ಮೆಹಬೂಬ ಚಿತ್ರ ಮಾರ್ಚ್ 15ಕ್ಕೆ ಬಿಡುಗಡೆ”:ವಿಭಿನ್ನವಾಗಿ ದಿನಾಂಕ ಪ್ರಕಟಿಸಿದ ನಾಯಕ-ನಾಯಕಿ
” ಜಾತಿ ಮತ ಧರ್ಮಗಳ ಮೀರಿನಿಂತ ಮೆಹಬೂಬಾ ,ಪ್ರೀತಿ ಪ್ರೇಮ ನ್ಯಾಯ ಸಮಾನತೆ ಸಾರುವ ಮೆಹಬೂಬಾ”. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಿಜೇತರಾದ ರೈತ ಶಶಿಕುಮಾರ್ ಮತ್ತು ಪಾವನಿ ಗೌಡ ನಾಯಕಿಯಾಗಿ ನಟಿಸಿರುವ “ಮೆಹಬೂಬ” ಚಿತ್ರ ಮಾರ್ಚ್ 15ಕ್ಕೆ ಬಿಡುಗಡೆಯಾಗಲಿದ್ದು ಚಿತ್ರದ ದಿನಾಂಕವನ್ನು ವಿನೂತನವಾಗಿ ನಾಯಕ-ನಾಯಕಿಯರಿಬ್ಬರೂ ಪ್ರಕಟಿಸಿದ್ಧಾರೆ
ಮೆಹಬೂಬಾ ಚಿತ್ರದ ಎರಡು ಹಾಡುಗಳು ಸದ್ದು ಸುದ್ದಿ ಮಾಡಿದೆ. ಹಲವು ವಿಶೇಷ ಮತ್ತು ವಿಶಿಷ್ಠ ವಿಚಾರಗಳಿಂದ ತುಂಬಿರೋ ಈ ಸಿನಿಮಾ. ಇದೇ ಮಾರ್ಚ್ 15ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದ್ದು, ಈ ಚಿತ್ರದ ರಿಲೀಸ್ ದಿನಾಂಕವನ್ನು ಚಿತ್ರತಂಡ ವಿಶೇಷವಾಗಿ ಅನೌನ್ಸ್ ಮಾಡಿ ಗಮನ ಸೆಳೆದಿದೆ.
ನಾಯಕ ಶಶಿ ಹಿಂದೂ ಹುಡುಗನಂತೆ ಮತ್ತು ನಾಯಕಿ ಪಾವನಾ ಗೌಡ ಮುಸ್ಲಿಂ ಹುಡುಗಿಯಂತೆ ವೇಷ ತೊಟ್ಟು,ಕೈಯಲ್ಲಿ ರಿಲೀಸ್ ಡೇಟ್ ಬೋರ್ಡ್ ಇಟ್ಟುಕೊಂಡು,ವಿಧಾನಸೌಧ ,ನ್ಯಾಯಾಲಯ,ಪೆÇಲೀಸ್ ಠಾಣೆ, ಮಸೀದಿ,ಮಾರ್ಕೆಟ್ ,ಮಂದಿರದ ಬಳಿ ಸರ್ವ ಧರ್ಮ ಸಮಾನತೆಯನ್ನ ಸಾರೋ ವಿಚಾರ ಹೇಳುತ್ತಾ ಸಿನಿಮಾ ರಿಲೀಸ್ ಡೇಟ್ನ ಅನೌನ್ಸ್ ಮಾಡಿ ಥಿಯೇಟರ್ಗೆ ಕರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಈಗ ಚರ್ಚೆಯಲ್ಲಿದೆ.
ನಿಮಗೆಲ್ಲಾ ಗೊತ್ತಿರೋ ಹಾಗೇ, ಕನ್ನಡ ಬಿಗ್ ಬಾಸ್ ಸೀಸನ್ 6ರಲ್ಲಿ ಸಕತ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ, ಮಾಡ್ರನ್ ರೈತ ಎಂಬ ಹೆಸರಿನಿಂದ ಕನ್ನಡಿಗರ ಮನಗೆದ್ದು ಬಿಗ್ ಬಾಸ್ ಟ್ರೋಫಿಯನ್ನು ಎತ್ತಿ ಹಿಡಿದಿದವರು ಯುವ ರೈತ ಶಶಿ ಕುಮಾರ್.
‘ಮೆಹಬೂಬಾ’ ಸಿನಿಮಾ ಮೂಲಕ ಮಾಡರ್ನ್ ರೈತ ಶಶಿ ಹೀರೊ ಆಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ದಕ್ಷ್ ಎಂಟ್ರಟೈನ್ಮೆಂಟ್ಸ್ ಸಹಯೋಗದಲ್ಲಿ ಬಾಲಾಜಿ ಮೋಷನ್ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಶಶಿ ನಟನೆಯೊಂದಿಗೆ ನಿರ್ಮಾಣವನ್ನೂ ಮಾಡಿದ್ದಾರೆ. ಅನೂಪ್ ಆಂಟೋನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ‘ಮೆಹಬೂಬಾ’ ಚಿತ್ರ ವನ್ನ ಮಾಡಲಾಗಿದೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನವಿರುವ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.ಈವರೆಗೂ ರಿಲೀಸ್ ಆಗಿರೋ ಕಂಟೆಂಟ್ಸ್ ಎಲ್ಲವೂ ಎಲ್ಲಾ ಆಕ್ಟಿಗ್ ನಿಂದಲೂ ವಿಶೇಷವಾಗಿ ಕಾಣ್ತಿವೆ. ಮಾರ್ಚ್ 15ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿರೋ ಈ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್ ಆಗಲಿದೆ.