ಮ್ಯಾಥ್ಯೂ ಥಾಮಸ್-ಮಾಳವಿಕಾ ಮೋಹನನ್ ಅಭಿನಯದ ‘ಕ್ರಿಸ್ಟಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಮ್ಯಾಥ್ಯೂ ಥಾಮಸ್ ಮತ್ತು ಮಾಳವಿಕಾ ಅಭಿನಯದಲ್ಲಿ ಆಲ್ವಿನ್ ಹೆನ್ರಿ ನಿರ್ದೇಶಿಸಿರುವ ‘ಕ್ರಿಸ್ಟಿ’ ಚಿತ್ರದ ಮೊದಲ ನೋಟ ಮತ್ತು ಶೀರ್ಷಿಕೆಯನ್ನು ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಜಯಸೂರ್ಯ, ಟೊವಿನೋ ಥಾಮಸ್, ಜಾಯ್ ಮ್ಯಾಥ್ಯೂ, ನಿವಿನ್ ಪೌಲಿ, ಸನ್ನಿ ವೇನ್, ಉನ್ನಿ ಮುಕುಂದನ್, ಬೆಸಿಲ್ ಜೋಸೆಫ್ ಮತ್ತು ಆಂಥೋನಿ ಪೆಪೆ ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಖಾತೆಗಳ ಮೂಲಕ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ.
ರಾಕಿ ಮೌಂಟೇನ್ ಸಿನಿಮಾಸ್ ಬ್ಯಾನರ್ನಡಿ ಸಜಯ್ ಸೆಬಾಸ್ಟಿಯನ್ ಮತ್ತು ಕಣ್ಣನ್ ಸತೀಶನ್ ನಿರ್ಮಿಸಿರುವ ‘ಕ್ರಿಸ್ಟಿ’ ಒಂದು ರೊಮ್ಯಾಂಟಿಕ್ ಫೀಲ್ ಗುಡ್ ಸಿನಿಮಾ ಎಂದು ಹೇಳಲಾಗುತ್ತಿದೆ. ಸತ್ಯ ಘಟನೆಗಳನ್ನು ಆಧರಿಸಿ ನಿರ್ದೇಶಕ ಆಲ್ವಿನ್ ಹೆನ್ರಿ ಅವರೇ ಕಥೆ ರಚಿಸಿದ್ದು, ಬೆನ್ಯಮಿನ್ ಮತ್ತು ಜಿ.ಆರ್. ಇಂದುಗೋಪನ್ ಚಿತ್ರಕಥೆ ಬರೆದಿದ್ದಾರೆ. ಇದೊಂದು ರೊಮ್ಯಾಂಟಿಕ್ ಫೀಲ್ ಗುಡ್ ಚಿತ್ರವಾಗಿದ್ದು, ಕೇರಳದ ಪೂವೂರ್ ಮತ್ತು ಮಾಲ್ಡೀವ್ಸ್ನಲ್ಲಿ ಚಿತ್ರೀಕರಣ ಮಾಡಲಾಗಿದೆ.
‘ಕ್ರಿಸ್ಟಿ’ ಚಿತ್ರಕ್ಕೆ ಆನಂದ್ ಸಿ ಚಂದ್ರನ್ ಅವರ ಛಾಯಾಗ್ರಹಣ ಮತ್ತು ಗೋವಿಂದ್ ವಸಂತ ಅವರ ಸಂಗೀತವಿದೆ.
‘ಕ್ರಿಸ್ಟಿ’ ಚಿತ್ರದ ತಂತ್ರಜ್ನರು
ಸಂಕಲನ: ಮನು ಆಂಟೋನಿ
ಸಾಹಿತ್ಯ: ವಿನಾಯಕ್ ಶಶಿಕುಮಾರ್ ಮತ್ತು ಅನ್ವರ್ ಅಲಿ
ಕಲಾ ನಿರ್ದೇಶನ: ಸುಜಿತ್ ರಾಘವ್
ವಸ್ತ್ರ ವಿನ್ಯಾಸ: ಸಮೀರ ಸನೀಶ್
ಮೇಕಪ್: ಶಾಜಿ ಪುಲ್ಪಲ್ಲಿ
ಸ್ಟಿಲ್ಸ್: ಸಿನೆಟ್ ಕ್ಸೇವಿಯರ್
ನಿರ್ಮಾಣ ನಿಯಂತ್ರಕ: ದೀಪಕ್ ಪರಮೇಶ್ವರನ್
ಮುಖ್ಯ ಸಹಾಯಕ ನಿರ್ದೇಶಕ: ಶೆಲ್ಲಿ ಶ್ರೀಸ್
ಪಬ್ಲಿಸಿಟಿ ಡಿಸೈನರ್: ಆನಂದ್ ರಾಜೇಂದ್ರನ್
PRO: ಸುಧೀಂದ್ರ ವೆಂಕಟೇಶ್
ಮಾರ್ಕೆಟಿಂಗ್: ಹುವೈಸ್ (ಮ್ಯಾಕ್ಸ್‌ಸೋ)