MLA Lakshan Savadi who watched the movie "Desai": Appreciation

“ದೇಸಾಯಿ” ಚಿತ್ರ ವೀಕ್ಷಿಸಿದ ಶಾಸಕ ಲಕ್ಷಣ್ ಸವದಿ: ಮೆಚ್ಚುಗೆ - CineNewsKannada.com

“ದೇಸಾಯಿ” ಚಿತ್ರ ವೀಕ್ಷಿಸಿದ ಶಾಸಕ ಲಕ್ಷಣ್ ಸವದಿ: ಮೆಚ್ಚುಗೆ

ಗ್ರಾಮೀಣ ಸೊಗಡಿನ ಕೌಟುಂಬಿಕ ಕಥಾ ಹಂದರ ಹೊಂದಿರುವ ಬಾಗಲಕೋಟೆಯ ಮಹಾಂತೇಶ ಚೋಳಚಗುಡ್ಡ ಕಥೆ ಬರೆದು ನಿಮಿ9ಸಿರುವ, ನಾಗಿ ರೆಡ್ಡಿ ನಿರ್ದೇಶನದ, ಪ್ರವೀಣ ಕುಮಾರ್ ಮತ್ತು ರಾಧ್ಯ ಅಭಿನಯದ “ದೇಸಾಯಿ” ಚಲನಚಿತ್ರವನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅವರು ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದ್ದಾರೆ

ಬಾಗಲಕೋಟೆಯ ವಾಸವಿ ಚಿತ್ರಮಂದಿರದಲ್ಲಿ ಬಾಗಲಕೋಟೆ ಜಿಲ್ಲಾ ಅಧಿಕಾರಿಗ ಜಾನಕಿ ಕೆ ಎಂ ಹಾಗೂ ಎಸ್ ಪಿ ಅಮರನಾಥ ರೆಡ್ಡಿ ಇವರು ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಿಸಿದ್ದಾರೆ

ನಂತರ ಮಾತನಾಡಿದ ಅವರು, “ದೇಸಾಯಿ” ಚಲನಚಿತ್ರ ಅತ್ಯುತ್ತಮವಾದ ಕೌಟುಂಬಿಕ ಕಥೆ ಹೊಂದ್ದಿದ್ದು ಬಾಗಲಕೋಟೆಯ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ . ಈ ಚಿತ್ರದಲ್ಲಿ ಸಮಾಜಕ್ಕೆ ಮತ್ತು ಈಗಿನ ಯುವ ಪೀಳಿಗೆಗೆ ಹಲವಾರು ಸಂದೇಶಗಳನ್ನು ನೀಡಲಾಗಿದೆ. ಈ ಚಿತ್ರವನ್ನು ಎಲ್ಲರೂ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೊತೆಯಲ್ಲಿದ್ದ ನಿರ್ಮಾಪಕರಿಗೆ ಶುಭ ಕೋರಿದರು..

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin