ಭಾಷೆಯ ಗಡಿ ಇಲ್ಲ, ಪ್ರಕಾಶ್ ರೈ ಮಾದರಿ
ತೆಲುಗಿಗೆ ಹಾರಿದ ಯಶ್ ಶೆಟ್ಟಿ
ಕನ್ನಡದ ನಟರು ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಅದರ ಸಾಲಿಗೆ ಮತ್ತೊಬ್ಬ ನಟ ಸೇರ್ಪಡೆಯಾಗಿದ್ಧಾರೆ ಅವರÉೀ ನಟ ಯಶ್ ಶೆಟ್ಟಿ .ಸದ್ದಿಲ್ಲದೆ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಹಾಗಂತ ಕನ್ನಡದಲ್ಲಿ ಸಿನಿಮಾ ಇಲ್ಲ ಅಂತಲ್ಲ. ಕೈತುಂಬ ಕೆಲಸ ಇಟ್ಟುಕೊಂಡಿದ್ದಾರೆ.
ಯಶ್ ಪ್ರತಿಭೆ ಕಂಡ ತೆಲುಗು ನಿರ್ದೇಶಕ ಮುರುಳಿ ಕಿಶೋರ್ ಅಬ್ಬೂರ್ ನಿರ್ದೇಶನದ “ವಿನರೋ ಭಾಗ್ಯಮು ವಿಷ್ಣು ಕಥಾ” ಚಿತ್ರದಲ್ಲಿ ನೆಗೆಟೀವ್ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಶೆಟ್ಟಿ ಅಭಿನಯಕ್ಕೆ ತೆಲುಗು ಚಿತ್ರರಂಗದ ಮಂದಿ ಫಿದಾ ಆಗಿದ್ದಾರೆ. ತೆಲುಗಿನ ಚೊಚ್ಚಲ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಕಿರಣ್ ಅಬ್ಬಾವರಂ ಮತ್ತು ಕಾಶ್ಮೀರ ಪರದೇಶಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ಸಿನಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಯಶ್‍ಶೆಟ್ಟಿ, ನಾಯಕನಾಗಲಿ, ಖಳನಾಯಕನಾಗಲಿ ಅಥಾ ಪೋಷಕ ಪಾತ್ರವಾಗಲಿ ಯಾವುದೇ ಬೇಧ ಭಾವ ಇಲ್ಲ. ಬಹುಭಾಷಾ ನಟ ಪ್ರಕಾಶ್ ರೈ ನನಗೆ ಮಾದರಿ.ಅವರ ರೀತಿ ವಿಭಿನ್ನ ಪಾತ್ರ ಮಾಡುವ ಆಸೆ ಇದೆ. ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಇದೇ ಖಳನಾಯಕೂ ಆಗಿದ್ದೇನೆ ಎಂದರು.
ನಟನಿಗೆ ಭಾಷೆ, ಪ್ರಾದೇಶಿಕತೆಯ ಯಾವುದೇ ಗಡಿ ಇಲ್ಲ. ಉತ್ತಮ ಪಾತ್ರ ಸಿಕ್ಕರೆ ಅದಕ್ಕೆ ನ್ಯಾಯ ಒದಗಿಸುವುದಷ್ಟೇ ಕೆಲಸ. ತೆಲುಗಿನಲ್ಲಿ ಅವಕಾಶ ಸಿಕ್ಕಿರುದು ಅವಕಾಶಗಳ ಬಾಗಿಲು ತೆರೆದಿದೆ. ಅಲ್ಲಿ ಒಂದೆರಡು ಚಿತ್ರಗಳಿಂದಲೂ ಅವಕಾಶ ಹುಡುಕಿಕೊಂಡು ಬಂದಿದೆ. ತೆಲುಗಿನಲ್ಲಿ ಖಳನಟನ ಪಾತ್ರ. ಚಿತ್ರಕ್ಕೆ ಅನೇಕ ತಿರುವು ಕೊಡಲಿದೆ. ಕೆಲಸ ಮಾಡಲು ಖುಷಿ ಇದೆ. ಜೊತೆಗೆ ಕಲಿಕೆಗೂ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.
ಇನ್ನೂ ಕನ್ನಡದಲ್ಲಿ ಗೌಳಿ, ಒನ್ಸ್ ಅಪಾನ್ ಎ ಟೈಮ್ ಜಮಾಲಿಗುಡ್ಡ, ಪೆಪೆ, ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಥ ಪಾತ್ರ ಸಿಕ್ಕಿದೆ. ನಾನೇ ಅದೃಷ್ಠವಂತ ಎನ್ನುತ್ತಾರೆ ಯಶ್ ಶೆಟ್ಟಿ
ಅರ್ದಶತಕ ಬಾರಿಸಿದ ಯಶ್
ಕುಮರೇಶ್ ನಿರ್ದೇಶನದ “ನೂರೊಂದು ನೆನಪು” ಚಿತ್ರದ ಮೂಲಕ ಬಣ್ಣದ ಕೆರಿಯರ್ ಆರಂಭಿಸಿದ ನಟ ಯಶ್ ಶೆಟ್ಟಿ ಒಂದೊಂದೇ ಚಿತ್ರಗಳಲ್ಲಿ ನಟಿಸುತ್ತಾ ಚಿತ್ರರಂಗದ ನಿರ್ದೇಶಕರು,ನಿರ್ಮಾಪಕರ ಮನ ಗೆದ್ದಿದ್ದಾರೆ. ಇದೀಗ ಅವರ ಚಿತ್ರಗಳ ಸಂಖ್ಯೆ 50ರ ಗಡಿ ದಾಟಿದೆ.
ಈ ನಡುವೆ ತೆಲುಗಿನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗಿನಲ್ಲಿಯೂ ಮಿಂಚುವ ಭರವಸೆ ಮೂಡಿಸಿದ್ದಾರೆ.
good keep it up