿಂದ ಬರುವ ಎಂಬ ಗೌತಂ ಎಂಬ ಯುವಕನ ಪಾತ್ರದಲ್ಲಿ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಸ್ವಂತ ಸಂಬಂಧದಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗ್ತಾನೆ. ಆನಂತರ 15-20 ದಿನಗಳಲ್ಲಿ ನಡೆಯುವ ಕಥೆ ತುಂಬಾ ಇಂಟರೆಸ್ಟಿಂಗ್ ಹಾಗೂ ಇನ್ ಟೆನ್ಸಿವ್ ಆಗಿದೆ.

ನಿರ್ಮಾಪಕ ಪರಮೇಶ್ ಅವರು ಈವರೆಗೆ 9 ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದೇನೆ. ಜನ ಕೈ ಹಿಡಿಯುತ್ತಾರೆಂಬ ನಂಬಿಕೆ ಇಟ್ಟುಕೊಂಡಿದ್ದಾರೆ.

ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಝಂಕಾರ್ ಮ್ಯೂಸಿಕ್ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ದನಿಯಾಗಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin