ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹೊಸ ಪ್ರಯತ್ನ :”ಪ್ರೀತಿ ಅನ್ನೋ ದ್ಯಾವ್ರು” ಆಲ್ಬಂ ಹಾಡು ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಸಂಗೀತ ನಿರ್ದೇಶಕ, ಗಾಯಕ ರಾಗನಿಧಿ ಅನೂಪ್ ಸೀಳಿನ್ ಇದೀಗ ” ಪ್ರೀತಿ ಅನ್ನೋ ದ್ಯಾವ್ರು”. ವಿಡಿಯೋ ಆಲ್ಬಂ ಮೂಲಕ. ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಪ್ರಮೋದ್ ಮರವಂತೆ ಬರೆದಿರುವ ಆಲ್ಬಂ ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡುವ ಜೊತೆಗೆ ಗಾಯಕರೂ ಕೂಡ.ಇದರ ಜೊತೆಗೆ ಆಲ್ಬಂ ಹಾಡಿನಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ.
ಅನೂಪ್ ಸೀಳಿನ್ ಅವರ ಪ್ರಯತ್ನ ಕ್ಕೆ ಅವರ ಪತ್ನಿ ಕೃತಿ ಶೆಟ್ಟಿ ಹಾಡಿಗೆ ಬಂಡವಾಳ ಹಾಕಿದ್ದಾರೆ. ಪತಿಯ ಮೊದಲ ಆಲ್ಬಂ ಹಾಡನ್ನು ಬಿಡುಗಡೆ ಮಾಡಿ ಹೊಸ ಪ್ರಯತ್ನ ಯಶಸ್ಬಿ ಆಗಲಿ ಎಂದು ಶುಭ ಹಾರೈಸಿದರು

ಈ ವೇಳೆ ಮಾತಿಗಿಳಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಸಂಗೀತ ನಿರ್ದೇಶಕನಾಗಿ 16 ವರ್ಷ ಹಾಗು ಗುರುಗಳಾದ ಹಂಸಲೇಖ ಅವರ ಬಳಿ 10 ವರ್ಷಗಳೂ ಸೇರಿ ಸುಮಾರು 25 ವರ್ಷಕ್ಕೂ ಹೆಚ್ಚು ವರ್ಷಗಳ ಚಿತ್ರರಂಗದ ಅನುಭವದಲ್ಲಿ ಮೊದಲ ಬಾರಿಗೆ ನಮ್ಮದೇ ಆದ ಜೆಪಿ ಮ್ಯೂಸಿಕ್ ಕಂಪನಿಯ ಮೂಲಕ ಹಾಡು ಬಿಡುಗಡೆ ಮಾಡಿದ್ದೇವೆ ಎಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದು ಕೇಳಿ ಕೊಂಡರು.
” ಪ್ರೀತಿ ಎನ್ನುವ ದೇವ್ರು ನಮ್ಮೊಳ್ಳಗೆ ಮನೆ ಮಾಡವ್ನೆ.. ನಾನು ನಂದೆ ಎನ್ನುವ ಹಮ್ಮು ನೋಡಿ ಕಲ್ಲಾಗಿ ಬಿಟ್ಟವ್ನೆ… ಗಾಳಿ, ನೀರು ಕೊಳಚೆ ಮಾಡಿಬಿಟ್ಯಲ್ಲೋ , ಭೂಮಿ ತಾಯಿಗೆ ಬಾರ ಆಗಿ ಬಿಟ್ಯೆಲ್ಲೋ… ಎನ್ನುವ ಸಾಲುಗಳ ಮೂಲಕ ಹಾಡು ಆರಂಭವಾಲಿದೆ.
ಆಲ್ಬಂ ಹಾಡನ್ನು ಮೂರು ದಿನಗಳ ಕಾಲ ಬೆಂಗಳೂರಿನ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಸುಮಾರು 8 ರಿಂದ 10 ಲಕ್ಷ ಖರ್ಚಾಗಿದೆ. ಸಿನಿಮಾ ಹಾಡಿನ ರೀತಿಯೇ ಚಿತ್ರೀಕರಣ ಮಾಡಿದ್ದೇವೆ. ಸುಜ್ಞಾನ್ ಮೂರ್ತಿ ಹಾಡಿಗೆ ಕ್ಯಾಮಾರ ಕೆಲಸ ಮಾಡಿದ್ದಾರೆ ಎಂದರು

2016 -17ರ ಸಮಯದಲ್ಲಿ ರಾಜರಾಜೇಶ್ವರಿ ನಗರ ಶಾಂತವಾಗಿತ್ತು. ರಪ್ ಅಂತ ಬೆಳದ ಪರಿ, ಮನುಷ್ಯ ಮಾಡಿದ ಅವಾಂತರಗಳನ್ನು ಹಾಡಿನ ಮೂಲಕ ಕಟ್ಟಿಕೊಡಲಾಗಿದೆ. ಹುಟ್ಟಿದಾಗ ಮಕ್ಕಳನ್ನು ದೇವ್ರು ಅಂತಾರೆ. ಬೆಳೀತಾ ಬೆಳೀತಾ ಆಸೆ ದುರಾಸೆ ಮತ್ತಿತರ ವಿಷಯಗಳಿಂದ ಆದ ಅವಾಂತರಗಳನ್ನು ಹಾಡಿನ ಮೂಲಕ ಕಟ್ಟಿಕೊಡಲಾಗಿದೆ. 25 ವರ್ಷದ ಸಿನಿಮಾ ಜರ್ನಿಯಲ್ಲಿ ದುಡಿದ ಹಣವನ್ನು ಹಾಡಿಗೆ ಹಾಕಲಾಗಿದೆ. ವರ್ಷಕ್ಕೆ ಇನ್ನು ಮುಂದೆ ಕನಿಷ್ಠ ಎರಡು ಮೂರು ಹಾಡು ಮಾಡುವ ಉದ್ದೇಶವಿದೆ ಎಂದು ಹೇಳಿದರು

ಜೆಪಿ ಮ್ಯೂಸಿಕ್ ವತಿಯಿಂದ ” ಜೆಸ್ಸಿ” ರಾಮ ರಾಮರೇ, , ಹಾಡುಗಳು ಹಿಟ್ ಆಗಿ ಗಮನ ಸೆಳೆದಿದೆ. ಜೊತೆಗೆ ಬೈರಾಗಿ ಸಿನಿಮಾದ ಹಾಡು ಕೂಡ ನಮ್ಮ ಸಂಸ್ಥೆಯಲ್ಲಿಯೇ ಇದೆ. ಕೈಗೆಟಕುವ ದರದಲ್ಲಿ ಸಿಕ್ಕರೆ ನಮ್ಮ ಕಂಪನಿಯ ಮೂಲಕ ಖರೀದಿ ಮಾಡಲಾಗುವುದು ಎಂದರು
ನಟನೆ ಮಾಡುವುದು ಕಷ್ಟ, ಡ್ಯಾನ್ಸ್ ಮಾಡಲು ಬರಲ್ಲ. ಆದರೂ ಇರಬೇಕು ಎನ್ನುವ ಕಾರಣದಿಂದ ಕಾರ್ತಿಕ್ ಬಿ.ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರರಂಗದ ಸುದೀರ್ಘ ಇತಿಹಾಸದಲ್ಲಿಮೊದಲ ಬಾರಿಗೆ ನೃತ್ಯ ನಿರ್ದೇಶಕನನ್ನು ಪರಿಚಯ ಮಾಡಿದ್ದೇನೆ ಎಂದು ಹೇಳಿದರು.

ಹಾಡು ಬರೆದಿರುವ ಪ್ರಮೋದ್ ಮರವಂತೆ, 6 ವರ್ಷದ ಚಿತ್ರ ಸಾಹಿತಿಯಾಗಿ ಇದುವರೆಗೂ ಬರೆದಿರುವ ಹಾಡುಗಳ ಪೈಕಿ ಅನೂಪ್ ಸೀಳಿನ್ ಅವರಿಗೆ ಹೆಚ್ಚು ಹಾಡು ಬರೆದಿದ್ದೇನೆ . ಸಂಗೀತದಲ್ಲಿ ವರ್ಜಿನಾಲಿಟಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವತ್ತಿಗೂ ಟ್ರೆಂಡಿ ಮ್ಯೂಸಿಕ್ ನೀಡುತ್ತಿದ್ದಾರೆ. ಕಾಲಪತ್ಥರ್ -2 ನಂತರ ಪ್ರೀತಿ ಅನ್ನೋ ದ್ಯಾವ್ರು ಕೂಡ ಪ್ರಮುಖ ಪಾತ್ರ ವಹಿಸಲಿದೆ. ಕನ್ನಡದ ಯಶಸ್ವಿ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಹೊಸ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು..

ಪ್ರೀತಿ ಎನ್ನುವುದನ್ನು ಸೌಂದರ್ಯ ದಲ್ಲಿ ಮಾತ್ರ ಅಲ್ಲ, ಬೆಂಗಳೂರನ್ನು ಜನ ಮಾಡಿರುವ ಮಾಲಿನ್ಯದ ಬಗ್ಗೆ ಹೇಳಿರುವ ಪ್ರಯತ್ನ ಇದು. ಕೆಲ ಸಮಯದಲ್ಲಿ ಬೈತ್ತಾರೆ. ಹೊಗಳುತ್ತಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಛಾಯಾಗ್ರಾಹಕ ಸುಜ್ಞಾನ್ ಮೂರ್ತಿ ಮಾತನಾಡಿ, ಸ್ಮಶಾನದಲ್ಲಿ ಶವ ಸುಡುವ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಹೇಳಿದ್ದನ್ನು ಎಲ್ಲವನ್ನೂ ನೀಡಿದ್ದಾರೆ ಎಂದರು
ಹಾಡಿನಲ್ಲಿ ಕಾಣಿಸಿಕೊಂಡ ಗೋಪಾಲ್ ಕೃಷ್ಣ, ನೃತ್ಯದಲ್ಲಿ ಭಾಗಿಯಾದ ನಿಧಿ, ಚರಣ್ ಸೇರಿದಂತೆ ಹಲವು ಭಾಗಿಯಾಗಿ ಸಂತಸ ಹಂಚಿಕೊಂಡರು.