'Oh Sundara Rakshasi', a film with a different storyline, is ready for release.

ವಿಭಿನ್ನ ಕಥಾ ಹಂದರದ ‘ಓ ಸುಂದರ ರಾಕ್ಷಸಿ’ ಚಿತ್ರ ಬಿಡುಗಡೆಗೆ ಸಿದ್ದ - CineNewsKannada.com

ವಿಭಿನ್ನ ಕಥಾ ಹಂದರದ ‘ಓ ಸುಂದರ ರಾಕ್ಷಸಿ’ ಚಿತ್ರ ಬಿಡುಗಡೆಗೆ ಸಿದ್ದ

ನಟನೆಯ ಜೊತೆಗೆ ನಿರ್ದೇಶನ, ಸಂಗೀತ ಸಂಯೋಜನೆ ಹಾಗೂ ಕಥೆಗಾರಿಕೆಯಲ್ಲಿ ಛಾಪು ಮೂಡಿಸಿರುವ ಶೇರಾಜ್ ಮೆಹದಿ, ‘ಓ ಸುಂದರ ರಾಕ್ಷಸಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಶೇರಾಜ್ ಮೆಹದಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸುರಿಂದರ್ ಕೌರ್ ನಿರ್ಮಿಸಿರುವ ಚಿತ್ರ ಫೆಬ್ರವರಿ 13ರಂದು ಬಿಡುಗಡೆಯಾಗಲಿದೆ.

ನಾಯಕ ಹಾಗೂ ನಿರ್ದೇಶಕ ಶೇರಾಜ್ ಮೆಹದಿ ಮಾತನಾಡಿ “ವರ್ಷಕ್ಕೆ ಒಮ್ಮೆ ಇಂತಹದೊಂದು ಸಿನಿಮಾ ಬರುತ್ತದೆ. ‘ಓ ಸುಂದರ ರಾಕ್ಷಸಿ’ ಅಂತಹ ಸಾಲಿಗೆ ಸೇರುವ ಚಿತ್ರ. ಕೃತಿ ವರ್ಮಾ, ವಿಹಾನ್ಸಿ ಹೆಗಡೆ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರೇಕ್ಷಕರಿಗೆ ಕ್ಷಣವೂ ಬೋರ್ ಆಗದಂತೆ ಚಿತ್ರಕಥೆ ಹೆಣೆಯಲಾಗಿದೆ. ಇದರಲ್ಲಿ ಅದ್ಭುತ ಟ್ವಿಸ್ಟ್‍ಗಳಿದ್ದು, ವಿಶೇಷವಾಗಿ ಮಹಿಳೆಯರಿಗೆ ಈ ಸಿನಿಮಾ ಹೆಚ್ಚು ಇಷ್ಟವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಥೆ ಮತ್ತು ಸಂಭಾಷಣೆಗಾರ ಭಾಷ್ಯಶ್ರೀ ಮಾತನಾಡಿ, “ಇಂದಿನ ಯುವತಿಯರು ಹೇಗಿರಬೇಕು ಎಂಬ ಪರಿಕಲ್ಪನೆಯ ಮೇಲೆ ಈ ಚಿತ್ರವನ್ನು ರೂಪಿಸಲಾಗಿದೆ. ಶೇರಾಜ್ ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಮ್ಯಾಜಿಕ್ ಮಾಡಿದ್ದಾರೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕರು ಪಾಸಿಟಿವ್ ಫೀಲ್‍ನ ಭಾವನೆಯೊಂದಿಗೆ ಬರುತ್ತಾರೆ” ಎಂದರು.

.”ಹುಡುಗಿಯರಿಗೆ ಮೋಸವಾದಾಗ ಸೌಂದರ್ಯವೇ ರಾಕ್ಷಸ ರೂಪ ತಾಳುತ್ತದೆ” ಎಂಬ ವಿಹಾನ್ಸಿ ಹೆಗಡೆ ಅವರ ಮಾತು ಚಿತ್ರದ ತಿರುಳನ್ನು ಸೂಚಿಸುತ್ತದೆ. ಸಮಾಜಕ್ಕೆ ಬಲವಾದ ಸಂದೇಶವನ್ನು ನೀಡುವ ಉದ್ದೇಶ ಹೊಂದಿರುವ ಸಿನಿಮಾ, ಮಹಿಳೆಯರು ಆತ್ಮವಿಶ್ವಾಸದಿಂದ ಹೇಗೆ ಬದುಕಬೇಕು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದೆ.

ಶೇರಾಜ್ ಮೆಹದಿ ಬಹುಮುಖ ಪ್ರದರ್ಶನ. ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮತ್ತು ಸಂಗೀತ ಸಂಯೋಜನೆಯನ್ನೂ ನಿರ್ವಹಿಸಿರುವುದು ಚಿತ್ರದ ಮೇಲೆ ಕುತೂಹಲ ಮೂಡಿಸಿದೆ. ಕೃತಿ ವರ್ಮಾ ಮತ್ತು ಸುಮನ್ ಅವರಂತಹ ಅನುಭವಿ ಕಲಾವಿದರ ಉಪಸ್ಥಿತಿ ಚಿತ್ರದ ತೂಕವನ್ನು ಹೆಚ್ಚಿಸಿದೆ.

ನೇಹಾ ದೇಶಪಾಂಡೆ, ತಮ್ಮಾರೆಡ್ಡಿ ಭಾರದ್ವಾಜ್ ಮುಂತಾದವರು ಚಿತ್ರದಲ್ಲಿದ್ದಾರೆ. ಪ್ರತಿ ನಿಮಿಷವೂ ಕುತೂಹಲ ಕೆರಳಿಸುವಂತಹ ‘ಟ್ವಿಸ್ಟ್’ಗಳು ಚಿತ್ರ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin