'Mehbooba' Teaser Unveiled: March 15 Release

‘ಮೆಹಬೂಬಾ’ ಚಿತ್ರದ ಟೀಸರ್ ಅನಾವರಣ: ಮಾರ್ಚ್ 15ಕ್ಕೆ ಬಿಡುಗಡೆ - CineNewsKannada.com

‘ಮೆಹಬೂಬಾ’ ಚಿತ್ರದ ಟೀಸರ್ ಅನಾವರಣ: ಮಾರ್ಚ್ 15ಕ್ಕೆ ಬಿಡುಗಡೆ

ಬಿಗ್ ಬಾಸ್ ವಿಜೇತ ಹಾಗು ಮಾರ್ಡನ್ ರೈತ ಶಶಿಕುಮಾರ್ ನಟನೆಯ “ಮೆಹಬೂಬಾ” ಚಿತ್ರ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಪಾವನಾ ಗೌಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಮೆಹಬೂಬಾ ಟೀಸರ್ ಅನಾವರಣಗೊಂಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್, ಸ್ಪರ್ಧಿಗಳಾದ ರಕ್ಷಕ್ ಬುಲೆಟ್, ಪವಿ ಪೂವಪ್ಪ ಮೆಹಬೂಬಾ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಕನ್ನಡ ಬಿಗ್ ಬಾಸ್ ವಿನ್ನರ್ ಗಳಾದ ಚಂದನ್ ಶೆಟ್ಟಿ, ಅಕುಲ್ ಬಾಲಾಜಿ, ಶೈನ್ ಶೆಟ್ಟಿ, ರೂಪೇಶ್ ಶೆಟ್ಟಿ, ಮಂಜು ಪಾವಗಡ, ವಿಜಯ್ ರಾಘವೇಂದ್ರ, ಪ್ರಥಮ್ ಹಾಗೂ ಕಾರ್ತಿಕ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಹಬೂಬಾ ಟೀಸರ್ ಹಂಚಿಕೊಳ್ಳುವ ಮೂಲಕ ಶಶಿ ಹೊಸ ಪಯಣಕ್ಕೆ ಸಾಥ್ ಕೊಟ್ಟಿದ್ದಾರೆ.

ಬಿಗ್ ಬಾಸ್ ವಿನ್ನರ್ ಶಶಿಕುಮಾರ್ , ಟೀಸರ್ ಇವೆಂಟ್ ನಲ್ಲಿ ಕಣ್ಣೀರು ಹಾಕಿದ್ದಾರೆ. ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್‍ಬಾಸ್ ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂದರು ಎಂದಿದ್ದಾರೆ. ರೈತ ಅಂತಿಯಾ, ಈ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು. ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್ ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ ಎಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಾನು ನಿದ್ದೆ ಮಾಡ್ತಿಲ್ಲ ಎಂದಿದ್ದಾರೆ. ನಾನು ಇಡೀ ತಂಡದ ಜೊತೆ ಕಿತ್ತಾಡಿದ್ದೀನಿ ಅಂತ ಶಶಿ ಕಣ್ಣೀರಿಟ್ಟರು. ಮೆಹಬೂಬಾ ರಾಮಮಂದಿರ ಬಾಬ್ರಿ ಮಸೀದಿ ಕತೆಯಲ್ಲ. ಕಾರ್ತಿಕ್ ಗೌಡ ನಸ್ರಿಯಾ ಪ್ರೀತಿಯ ಕಥೆ ಎಂದಿದ್ದಾರೆ.

ನಟಿ ಪಾವನಾ ಗೌಡ ಮಾತನಾಡಿ ಚಿತ್ರದ ಟೀಸರ್ ರಿಲೀಸ್ ಆಯ್ತು. ಚಿತ್ರದ ಕಿರುಪರಿಚಯ ಇದು. ಟ್ರೇಲರ್ ಬಾಕಿ ಇದೆ. ಇದಕ್ಕೆ ತುಂಬಾ ಕಾಣಿಸಿಕೊಳ್ಳದ ಶಕ್ತಿಗಳು ಕೆಲಸ ಮಾಡಿವೆ. ನನಗೆ ನನ್ನ ತಂಡದ ಬಗ್ಗೆ ಹೆಮ್ಮೆ ಇದೆ. ಈ ಚಿತ್ರದ ರಿಲೀಸ್ ಒಂದು ಸಕ್ಸಸ್. ಮಾರ್ಚ್ 15ಕ್ಕೆ ಬರುತ್ತಿವೆ ಸಹಕಾರ ನೀಡಿ ಎಂದು ಕೇಳಿಕೊಂಡರು

ನಿರ್ದೇಶಕ ಅನೂಪ್ ಆಂಟೋನಿ ಮಾತನಾಡಿ, ಮೆಹಬೂಬಾ ನಮ್ಮ ಇಡೀ ತಂಡಕ್ಕೆ ಒಳ್ಳೆ ಜರ್ನಿ. ಹೀರೋ ಆಗಿ ಶಶಿ ಅವರು ಲಾಂಚ್ ಆಗುತ್ತಿದ್ದಾರೆ. ಅದು ಅಲ್ಲದೇ ಪ್ರೊಡ್ಯೂಸರ್ ಕೂಡ ಆಗಿದ್ದಾರೆ. ಡೈರೆಕ್ಟರ್ ಆಗಿ ಹೊಸಬರ ಜೊತೆ ಕೆಲಸ ಮಾಡಲು ಟೆನ್ಷನ್ ಇರುತ್ತದೆ. ಬೇಕಾಗಿರುವ ಎಕ್ಸ್ ಪ್ರೆಷನ್ ಆಗಲಿ, ಆಕ್ಟಿಂಗ್ ಆಗಲಿ, ಮ್ಯಾನರಿಸಂ ಆಗ್ಲಿ ಬರುತ್ತೋ ಇಲ್ಲವೋ ಅಂತಾ. ಆದರೆ ಮೊದಲ ದಿನವೇ ನನ್ನ ಇಂಪ್ರೆಸ್ ಮಾಡಿದರು. ಇದು ಅವರ ಮೊದಲ ಸಿನಿಮಾ ಎಂದು ಹೇಳುವುದಿಕ್ಕೆ ಆಗಲ್ಲ. ಈಗಾಗಲೇ ಪಾವನ ತಾವು ಎಂಥ ನಟಿ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಈ ಚಿತ್ರದಲ್ಲಿ ಅವರು ತುಂಬಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ತುಂಬಿರುವ ಚಿತ್ರ. ಮಾರ್ಚ್ 15 ಮೆಹಬೂಬಾ ಬಿಡುಗಡೆಯಾಗುತ್ತಿದೆ ಎಂದರು.

ಶಶಿ ಅವರು ಕನ್ನಡ ಬಿಗ್ ಬಾಸ್ ಸೀಸನ್ 6' ವಿನ್ನರ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಕೃಷಿ ಜೊತೆ ನಟನೆ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ಮೆಹಬೂಬಾ ಸಿನಿಮಾದ ಮೂಲಕ ಹೀರೋ ಆಗಿ ಅವರು ಚಂದನವನಕ್ಕೆ ಕಾಲಿಡುತ್ತಿದ್ದಾರೆ.ದಕ್ಷ್ ಎಂಟರ್ಟೇನ್ಮೆಂಟ್ಸ್’ ಸಹಯೋಗದಲ್ಲಿ ಬಾಲಾಜಿ ಮೋಷನ್ ಪಿಕ್ಚರ್ಸ್' ಬ್ಯಾನರ್ ಮೂಲಕಮೆಹಬೂಬಾ’ ಚಿತ್ರವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅನೂಪ್ ಆಂಟೋನಿ ಅವರು ನಿರ್ದೇಶನ ಮಾಡಿದ್ದಾರೆ. ಮಾಡ್ರನ್ ರೈತನಿಂದ ಶಶಿ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಮೆಹಬೂಬಾ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ಪಾವನಾ ಗೌಡ ಅಭಿನಯಿಸಿದ್ದಾರೆ.

ಮ್ಯಾಥ್ಯೂಸ್ ಮನು ಅವರು `ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ನಡೆದ ಒಂದು ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ ಎಂಬ ಕಾರಣದಿಂದಲೂ ಕೌತುಕ ಹೆಚ್ಚಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin