Muhurta for the movie "Ammana Laali" based on the novel

ಕಾದಂಬರಿ ಆಧಾರಿತ “ಅಮ್ಮನ ಲಾಲಿ” ಚಿತ್ರಕ್ಕೆ ಮುಹೂರ್ತ - CineNewsKannada.com

ಕಾದಂಬರಿ ಆಧಾರಿತ “ಅಮ್ಮನ ಲಾಲಿ” ಚಿತ್ರಕ್ಕೆ ಮುಹೂರ್ತ

ಕಡಿಮೆ ಬಜೆಟ್‍ನಲ್ಲಿ ಉತ್ತಮ ಚಿತ್ರ ನೀಡುತ್ತಾರೆ ಎಂಬ ಖ್ಯಾತಿಗೆ ಒಳಗಾಗಿರುವ ಹಿರಿಯ ನಟ,ನಿರ್ದೇಶಕ ಎಂ.ಡಿ.ಕೌಶಿಕ್ ಈ ಬಾರಿ ಕಾದಂಬರಿ ಆಧಾರಿತ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ಅಮ್ಮನ ಲಾಲಿ’ ಸಿನಿಮಾಕ್ಕೆ ಬಣ್ಣ ಹಚ್ಚದೆ ತೆರೆ ಹಿಂದೆ ಅಂದರೆ ನಿರ್ದೇಶನ ಜತೆಗೆ ಎಮರಾಲ್ಡ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ವಿದ್ಯಾರಣ್ಯಪುರದಲ್ಲಿರುವ ಶೂಟಿಂಗ್ ಮನೆಯಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡು, ಚಿತ್ರೀಕರಣವನ್ನು ಶುರು ಮಾಡಿಕೊಂಡಿದ್ದಾರೆ.

ಗೀತಾ.ಡಿ.ಎನ್. ಬರೆದಿರುವ ಕಥೆಯು, ಇವತ್ತಿನ ಕಾಲಘಟ್ಟದಲ್ಲಿ ಕೆಲವೊಂದು ಮನೆಯಲ್ಲಿ ನಡೆಯುವ ಘಟನಾವಳಿಗಳು, ತಾಯಿ ಮಗಳ ನಡುವಿನ ಆರೋಗ್ಯಕರ ವಾಗ್ವಾದಗಳು, ಸಮಸ್ಯೆಗಳು, ತನ್ನದೆ ಆದ ರೀತಿಯಲ್ಲಿ ಅಂತ್ಯ ಕಾಣುತ್ತದೆ. ಅವುಗಳು ಏನು ಎಂಬುದನ್ನು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ.

ಅಮ್ಮನಾಗಿ ಹಿರಿಯ ನಟಿ ಭವ್ಯ, ಪತಿಯಾಗಿ ಯತಿರಾಜ್. ಇವರೊಂದಿಗೆ ಪದ್ಮ, ರೂಪಾ, ಶರತ್, ನಂದಿನಿ, ಗೀತಾ, ಸೌಮ್ಯ ಮುಂತಾದವರು ನಟಿಸುತ್ತಿದ್ದಾರೆ. ಒಂದು ಭಾಗದ ಸನ್ನಿವೇಶವು ಅಮೇರಿಕಾದಲ್ಲಿ ಬರುವುದರಿಂದ, ಅಲ್ಲಿನ ಕಲಾವಿದರುಗಳಾದ ರಮ್ಯಾ-ಗೌರವ್‍ಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.

ಸದ್ಯ ಅಮೇರಿಕಾ ನಿವಾಸಿ, ಆರ್ಥಿಕ ತಜ್ಘರಾಗಿರುವ ಕನ್ನಡಿಗ ರವಿ.ಇ.ದತ್ತಾತ್ರೇಯ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿಶೇಷ. ಇವರು ಈಗಾಗಲೇ ಸಾಹಿತಿಗಳ ಕವನಗಳು ಹಾಗೂ ಆಲ್ಬಂಗಳಿಗೆ ಮ್ಯೂಸಿಕ್ ಕಂಪೆÇೀಸ್ ಮಾಡಿದ ಅನುಭವವಿದೆ. ಡಿವಿಜಿರವರ ಮಂಕುತಿಮ್ಮನ ಕಗ್ಗ, ಲಕ್ಷಿನಾರಾಯಣ ಭಟ್ಟ ಹಾಗೂ ಡಾ.ದೊಡ್ಡರಂಗೇಗೌಡರ ಸಾಹಿತ್ಯವನ್ನು ಸಿನಿಮಾಕ್ಕೆ ಬಳಸಲಾಗಿದೆ. ಎಂ.ಡಿ.ಪಲ್ಲವಿ ಮತ್ತು ಯುಎಸ್‍ಎ ಪ್ರತಿಭೆ ರಾಂಪ್ರಸಾದ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಕಲನ ಸಂಜೀವ್‍ರೆಡ್ಡಿ, ಸಂಭಾಷಣೆ ಶಿವಾನಂದ ಅವರದಾಗಿದೆ. ಶೇಕಡ 90ರಷ್ಟು ಚಿತ್ರೀಕರಣ ಬೆಂಗಳೂರು, ಉಳಿದ ದೃಶ್ಯಗಳನ್ನು ಲಾಸ್‍ಏಂಜಲೀಸ್, ಕ್ಯಾಲಿಫೆÇೀರ್ನಿಯಾದಲ್ಲಿ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin