Mayanagari Film Shooting Completed Silently: Actor Anish in a new avatar

ಮಾಯಾನಗರಿ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಪೂರ್ಣ : ಹೊಸ ಅವತಾರದಲ್ಲಿ ನಟ ಅನೀಶ್ - CineNewsKannada.com

ಮಾಯಾನಗರಿ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಪೂರ್ಣ : ಹೊಸ ಅವತಾರದಲ್ಲಿ ನಟ ಅನೀಶ್

ಅನೀಶ್ ನಟಿಸಿರುವ, ಶಂಕರ್ ಆರಾಧ್ಯ ನಿರ್ದೇಶನದ ಮಾಯಾನಗರಿ ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. ಅದಕ್ಕೂ ಮುನ್ನ ಟೀಸರ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ ಚಿತ್ರತಂಡ. ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರತಂಡ, ಯು/ಎ ಅರ್ಹತಾ ಪತ್ರ ಪಡೆದುಕೊಂಡಿದೆ.

ಸಿನಿಮಾ ನಿರ್ದೇಶನದ ಕನಸು ಹೊತ್ತು ಬರುವ ಯುವ ಪ್ರತಿಭೆಯ ಪಾತ್ರದಲ್ಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಕಾಮಿಡಿ, ಲವ್, ಆಕ್ಷನ್, ಸೆಂಟಿಮೆಂಟ್ ಕಥಾಹಂದರವಿರುವ ಈ ಚಿತ್ರದಲ್ಲಿ ಮತ್ತೊಂದು ವಿಶೇಷತೆ ಇದೆ. ಅದನ್ನು ಟ್ರೇಲರ್ ಬಿಡುಗಡೆ ವೇಳೆ ಅನಾವರಣ ಮಾಡುವ ಯೋಜನೆ ನಿರ್ದೇಶಕರಿಗಿದೆ.

ಇನ್ನು ಈ ಚಿತ್ರದಲ್ಲಿ ಹಲವಾರು ವಿಶೇಷತೆಗಳಿದ್ದು, ಅದನ್ನು ಹಂತ ಹಂತವಾಗಿ ಪರಿಚಯಿಸುವ ಆಲೋಚನೆ ಶಂಕರ್ ಆರಾಧ್ಯರದ್ದು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಶಂಕರ್ ಆರಾಧ್ಯ. ಇದರ ಜತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶ್ವೇತಾ ಶಂಕರ್ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ತಾಂತ್ರಿಕವಾಗಿಯೂ ಈ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಮೋರ್ ಈ ಚಿತ್ರದಲ್ಲಿ ವಿಭಿನ್ನವಾಗಿ ಫೈಟ್ ಕಂಪೋಸ್ ಮಾಡಿದ್ದಾರೆ. ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ. ಹಿರಿಯ ನಟ, ನಿರ್ದೇಶಕ ದ್ವಾರಕೀಶ್, ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ ಹಾಗೂ ನಿಹಾರಿಕಾ ಮೊದಲಾದವರು ಚಿತ್ರದ ತಾರಬಳಗದಲ್ಲಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin