ನೆನಪಿರಲಿ ಪ್ರೇಮ್ ಪುತ್ರಿ ಅಮೃತ ನಾಯಕಿಯಾಗಿ ಎಂಟ್ರಿ
ನೆನಪಿರಲಿ ಖ್ಯಾತಿಯ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ಬಣ್ಣದ ಜಗತ್ತಿಗೆ ಬಲಗಾಲಿರಿಸಿದ್ದಾರೆ. ಅಮೃತ ಪ್ರೇಮ್, ” ಟಗರು ಪಲ್ಯ ” ಚಿತ್ರದ ಮೂಲಕ ಚಿತ್ರರಂಗದಲ್ಲಿ ಅಪ್ಪನಂತೆ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಡಾಲಿ ಧನಂಜಯ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಉಮೇಶ್ ಕೆ.ಕೃಪಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾಲಿ ಧನಂಜಯ ಸ್ನೇಹಿತ ನಾಗಭೂಷಣ್ ನಾಯಕ.
ಅಮೃತ ಪ್ರೇಮ್ ಚೊಚ್ಚಲ ಬಾರಿಗೆ ಚಿತ್ರರಂಗ ಪ್ರವೇಶಿಸಿರುವ ” ಟಗರು ಪಲ್ಯ” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಮೊದಲನೋಟದಲ್ಲಿ ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಲಕ್ಷಣ ತೋರಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಉಮೇಶ್ ಕೆ.ಕೃಪ, ನಟ ಪ್ರೇಮ್ ಪುತ್ರಿ ಭೇಟಿಯಾಗಿ ಕಥೆ ಹೇಳಿದಾಗ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ಅಮೃತ ಪ್ರೇಮ್ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಕಳೆದ 20 ದಿನಗಳಿಂದ ಅವರಿಗೆ ವರ್ಕ್ ಶಾಪ್ ನೀಡಲಾಗ್ತಿದೆ. ಸದ್ಯದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ ಎನ್ನುವ ಮಾಹಿತಿ ನೀಡಿದ್ದಾರೆ. ವಾಸುಕಿ ವೈಭವ್ ಸಂಗೀತ , ಎಸ್. ಕೆ. ರಾವ್ ಕ್ಯಾಮೆರಾ ಚಿತ್ರಕ್ಕಿದೆ.
ಮಡಲಿಗೆ ಹಾಕಿದ್ದೇನೆ ಹರಸಿ
ಪುತ್ರಿ ಚಿತ್ರರಂಗ ಪ್ರವೇಶ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡ ನಟ ಪ್ರೇಮ್, ಮಗಳನ್ನು ನಾಡಿನ ಜನರ ಮಡಿಲಿಗೆ ಹಾಕಿದ್ದೇನೆ ಎಲ್ಲರೂ ಹರಸಿ ಎಂದಿದ್ದಾರೆ.
ನಟನಾಗಿ ಮಗಳು ಚಿತ್ರರಂಗಕ್ಕೆ ಬರುತ್ತಿರುವುದು ಖುಷಿ ಸಂಗತಿ. ಓದುವುದರಲ್ಲೂ ಡಿಸ್ಟಿಂಕ್ಷನ್, ಈಗ ನಟಿಯಾಗಿ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ದತೆ ನಡೆಸುತ್ತಿದ್ದಾಳೆಕನ್ನಡ ಜನತೆ ಆಕೆಗೆ ಪ್ರೀತಿ ಪ್ರೋತ್ಸಾಹ ನೀಡಿ ಬೆಳಸಬೇಕು ಎಂದಿದ್ದಾರೆ ನಟ ಪ್ರೇಮ್